ಕಲಬುರಗಿ: ಕೃಷಿ ಉತ್ಪನ್ನ ಮಾರುಕಟ್ಟೆ, ತರಕಾರಿ ಮಾರುಕಟ್ಟೆಯಲ್ಲಿನ ಸಾಲು ಸಾಲು ಸಮಸ್ಯೆಗಳ ಕುರಿತು ಈಗಾಗಲೇ ನಿರಂತರ ಸಭೆ ನಡೆಸುತ್ತಿದ್ದು, ಡಿಸೆಂಬರ್ ಎರಡು ಅಥವಾ ಮೂರನೇ ವಾರದಲ್ಲಿ ಜಿಲ್ಲೆಯ ಎಲ್ಲ ವರ್ತಕರು ಸಭೆ ನಡೆಸಿ, ಸಮಸ್ಯೆಗೆ ಪರಿಹಾರ ಒದಗಿಸಲಾಗುವುದು ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಮಂಡಳಿ ನಿರ್ದೇಶಕ ಗಂಗಾಧರ ಸ್ವಾಮಿ ಭರವಸೆ ನೀಡಿದರು.
ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಿAದ ನಗರದ ಚೇಂಬರ್ ಆಫ್ ಕಾಮರ್ಸ್ನ ಎಸ್.ಎಸ್.ಪಾಟೀಲ್ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಎಪಿಎಂಸಿ ವರ್ತಕರೊಂದಿಗಿನ ಸಂವಾದದಲ್ಲಿ ಮಾತನಾಡಿ, ಎಪಿಎಂಸಿ ಶುಚಿತ್ವ ಇಡುವುದು ಎಲ್ಲರ ಕರ್ತವ್ಯ. ವಿದ್ಯುತ್ ದರದಲ್ಲಿ ವ್ಯತ್ಯಾಸವಾಗಿದ್ದು, ಜೆಸ್ಕಾಂನೊAದಿಗೆ ಚರ್ಚಿಸುತ್ತೇನೆ ಎಂದರು.
ಕಲಬುರಗಿ ಎಪಿಎಂಸಿ ಗೇಟ್‌ಗಳ ಬಳಕೆ ಸದ್ಬಳಕೆ ಆಗುತ್ತಿಲ್ಲ. ಅಗತ್ಯಕ್ಕೆ ತಕ್ಕಂತೆ ಗೇಟ್ ನಿರ್ಮಿಸಲಾಗುವುದು. ಸಂರಕ್ಷಣೆ ಕುರಿತು ಜಿಲ್ಲಾಧಿಕಾರಿ, ಪೊಲೀಸ್ ಕಮೀಷನರ್ ಗಮನಕ್ಕೆ ತರಲಾಗುವುದು. ಪರವಾನಗಿಗಳು ದುರ್ಬಳಕೆ ಹಿನ್ನೆಲೆಯಲ್ಲಿ ತಡೆದಿದ್ದು, ಅಗತ್ಯವಿದ್ದಲ್ಲಿ ಮಾಡಿಕೊಡಲಾಗುತ್ತದೆ. ಎಪಿಎಂಸಿಯಲ್ಲಿನ ಕಟ್ಟಡ ವರ್ತಕರ ಸ್ವಂತ ಆಸ್ತಿಯಲ್ಲ. ಅದು ಎಪಿಎಂಸಿ ಸ್ವತ್ತು. ನಿಯಮದಂತೆ ಹೋಗಬೇಕು. ನೀರಿನ ಸಮಸ್ಯೆ ನೀಗಿಸಲು ಮಳೆ ನೀರು ಕೋಯ್ಲು ಯೋಜನೆಗೆ ಪ್ರಯತ್ನಿಸುತ್ತೇವೆ ಎಂದು ಭರವಸೆ ನೀಡಿದರು.
ಕೆಕೆಸಿಸಿಐ ಅಧ್ಯಕ್ಷ ಶಶಿಕಾಂತ ಪಾಟೀಲ್ ಮಾತನಾಡಿ, ಗಂಜ್ ಸಮಸ್ಯೆಗಳಿಗೆ ಮುಕ್ತಿ ನೀಡಬೇಕು ಎಂದು ಮನವಿ ಮಾಡಿದರು. ಕೆಕೆಸಿಸಿಐ ಮಾಜಿ ಅಧ್ಯಕ್ಷ ಮಾನಕರ್, ಕಾರ್ಯದರ್ಶಿ ಮಂಜುನಾಥ ಜೇವರ್ಗಿ, ಶ್ರೀಮಂತ ಉದನೂರ, ಚಂದ್ರಶೇಖರ ಕೋಬಾಳ, ಶಿವರಾಜ ಇಂಗಿನಶೆಟ್ಟಿ ಇತರರಿದ್ದರು.