ರಾಜ್ಯಪಾಲರ ಬಗ್ಗೆ ಏಕವಚನದಲ್ಲಿ ನಿಂದಿಸಿದ ಎಂಎಲï‌ಸಿ ಐವಾನ್ ಡಿಸೋಜಾ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಬೇಕೆಂದು ಆಗ್ರಹಿಸಿ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಕಾರ್ಯಕರ್ತರು ಯಾದಗಿರಿ ನೇತಾಜಿ ಸರ್ಕಲ್‌ನಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು. ನಿಂಗಪ್ಪ ಹತ್ತಿಮನಿ, ಶ್ರೀಧರ ರಾಯಚೂರು, ರಾಜಶೇಖರ ಕಾಡನೊರ, ನಗರಸಭೆ ಸದಸ್ಯೆ ಪ್ರಭಾವತಿ ಕಲಾಲ್, ರಮೇಶ ದೊಡ್ಡಮನಿ ಇತರರಿದ್ದರು. 
ಜಿಲ್ಲೆ

ಡಿಸೋಜಾ ವಿರುದ್ಧ ದೂರು ದಾಖಲಿಸಿ

ಹರೀಶ ಕುಲಕರ್ಣಿ

ಯಾದಗಿರಿ: ರಾಜ್ಯಪಾಲರ ವಿರುದ್ಧ ಏಕವಚನದಲ್ಲಿ ನಿಂದಿಸಿರುವ ಎಂಎಲï‌ಸಿ ಐವಾನ್ ಡಿಸೋಜಾ ವಿರೋಧ ಸ್ವಯಂ ಪ್ರೇರಿತ ದೂರು ದಾಖಲಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಯುವ ಮೋರ್ಚಾ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ನಗರದ ನೇತಾಜಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ನಗರ ಮಂಡಲ ಅಧ್ಯಕ್ಷ ನಿಂಗಪ್ಪ ಹತ್ತಿಮನಿ, ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿದ್ದನ್ನೇ ಮಹಾ ಅಪರಾಧ ಎಂದು ಬಿಂಬಿಸಿ ಮಾತಾಡಿದ್ದು ತಪ್ಪು, ಬಾಂಗ್ಲಾ ದೇಶದ ಮಾದರಿಯಲ್ಲಿ ದಾಳಿ ಮಾಡಬೇಕಾಗುತ್ತದೆ ಎಂಬ ಭಂಡತನ ಮಾತನಾಡಿದ ಅವರ ವಿರುದ್ಧ ಪೊಲೀಸ್ ಮಹಾ ನಿರ್ದೇಶಕರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.

ಯುವ ಮೋರ್ಚಾ ಜಿ¯್ಲÁಧ್ಯP್ಷÀ ಶ್ರೀಧರ ರಾಯಚೂರು ಮಾತನಾಡಿ, ರಾಜ್ಯಪಾಲರ ವಿರುದ್ಧ ಕಾಂಗ್ರೆಸ್‌ನವರು ಮಾಡಿದ ಪ್ರತಿಭಟನೆ ಪ್ರಾಯೋಜಿತವಾಗಿದೆ ಎಂದು ದೂರಿದರು. ಗ್ರಾಮೀಣ ಮಂಡಲ ಅಧ್ಯP್ಷÀ ರಾಜಶೇಖರ್, ನಗರಸಭೆ ಸದಸ್ಯೆ ಪ್ರಭಾವತಿ ಕಲಾಲ್, ರಮೇಶ್ ದೊಡ್ಡಮನಿ, ಮಹೇಶ ಕುರುಕುಬಂಳ, ಎಂಡಿ ವಾಹಬ್, ಮಂಜುನಾಥ ಜಡಿ, ಮೋನೇಶ ಬೆಳಿಗೆರ, ಮಂಜುನಾಥ ಗುತ್ತಿಗೆದಾರ, ಚಂದ್ರಶೇಖರ, ಶರಣು ಗೌಡ ಅಲಿಪುರ, ಗುರುಲಿಂಗ ಜಿಕೇರಿ, ಸಾಬು ಚಂಡ್ರಕಿ, ಅಜೇಯ ಮಡ್ಡಿ, ಅನಿಲ್ ಕರಾಟೆ, ಬಸ್ಸು ಬಳಿಚಕ್ರ ಇತರರಿದ್ದರು.