ಆಳಂದ ತಾಲೂಕಿನ ನರೋಣಾದ ಹೊಂಡವೊAದಕ್ಕೆ ಗುಪ್ಪಿ ಮೀನುಗಳನ್ನು ಬಿಡುತ್ತಿರುವುದು. ಮಾನಪ್ಪ ಕಟ್ಟಿಮನಿ, ಸುಶೀಲಕುಮಾರ ಅಂಬೂರೆ ಇತರರಿದ್ದರು. 
ಜಿಲ್ಲೆ

ಡೆಂಘೆ ಮಹಾಮಾರಿ ನಿಯಂತ್ರಣಕ್ಕೆ ಶ್ರಮ

ಆಳಂದ: ಸೊಳ್ಳೆ ಕಾಟದಿಂದಲೇ ಡೆಂಘೆ, ಮಲೇರಿಯಾ ಸೇರಿ ವಿವಿಧ ಸಾಂಕ್ರಾಮಿಕ ರೋಗಗಳು ಹರಡುತ್ತಿವೆ. ಹೀಗಾಗಿ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶ ಪಡಿಸುವ ಕೆಲಸ ನಡೆಯುತ್ತಿದೆ ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ.ಸುಶೀಲಕುಮಾರ ಅಂಬೂರೆ ತಿಳಿಸಿದರು.

ನರೋಣಾ, ನಿಂಬರ್ಗಾ, ಯಳಸಂಗಿ ಗ್ರಾಮಗಳಲ್ಲಿ ನೀರಿನ ಹೊಂಡ, ಬಾವಿ ಹಾಗೂ ಕಲ್ಲಿನ ಕ್ವಾರಿಗಳಲ್ಲಿ ಸೋಮವಾರ ಗುಪ್ಪಿ ಮೀನುಗಳನು ಬಿಟ್ಟು ಮಾತನಾಡಿದ ಅವರು, ಈಗಾಗಲೇ ಜಿಲ್ಲೆಯ ವಿವಿಧೆಡೆ ಗುಪ್ಪಿ ಮೀನುಗಳಿಂದ ಸೊಳ್ಳೆಗಳ ಲಾರ್ವಾ ನಿಯಂತ್ರಿಸುವ ಪ್ರಯೋಗ ಯಶಸ್ವಿಯಾಗಿದೆ. ಹೀಗಾಗಿ ಇದೀಗ ಆಳಂದ ತಾಲೂಕಿನಲ್ಲಿ ಮೀನುಗಳನ್ನು ಬಿಡಲಾಗುತ್ತಿದೆ ಎಂದರು.

ಗಾತ್ರದಲ್ಲಿ ಚಿಕ್ಕದಾಗಿರುವ ಗುಪ್ಪಿ ಮೀನುಗಳು ಲಾರ್ವಾಗಳನ್ನು (ಸೊಳ್ಳೆಯ ಮೊಟ್ಟೆ) ತಿಂದು ಬದುಕುವ ಜಲಚರಗಳಾಗಿವೆ. ಗುಪ್ಪಿ ಮೀನುಗಳು ಹೇರಳವಾಗಿ ಬೆಳೆಯುವ ನೀರಿನಲ್ಲಿ ಸೊಳ್ಳೆಗಳ ಲಾರ್ವಾ ಇರಲು ಸಾಧ್ಯವಿಲ್ಲ. ಇದರಿಂದ ಸೊಳ್ಳೆಗಳ ಉತ್ಪತ್ತಿ ಗಣನೀಯವಾಗಿ ನಿಯಂತ್ರಣವಾಗುತ್ತದೆ ಎಂದು ಹೇಳಿದರು.

ತಾಪಂ ಇಒ ಮಾನಪ್ಪ ಕಟ್ಟಿಮನಿ, ಆರೋಗ್ಯ ಸಿಬ್ಬಂದಿ ಎಂಡಿ ಮಶಾಕ್, ಕಾಳಪ್ಪ ಧಂಗಾಪೂರ, ಅಶೋಕ ನರೋಣಾ ಇತರರಿದ್ದರು.