ಚಿಕ್ಕಮಗಳೂರು ಡಿಸಿ ಮೀನಾ ನಾಗರಾಜ್‌ ಅವರಿಗೆ ಮನವಿ ಸಲ್ಲಿಸಿದ ಜಿಲ್ಲಾ ನಾಗರೀಕ ಮತ್ತು ರೈತ ಹೋರಾಟ ಸಮಿತಿ ಪದಾಧಿಕಾರಿಗಳು ಸರ್ಕಾರದ ನಿರ್ಣಯದಂತೆ ಡೀಮ್ಡ್ ಫಾರೆಸ್ಟ್ ಪಟ್ಟಿ ಪರಿಷ್ಕರಿಸಲು ಗ್ರಾ ಮಲೆಕ್ಕಿಗರು, ರಾಜಸ್ವ ನಿರೀಕ್ಷರಿಗೆ ಸೂಚನೆ ನೀಡುವ ಜೊತೆಗೆ ಅರಣ್ಯ ವ್ಯವಸ್ಥಾಪನಾ ಅಧಿಕಾರಿಗಳು ಕಂ ದಾಯ ಇಲಾಖೆ ಅಧಿಕಾರಿಗಳಿಂದ ಸಹಕಾರ ಪಡೆಯುವಂತೆ ನಿರ್ದೇಶಿಸಬೇಕು ಒತ್ತಾಯಿಸಿದರು. ಎಸ್‌.ವಿಜಯಕುಮಾರ್‌, ರಘು ಉಪಸ್ಥಿತರಿದ್ದರು. 
ಜಿಲ್ಲೆ

ಡೀಮ್ಡ್‌ ಫಾರೆಸ್ಟ್‌ ಪಟ್ಟಿ ಪರಿಷ್ಕರಿಸಲು ಮನವಿ

ನಿತ್ಯಾನಂದ ಎಸ್.ಎನ್.

ಚಿಕ್ಕಮಗಳೂರು: ಸರ್ಕಾರದ ನಿರ್ಣಯದಂತೆ ಡೀಮ್ಡ್ ಫಾರೆಸ್ಟ್ ಪಟ್ಟಿ ಪರಿಷ್ಕರಿಸಲು ಗ್ರಾ ಮಲೆಕ್ಕಿಗರು, ರಾಜಸ್ವ ನಿರೀಕ್ಷರಿಗೆ ಸೂಚನೆ ನೀಡುವ ಜೊತೆಗೆ ಅರಣ್ಯ ವ್ಯವಸ್ಥಾಪನಾ ಅಧಿಕಾರಿಗಳು ಕಂದಾಯ ಇಲಾಖೆ ಅಧಿಕಾರಿಗಳಿಂದ ಸಹಕಾರ ಪಡೆಯುವಂತೆ ನಿರ್ದೇಶಿಸಬೇಕು ಎಂದು ಜಿಲ್ಲಾ ನಾಗರೀಕ ಮತ್ತು ರೈತ ಹೋರಾಟ ಸಮಿತಿ ಪದಾಧಿಕಾರಿಗಳು ಶುಕ್ರವಾರ ಜಿಲ್ಲಾಧಿಕಾರಿ ಮೀನಾ ನಾಗರಾಜ್‌ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ವೇದಿಕೆ ಜಿಲ್ಲಾಧ್ಯಕ್ಷ ಎಸ್.ವಿಜಯ್‌ಕುಮಾರ್ ಮಾತನಾಡಿ, ಅರಣ್ಯ, ಕಂದಾಯ, ಉಸ್ತು ವಾರಿ ಸಚಿವರು ಸೇರಿದಂತೆ ಶಾಸಕರು, ರಾಜ್ಯಮಟ್ಟದ ಅರಣ್ಯ, ಕಂದಾಯ ಅಧಿಕಾರಿಗಳು, ಜಿಲ್ಲಾಧಿಕಾರಿ ಸಮ್ಮುಖದಲ್ಲಿ ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಹೋರಾಟ ಸಮಿತಿ, ಬೆಳೆಗಾರರ ಒಕ್ಕೂಟದ ಪದಾಧಿಕಾ ರಿಗಳೊಂದಿಗೆ ಚರ್ಚಿಸಿ ತೀರ್ಮಾನಿಸಿದಂತೆ ನಿರ್ಣಯವನ್ನು ಜಿಲ್ಲೆಯಲ್ಲಿ ಕೈಗೊಳ್ಳಬೇಕು ಎಂದರು.

ಜಿಲ್ಲೆಯ ಡೀಮ್ಡ್ ಫಾರೆಸ್ಟ್ ವ್ಯಾಪ್ತಿಯಲ್ಲಿ ಬರುವ ರೈತರ, ಸಾಉವಳಿದಾರರ, ೯೪ಸಿ ಅರ್ಜಿದಾರರ, ಗ್ರಾಮ, ಸ್ಮಶಾನ, ಶಾಲೆ, ಅಂಗನವಾಡಿಯAಥಹ ಸರ್ಕಾರಿ ಅವಶ್ಯಕತೆಗಳ ಜೊತೆಗೆ ನಿವೇಶನ ರಹಿತರಿಗೆ ನಿವೇಶನ ನೀಡಲು ಬೇಕಾಗುವಷ್ಟು ಭೂಮಿಗಳನ್ನು ಗುರುತಿಸಿ, ಡೀಮ್ಡ್ ಫಾರೆಸ್ಟ್ನಿಂದ ಕೈಬಿಟ್ಟು ಹೊಸಪಟ್ಟಿ ಸಲ್ಲಿಸಲು ಹಾಗೂ ಅರಣ್ಯ ವ್ಯವಸ್ಥಾಪಕಾರಿಗಳಿಗೆ ಪ್ರಸ್ತಾವನೆಯಲ್ಲಿರುವ ಎಲ್ಲಾ ಅಗತ್ಯತೆ ಭೂಮಿ ಗುರುತಿಸಲು ಕಂದಾಯ ಇಲಾಖೆ ನಿಯೋಜಿಸಿ ನಿಖರವಾದ ಕಂದಾಯ ಬಳಕೆಯ ಭೂಮಿಗಳನ್ನು ಗುರುತಿಸಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ರಘು ಹಾಜರಿದ್ದರು.