ಚಿತ್ರದುರ್ಗ: ಜಿಲ್ಲೆಯಲ್ಲಿ ಡೆಂೆ ಜ್ವರ ನಿಯಂತ್ರಣದೆಡೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಡಿ.ಎಚ್.ಡಾ.ಜಿ.ಪಿ.ರೇಣುಪ್ರಸಾ ದ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳಿಗೆ ಹಮ್ಮಿಕೊಳ್ಳಲಾದ ಮಲೇರಿಯಾ ಮತ್ತು ಇತರೆ ಕೀಟಜನ್ಯ ರೋ ಗಗಳ ನಿಯಂತ್ರಣ ಕುರಿತಾದ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು,ಡೆಂೆ ಜ್ವರ ನಿಯಂತ್ರಣ ನಿಟ್ಟಿನಲ್ಲಿ ಸಾರ್ವಜನಿಕರ ಸಹಭಾಗಿತ್ವ ಅವಶ್ಯಕವಾಗಿದೆ.
ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಲಾರ್ವ ಸಮೀಕ್ಷೆ ನಡೆಸಲಾಗುತ್ತಿದೆ. ಪ್ರತಿ ಮನೆ,ಮನೆಗಳಿಗೂ ತೆರಳಿ ಸೊಳ್ಳೆಗಳ ನಿಯಂತ್ರಣದೆಡೆ ಜನರಿಗೆ ತಿಳಿ ಹೇಳಲಾಗುತ್ತಿದೆ. ಆದರೂ ಜನರು ಸೊಳ್ಳೆಗಳ ನಿಯಂತ್ರಣದೆಡೆ ಆಸಕ್ತಿ ತೋರಿಸುತ್ತಿಲ್ಲ.ಸೊಳ್ಳೆ ಕಚ್ಚುವುದರಿಂದ ಮಲೇರಿಯಾ,ಡೆಂೆ ಸೇರಿದಂತೆ ಹಲವು ರೋಗಗಳಿಗೆ ತುತ್ತಾಗಬೇಕಾಗುತ್ತದೆ. ಡೆಂೆ,ಮಲೇರಿಯಾದಂಥ ಪ್ರಕರಣಗಳು ಹೆಚ್ಚಾದ ಕೂಡಲೇ ಆರೋಗ್ಯ ಇಲಾಖೆ ಕಾರ್ಯ ವೈಖರಿ ಬಗ್ಗೆ ಎಲ್ಲರೂ ಪ್ರಶ್ನಿಸುತ್ತಾರೆ. ಆದರೆ ಇಲಾಖೆ ಹೇಳುವ ಮುಂಜಾಗ್ರತಾ ಕ್ರಮಗಳ ಪಾಲನೆ ಆಗುವು ದಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.
ಜಿಲ್ಲಾ ಕೀಟಶಾಸ್ತ್ರಜ್ಞೆ ನಂದಿನಿ ಕಡಿ ಸೊಳ್ಳೆಗಳ ನಿಯಂತ್ರಣ ಕ್ರಮಗಳ ಕುರಿತು ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಮನೆಯ ಸುತ್ತ ಮುತ್ತ ಸಣ್ಣ ತ್ಯಾಜ್ಯಗಳಲ್ಲೂ ನೀರು ನಿಲ್ಲದಂತೆ ಎಚ್ಚರ ವಹಿಸಬೇಕೆಂದರು. ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ದಿನೇಶ್ ಗೌಡಗೆರೆ ಮಾತನಾಡಿ,ಇಂತಹ ಕಾರ್ಯಗಾರಗಳನ್ನು ತಾಲೂಕು ಹಂತದಲ್ಲಿ ಏರ್ಪಡಿಸುವ ಮೂಲಕ ಅಲ್ಲಿಯ ಪತ್ರಕರ್ತರಲ್ಲೂ ಜಾಗೃತಿ ಮೂಡಿಸಬಹುದಾಗಿದೆ. ಇದಕ್ಕೆ ಸಂಘ ಸಹಕಾರ ನೀಡಲಿದೆ ಎಂದರು. ಆರೋಗ್ಯ ಇಲಾಖೆಯಿಂದ ಪತ್ರಕರ್ತರಿಗೆ ಉಚಿತ ಆರೋಗ್ಯ ತಪಾಸಣೆ ನಡೆಸುವಂತೆ ಡಿಎಚ್‌ಒಗೆ ಮನವಿ ಮಾಡಿದರು. ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣಾಧಿಕಾರಿ ಡಾ.ಎನ್. ಕಾಶಿ ಮಾತನಾಡಿದರು. ಜಿಲ್ಲಾ ವಾರ್ತಾಧಿಕಾರಿ ಎಂ.ಮಾರುತಿ ಮತ್ತಿತರರು ಇದ್ದರು.