ಜಿಲ್ಲೆ

ಡೆಂಘೆ ರೋಗ ಸ್ವಚ್ಛತೆಗೆ ಹೆಚ್ಚಿನ ಆದತೆ ನೀಡಿ:ಶಾಸಕ ಎಚ್.ಪಿ. ಸ್ವರೂಪ್ ಪ್ರಕಾಶ್ ಮನವಿ

Hassan - Mohan Kanthur

ಹಾಸನ: ಇತ್ತೀಚೆಗೆ ಎಲ್ಲಾ ಕಡೆಗಳಲ್ಲಿ ಹೆಚ್ಚಾಗಿರುವ ಡೆಂೆ ಜ್ವರದಿಂದ ಕಾಪಾಡಿಕೊಳ್ಳಲು ಜನತೆ ಎಚ್ಚೆತ್ತುಕೊಂಡು ಸ್ವಚ್ಛತೆಗೆ ಹೆಚ್ಚಿನ ಆದತೆ ಕೊಡಬೇಕು. ಯಾವ ಸ್ಥಳದಲ್ಲೂ ನೀರು ನಿಲ್ಲದಂತೆ ನಿಗಾವಹಿಸಿ ಕಸವನ್ನು ಕೂಡ ಎಲ್ಲೆಂದರಲ್ಲಿ ಎಸೆಯದೆ, ಕಸ ವಿಲೇವಾರಿ ಮಾಡುವ ವಾಹನಕ್ಕೆ ಹಾಕಬೇಕು ಎಂದು ಸ್ಥಳೀಯ ಶಾಸಕ ಎಚ್.ಪಿ. ಸ್ವರೂಪ್ ಪ್ರಕಾಶ್ ಮನವಿ ಮಾಡಿದರು.
ತಾಲೂಕಿನ ನಿಟ್ಟೂರು ಗ್ರಾಮದಲ್ಲಿ ಪಂಚಾಯಿತಿ ವತಿಯಿಂದ ಬುಧವಾರ ಆಯೋಜಿಸಿದ್ದ ಗ್ರಾಮ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕಳೆದ ಎರಡು ವರ್ಷಗಳ ಹಿಂದೆ ಕೊರೊನಾ ಬಂದು ಹೋಯಿತು. ಈಗ ಡೆಂೆ ಹೆಚ್ಚು ಕಂಡು ಬರುತ್ತಿದೆ. ನಾವುಗಳೇ ಎಚ್ಚೆತ್ತುಕೊಂಡು ಸ್ವಚ್ಛತೆ ಕಾಪಾಡಿ, ನೀರು ನಿಲ್ಲದಂತೆ ಕ್ರಮ ಅನುಸರಿಸಬೇಕು ಎಂದು ಸಲಹೆ ನೀಡಿದರು.
ಮನೆ ಅಂಗಡಿ,ಮುಂಗಟ್ಟು ನಡೆಸುವವರೂ ಸ್ವಚ್ಛತೆಗೆ ಗಮನ ನೀಡಬೇಕು. ಇನ್ನು ಕೋಳಿ ಕಸವನ್ನು ಎಲ್ಲೆಂದರಲ್ಲಿ ಎಸೆಯದೇ ನಿಗದಿತ ಆಪೇ ವಾಹನದಲ್ಲಿ ಹಾಕಿದರೆ ಉತ್ತಮ ಎಂದರು. ಕಸವನ್ನು ನಗರ ಸಭೆಯವರು ಕೊಂಡೊಯ್ಯುವ ಬಗ್ಗೆ ಮಾತನಾಡಲಾಗುವುದು. ಪಕ್ಷಾತೀತವಾಗಿ ಅಭಿವೃದ್ಧಿ ಕೆಲಸ ಮಾಡಿಕೊಂಡು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ವಿಧಾನಭಾ ಕ್ಷೇತ್ರ ವ್ಯಾಪ್ತಿಗೆ ಒಳಪಡುವ ಸಾರ್ವಜನಿಕರೊಂದಿಗೆ ಕುಂದು ಕೊರತೆ ಬಗ್ಗೆ ಮಾಹಿತಿ ಪಡೆದು ಸಮಸ್ಯೆಗಳನ್ನು ಶೀಘ್ರ ಪರಿಹರಿಸುವಂತೆ ಸ್ಥಳದಲ್ಲೇ ಅಧಿಕಾರಿಗಳಿಗೆ ಸೂಚಿಸಿದರು.
ನಂತರ ಯಲಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಪುರದಮ್ಮ ದೇವಾಲಯದ ಆವರಣದಲ್ಲಿ ಬುಧವಾರ ಪುರದಮ್ಮ ದೇವಾಲಯದ ಸುತ್ತಮುತ್ತಲಿನ ಕನ್ವೆನ್ಷನ್ ಹಾಲ್ ಹಾಗೂ ಅಂಗಡಿ ಮಳಿಗೆಗಳ ಘನ ತ್ಯಾಜ್ಯ ವಿಲೇವಾರಿ ಬಗ್ಗೆ ಸಭೆಯಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿ ತ್ಯಾಜ್ಯವನ್ನು ಉತ್ತಮ ರೀತಿಯಲ್ಲಿ ವಿಲೇವಾರಿ ಮಾಡುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಗಿರೀಶ್, ತಾ.ಪಂ. ಯೋಜನಾಧಿಕಾರಿ ಮೋಹನ್, ನಿಟ್ಟೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದ್ರಶೇಖರ್, ಉಪಾಧ್ಯಕ್ಷ ಯೋಗೀಶ್, ಸದಸ್ಯರಾದ ನಟೇಶ, ಹರೀಶ್, ಮಧು ಇತರರು ಇದ್ದರು.