ಚಿತ್ರದುರ್ಗ: ನಗರ ಪ್ರದೇಶಗಳಲ್ಲಿ ಡೆಂೆ ಜ್ವರ ಪ್ರಕರಣಗಳ ಸಂಖ್ಯೆ ಹೆಚ್ಚಿದ ಹಿನ್ನೆಲೆಯಲ್ಲಿ ಲಾರ್ವಾ ಸಮೀಕ್ಷೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕೀ ಟ ಶಾಸ್ತ್ರಜ್ಞೆ ನಂದಿನಿಕಡಿ ಹೇಳಿದರು. ಜಿಲ್ಲಾಡಳಿತ,ಜಿಪಂ,ನಗರಸಭೆ ಮತ್ತು ಆರೋಗ್ಯ ಇಲಾಖೆಯಿಂದ ನಗರದ ವಾರ್ಡ್21ರಲ್ಲಿ ಮಂಗ ಳವಾರ ಏರ್ಪಡಿಸಿದ್ದ ಗುಂಪು ಸಭೆಯಲ್ಲಿ ಮಾತನಾಡಿದ ಅವರು,ಡೆಂೆ ನಿಯಂತ್ರಣಕ್ಕಾಗಿ ಮಂಗಳವಾರದಿಂದ 3 ದಿನಗಳ ಕಾಲ ಲಾ ರ್ವಾ ಸಮೀಕ್ಷೆ ನಡೆಸಲಾಗುವುದು. ನಗರದ 36 ವಾರ್ಡ್,3 ನಗರ ಆರೋಗ್ಯ ಕೇಂದ್ರಗಳಿಂದ 41117 ಮನೆಗಳಿಗೆ ಭೇಟಿ ನೀಡಿ ಸಮೀಕ್ಷೆ ಹಾಗೂ ಜ್ವರ ಪರೀಕ್ಷೆ ನಡೆಸಲಾಗುವುದು ಎಂದರು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಮಾತನಾಡಿ, ಮನೆ ಸುತ್ತ ಮುತ್ತ ಸ್ವಚ್ಛತೆಗೆ ಸಲಹೆ ನೀಡಿದರು. ಡೆಂೆ ಬಗ್ಗೆ ಆತಂಕ ಬೇಡ. ತೀವ್ರ ಜ್ವರ,ತಲೆನೋವು,ಕಣ್ಣಿನ ಹಿಂಭಾಗ ನೋವು,ಮೈಕೈ ನೋವು ಕಂಡು ಬಂದಲ್ಲಿ ಸ್ವಯಂ ಚಿಕಿತ್ಸೆಗೆ ಮುಂದಾಗದೆ ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆಯಬೇಕೆಂದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣಾನಾಯ್ಕಾ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಜಾನಕಿ, ಮಾರುತಿನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಯಶಸ್,ನಗರಸಭೆ ಆರೋಗ್ಯ ನಿರೀಕ್ಷಣಾಧಿಕಾರಿ ನಾಗರಾಜ್,ಆರೋಗ್ಯ ಇಲಾಖೆಯ ಆರೋಗ್ಯ ಸುರಕ್ಷತಾ ಧಿಕಾರಿ ಗಳಾದ ತಿಪ್ಪಮ್ಮ,ರೇಣುಕಾ,ಶೋಭಾ,ಶಿಲ್ಪಾ,ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ರಂಗಾರೆಡ್ಡಿ, ಮಲ್ಲಿಕಾರ್ಜುನ, ನಾಗರಾಜ್, ತಿಪ್ಪೇಸ್ವಾಮಿ, ಶ್ರೀನಿವಾಸ್,ಪ್ರಶಾಂತ್ ಮತ್ತಿತರರು ಇದ್ದರು.