ಜಿಲ್ಲೆ

ಡೆಂಘೆ ನಿಯಂತ್ರಣಕ್ಕೆ ರಸ್ತೆ ಬದಿ ಅಂಗಡಿಗಳ ತೆರವುಗೊಳಿಸಿದ ನಗರಸಭೆ ಕಾರ್ಯಾಚರಣೆ

ಹಾಸನ: ನಗರದಲ್ಲಿ ಡೆಂೆ ಪ್ರಕರಣವು ದಿನೇದಿನೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಶುಕ್ರವಾರ ರಸ್ತೆ ಬದಿ ಇರುವ ಗೂಡಂಗಡಿಗಳನ್ನು ಜೆಸಿಬಿ ಹಾಗೂ ನಗರಸಭೆ ಸಿಬ್ಬಂದಿ ಶುಕ್ರವಾರ ಬೆಳಿಗ್ಗೆ ತೆರವುಗೊಳಿಸಿದರು.
ನಗರಸಭೆ ಆರೋಗ್ಯ ನಿರೀಕ್ಷಕ ಪ್ರಸಾದ್ ಮಾಧ್ಯಮದೊಂದಿಗೆ ಮಾತನಾಡಿ, ಡೆಂೆ ಜ್ವರ ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳ ಮೌಖಿಕ ಆದೇಶ ಹಾಗೂ ನಗರಸಭೆ ಆಯಕ್ತರ ಆದೇಶದಂತೆ ನಗರಸಭೆಯ ಎಲ್ಲಾ ಆರೋಗ್ಯ ನಿರೀಕ್ಷಕರು ಜಂಟಿ ಕಾರ್ಯಾಚರಣೆಯಲ್ಲಿ ತೊಡಗಿದ್ದೇವೆ. ಡೆಂೆ ಮುಖ್ಯವಾಗಿ ಸೊಳ್ಳೆಗಳಿಂದ ಹರಡುತ್ತಿದೆ. ಅನೈರ್ಮಲ್ಯದ ಸ್ಥಳದ ರಸ್ತೆ ಬದಿ ವ್ಯಾಪಾರ ಮಾಡುತ್ತಿರುವ ಅಂಗಡಿಗಳನ್ನು ತೆರವುಗೊಳಿಸಲಾಗುತ್ತಿದೆ ಎಂದು ತಿಳಿಸಿದರು.
ಬೀದಿ ಬದಿ ವ್ಯಾಪಾರ ಮಾಡುವ ಮಾಲೀಕರು ಸಂಜೆ ಅಂಗಡಿ ಸುತ್ತಲೂ ಶುಚಿಗೊಳಿಸಿ ಹೋಗಬೇಕು ಎನ್ನುವ ಸೂಚನೆ ಇದೆ. ಆದರೆ ವ್ಯಾಪರಸ್ತರು ಯಾರೊಬ್ಬರು ಈ ಸೂಚನೆ ಪಾಲಿಸುತ್ತಿಲ್ಲ. ಇದರಿಂದ ಪಾದಚಾರಿಗಳು ಓಡಾಟಕ್ಕೆ ತೊಂದರೆ ಉಂಟಾಗಿದೆ. ಬಿ.ಎಂ. ರಸ್ತೆ ಬಳಿ ಉದ್ದಕ್ಕೂ ಎಳನೀರು ವ್ಯಾಪಾರ ಮಾಡುವವರು ಅದರ ಚಿಪ್ಪನ್ನು ಹಾಗೆಯೇ ಬಿಟ್ಟು ಹೋಗುತ್ತಿದ್ದಾರೆ. ಇದರಿಂದ ಚಿಪ್ಪು ಒಳಗೆ ಮಳೆ ನೀರು ಸೇರಿ ಸೊಳ್ಳೆಗಳು ಸಂತಾನ ಉತ್ಪತ್ತಿ ಮಾಡುತ್ತಿರುವುದು ಕಂಡು ಬಂದ ಹಿನ್ನಲೆಯಲ್ಲಿ ಮತ್ತು ಸಾರ್ವಜನಿಕರ ಸುರಕ್ಷಿತೆ ದೃಷ್ಟಿಯಿಂದ ಬೀದಿ ಬದಿ ವ್ಯಾಪಾರಸ್ಥರ ತೆರವು ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಯಾವೆಲ್ಲ ಸ್ಥಳದಲ್ಲಿ ಸ್ವಚ್ಛತೆ ಇರುವುದಿಲ್ಲವೋ ಆ ಸ್ಥಳದಲ್ಲಿ ವ್ಯಾಪಾರಸ್ಥರಿಗೆ ಮನವರಿಕೆ ಮಾಡಿಕೊಡಲು ಕಾರ್ಯಾಚರಣೆ ಮಾಡಲಾಗುತ್ತಿದೆ. ಬಿ.ಎಂ. ರಸ್ತೆ ಬದಿ ಅನೇಕರು ಜಾಗ ಅತಿಕ್ರಮಣ ಮಾಡಿದ್ದಾರೆ. ಆ ಸ್ಥಳ ತೆರವು ಮಾಡಲಾಗುತ್ತಿದೆ. ಮುಖ್ಯವಾಗಿ ರಸ್ತೆ ಬದಿ ಮೀನು ವ್ಯಾಪಾರ ಮಾಡುತ್ತಿದ್ದಾರೆ. ಅಲ್ಲಿ ಗಬ್ಬು ವಾಸನೆ ಬರುತ್ತಿದೆ. ಇದರಿಂದ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡಬೇಕಾಗಿತ್ತು. ಸುಚಿತ್ವಕ್ಕೆ ಆದ್ಯತೆ ಕೊಡಬೇಕೆಂದು ಅನೇಕ ಬಾರಿ ಅವರಿಗೆ ತಿಳಿಸಲಾಗಿದ್ದರೂ ಉಳಿದ ಮೀನನ್ನು ರೆಫ್ರಿಜರೇಟರ್ ಒಳಗೆ ಇಟ್ಟು ಕೊಳೆತ ಮೀನನ್ನು ಮಾರಾಟ ಮಾಡುತ್ತಿದ್ದಾರೆ. ಇದರಿಂದ ಮನುಷ್ಯರ ಆರೋಗ್ಯದ ಮೇಲೆ ದುಷ್ಪಾರಿಣಾಮ ಬೀರುತ್ತಿತ್ತು. ಇನ್ನು ಸತ್ತ ಹೆಣಗಳ ಮೇಲೆ ಹಾಕುವ ಕೆಮಿಕಲ್ ಅನ್ನು ಮೀನುಗಳ ಮೇಲೆ ಹಾಕಲಾಗುತ್ತಿದೆ ಎನ್ನುವ ದೂರಿನ ಮೇರೆಗೆ ಆ ಮೀನನ್ನು ಸಂಗ್ರಹಸಿ ಪರೀಕ್ಷೆಗೆ ಕಳಹಿಸಲಾಗಿದೆ ಎಂದು ಮಾಹಿತಿ ನೀಡಿದರು.
ಆರೋಗ್ಯ ನಿರೀಕ್ಷಕರಾದ ಮಂಜುನಾಥ್ ಮಾತನಾಡಿ, ಎಳನೀರು ಬುರುಡೆ, ಟೈರು ಅಂಗಡಿಗಳು, ಮೀನು ಅಂಗಡಿಗಳು ಸೇರಿದಂತೆ ಇತರೆ ಗೂಡಂಗಡಿಗಳನ್ನು ತೆರವುಗೊಳಿಸಲಾಗುತ್ತಿದೆ. ಮನೆಗಳಲ್ಲಿಯೂ ಕೂಡ ಎರಡು ದಿನಕ್ಕಿಂತ ಹೆಚ್ಚಿನ ದಿನ ನೀರು ಶೇಖರಣೆ ಮಾಡದೇ ಹೊಸ ನೀರನ್ನು ಬಳಸಬೇಕು. ಡೆಂೆ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಸಾರ್ವಜನಿಕರು ನಮ್ಮ ಜತೆ ಸಹಕರಿಸಿದರೆ ಡೆಂೆ ನಿಯಂತ್ರಣಕ್ಕೆ ಅನುಕೂಲವಾಗಲಿದೆ ಎಂದು ಮನವಿ ಮಾಡಿದರು.
ಯಾರು ಸ್ವಚ್ಛತೆ ಕಾಪಾಡಿಕೊಂಡಿಲ್ಲವೋ ಅಂತಹ ಅಂಗಡಿಗಳನ್ನು ತೆರವು ಮಾಡುತ್ತಿದ್ದೇವೆ. ಇನ್ನು ಮುಖ್ಯ ರಸ್ತೆಯಲ್ಲಿ ನಗರದ ಸೌಂದರ್ಯಕ್ಕೆ ದಕ್ಕೆ ಉಂಟು ಮಾಡುವ ಅಂಗಡಿಗಳನ್ನು ಖಾಲಿ ಮಾಡಿಸಲಾಗುತ್ತಿದೆ. ಶೆಡ್ ಮತ್ತು ಟೈರ್ ಅಂಗಡಿಗಳಲ್ಲಿ ಹಳೆಯ ಟೈರುಗಳನ್ನು ಶೇಖರಿಸಿದ್ದಾರೋ ಅವರಿಗೆ ಸೂಚನೆ ಕೊಡಲಾಗಿದೆ. ತೆರವು ಮಾಡದಿದ್ದರೇ ನಾವೇ ಖುದ್ದಾಗಿ ಹೋಗಿ ತೆರವು ಕಾರ್ಯಚರಣೆ ಮಾಡಲಾಗುವುದು ಎಂದು ಎಚ್ಚರಿಸಿದರು.