ಜಿಲ್ಲೆ

ಡೆಂೆ ಸದ್ದು ಮಾಡಿದ್ರೆ ನೀವೇ ಹೊಣೆ

ಚಿತ್ರದುರ್ಗ: ಡೆಂೆ ನಿಯಂತ್ರಣಕ್ಕೆ ಜಿಲ್ಲಾದ್ಯಂತ ನಿರಂತರ ಲಾರ್ವಾ ಸಮೀಕ್ಷೆ ನಡೆಸಿ,ಸೊಳ್ಳೆ ಉತ್ಪತ್ತಿ ತಾಣ ನಾಶಪಡಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.
ಡಿಸಿ ಕಚೇರಿಯಲ್ಲಿ ಶನಿವಾರ ಡೆಂೆ ಜ್ವರ ನಿಯಂತ್ರಣ ಕ್ರಮಗಳ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು,ನೈರ್ಮಲ್ಯ ಕಾಪಾಡಲಜು ಚರಂಡಿಗಳನ್ನು ಸ್ವಚ್ಛಗೊಳಿಸಬೇಕು. ಗ್ರಾಪಂ,ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಡೆಂೆ ಪಾಸಿಟಿವ್ ಬಂದರೆ ಪಿಡಿಒ,ಸಂಬಂಧಿಸಿದ ಅಧಿಕಾರಿ ಗಳನ್ನು ಹೊಣೆ ಮಾಡಬೇಕು. ಇಲ್ಲವಾದಲ್ಲಿ ಯಾರೂ ಜವಾಬ್ದಾರಿಯಿಂದ ಕೆಲಸ ಮಾಡುವುದಿಲ್ಲವೆಂದರು. ಜಿಲ್ಲಾಸ್ಪತ್ರೆ ಒಳ ಹಾಗೂ ಹೊರ ಆ ವರಣ ಸ್ವಚ್ಛವಾಗಿರಬೇಕೆಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ ಅವರಿಗೆ ಸೂಚಿಸಿದರು. ಜಿಲ್ಲಾಸ್ಪತ್ರೆಯಲ್ಲಿ ಸ್ವಚ್ಛತೆ ಇಲ್ಲ ಎಂದು ಸಾಕಷ್ಟು ದೂರುಗಳಿವೆ. ನಗರಸಭೆ ಸಹಕಾರದೊಂದಿಗೆ ಸ್ವಚ್ಛತೆಗೆ ಕ್ರಮವಹಿಸಬೇಕೆಂದರು.
ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರು ಮಾತನಾಡಿ, ಡೆಂೆ ಪಾಸಿಟಿವ್ ಪ್ರಕರಣಗಳ ಸಂಖ್ಯೆಯಲ್ಲಿ ಕಳೆದ ವಾರ 3ನೇ ಸ್ಥಾನದಲ್ಲಿದ್ದ ಜಿಲ್ಲೆ ಈಗ 6ನೇ ಸ್ಥಾನದಲ್ಲಿದೆ. ಪ್ರಕರಣಗಳ ಸಂಖ್ಯೆ ಇನ್ನಷ್ಟು ನಿಯಂತ್ರಿಸಬೇಕು. ಈ ರೋಗ ನಿಯಂತ್ರಣಕ್ಕಾಗಿ ಸಾರ್ವಜನಿಕರ ಸಹಭಾಗಿತ್ವದ ಅಗತ್ಯವಿದೆ. ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕೆಂದರು. ನಿಗದಿತ ದರದಲ್ಲೇ ಡೆಂೆ ಆಗಬೇಕು. ತಾಲೂಕು ಆಸ್ಪತ್ರೆಗಳಲ್ಲಿ 10-15 ಹಾಸಿಗೆಗಳು ಮೀಸಲಿರಬೇಕು ಎಂದರು.
ಡಿಎಚ್‌ಒ ಡಾ.ಜಿ.ಪಿ.ರೇಣುಪ್ರಸಾದ್ ಮಾತನಾಡಿ, ಲಾರ್ವಾ ಸಮೀಕ್ಷೆ ನಡೆಸಿ, ಸೊಳ್ಳೆಗಳ ಉತ್ಪತ್ತಿಗಳ ತಾಣಗಳನ್ನು ನಾಶ ಪಡಿಸಲಾಗುತ್ತಿದೆ. ಚಿತ್ರ ದುರ್ಗ ನಗರ ಪ್ರದೇಶದಲ್ಲಿ ಗುರುತಿಸಿರುವ ಹಾಟ್‌ಸ್ಪಾಟ್ ಪ್ರದೇಶಗಳಲ್ಲಿ ನಿರಂತರ ಲಾರ್ವಾ ಸಮೀಕ್ಷೆ ನಡೆಸಿ,ನಿಯಂತ್ರಣ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಶಾಸಕ ಟಿ.ರಘುಮೂರ್ತಿ ಅವರು ಮಾತನಾಡಿ,ಕಳೆದ ವರ್ಷಕ್ಕೆ ಹೋಲಿಸಿದರೆ ಜಿಲ್ಲೆಯಲ್ಲಿ ಈ ಬಾರಿ ಡೆಂೆ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಶು ದ್ಧ ಕುಡಿಯುವ ನೀರು ಘಟಕಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು. ಕೆಟ್ಟಿರುವ ಆರ್‌ಒಗಳನ್ನು ತಕ್ಷಣ ದುರಸ್ತಿ ಮಾಡಿಸ ಬೇಕೆಂದ ರು. ಜಿಲ್ಲೆಯಲ್ಲಿ ಆರ್‌ಒ ಘಟಕಗಳ ಕಾರ‌್ಯನಿರ್ವಹಣೆ ಕುರಿತಂತೆ ವರದಿ ಸಲ್ಲಿಸಲು ಸಚಿವರು ನಿರ್ದೇಶಿಸಿದರು.
ಎಲ್ಲ ಮಾದರಿಯ ನೀರಿಗೂ ಒಂದೇ ರೀತಿಯ ಯಂತ್ರಗಳ ಅಳವಡಿಕೆಯಿಂದಾಗಿ ಶುದ್ಧ ಕುಡಿಯುವ ನೀರಿನ ಘಟಕಗಳು ಪದೆ ಪದೇ ದುರಸ್ತಿ ಗೆ ಬರುತ್ತಿವೆ. ನೀರಿನ ಮಾದರಿಗೆ ಅನುಗುಣವಾಗಿ ಹೊಸ ರೀತಿ ಯಂತ್ರಗಳನ್ನು ಅಳವಡಿಸ ಬೇಕೆಂದು ಶಾಸಕ ಕೆ.ಸಿ.ವೀರೇಂದ್ರಪಪ್ಪಿ ಸೂಚಿಸಿ ದರು.
ಜಿಪಂ ಸಿಇಒ ಎಸ್.ಜೆ.ಸೋಮಶೇಖರ್, ಎಡಿಸಿ ಬಿ.ಟಿ.ಕುಮಾರಸ್ವಾಮಿ,ಜಿಲ್ಲಾ ಆಶ್ರೀತ ರೋಗಗಳ ನಿಯಂತ್ರಣಾಧಿಕಾರಿ ಡಾ.ಎನ್.ಕಾಶಿ, ತಹಸೀಲ್ದಾರ್‌ಗಳು,ನೋಡೆಲ್ ಅಧಿಕಾರಿಗಳು,ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳಿದ್ದರು.

ಬೀದಿ ನಾಯಿಗಳ ಶಸ್ತ್ರ ಚಿಕಿತ್ಸೆಗೆ ಕೊಠಡಿ
ಜಿಲ್ಲೆಯಲ್ಲಿ ಬೀದಿ ನಾಯಿಗಳ ಹಾವಳಿ ಅಧಿಕವಾಗಿದ್ದು,ಹತೋಟಿ ಕ್ರಮಗಳನ್ನು ತೆಗೆದುಕೊಳ್ಳ ಬೇಕಿದೆ ಎಂದು ಶಾಸಕ ಕೆ.ಸಿ.ವೀರೇಂದ್ರಪಪ್ಪಿ ಹೇ ಳಿದರು. ನಾಯಿಗಳಿಗೆ ಶಸ್ತ್ರ ಚಿಕಿತ್ಸೆಗೆ ಸೂಕ್ತ ಮೂಲ ಸೌಕರ್ಯಗಳ ಕೊರತೆ ಇದೆ ಎಂದು ಅಧಿಕಾರಿಗಳು ಹೇಳಿದರು. ಚಳ್ಳಕೆರೆ ಸಮೀಪ ಕುರುಡಿ ಹಳ್ಳಿ ಸರ್ಕಾರಿ ಗೋ ಶಾಲೆ ಬಳಿ ಶಸ್ತ್ರ ಚಿಕಿತ್ಸಾ ಕೊಠಡಿ ಸ್ಥಾಪಿಸಲು ಎಸ್ಟಿಮೇಟ್ ಮಾಡಿಸುವಂತೆ ಸಚಿವರು ಹಾಗೂ ಶಾಸಕ ರಘುಮೂರ್ತಿ ಅಧಿಕಾರಿಗಳಿಗೆ ಸೂಚಿಸಿದರು.