ಚಿಕ್ಕಮಗಳೂರಿನ ಹಿರೇಮಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ೨೦೨೪-೨೫ನೇ ಸಾಲಿನ ಸರ್ವ ಸರ್ವಸದಸ್ಯರ ವಾರ್ಷಿಕ ಮಹಾಸಭೆ ನಡೆಯಿತು. ಎಚ್.ಜೆ.ಪರಮೇಶ್ವರ್, ಕೆ.ಎಂ.ಲೋಹಿತ್, ಎಂ.ಜಗದೀಶ್, ನೀಲಶೆಟ್ಟಿ, ಎಚ್.ವಿ.ಅಶೋಕ್ ಮತ್ತಿತರರಿದ್ದರು. 
ಜಿಲ್ಲೆ

ಡಿಸಿಸಿ ಬ್ಯಾಂಕ್ ಚುನಾವಣೆ ಬಳಿಕ ಹೊಸ ಸಾಲಕ್ಕೆ ಮಂಜೂರಾತಿ

ಚಿಕ್ಕಮಗಳೂರು: ರೈತಾಪಿ ವರ್ಗಕ್ಕೆ ಹೆಚ್ಚುವರಿ ಸಾಲಸೌಲಭ್ಯ ಒದಗಿಸಲು ಸಂಘವು ಬದ್ಧವಾಗಿದೆ. ಡಿಸಿಸಿ ಬ್ಯಾಂಕ್ ಚುನಾವಣೆ ಬಳಿಕ ಹೊಸ ಸಾಲಕ್ಕೆ ಮಂಜೂರಾತಿ ನೀಡಲಾಗುವುದು ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಜೆ.ಪರಮೇಶ್ವರ್ ತಿಳಿಸಿದರು.

ನಗರದ ಹಿರೇಮಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ೨೦೨೪-೨೫ನೇ ಸಾಲಿನ ಸರ್ವ ಸರ್ವಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾಲ ಮರುಪಾವತಿ ವಿಚಾರದಲ್ಲೂ ಆಡಳಿತ ಮಂಡಳಿ ಸಂಪೂರ್ಣವಾಗಿ ತೊಡಗಿಸಿಕೊಂಡಿದೆ ಎಂದರು.

ಮುಂಬರುವ ದಿನಗಳಲ್ಲಿ ಹೊಸ, ಹೆಚ್ಚುವರಿ ಸಾಲ ಒದಗಿಸುವ ಹಾಗೂ ಬ್ಯಾಂಕ್ ಮಾದರಿಯಂತೆ ಆಡಳಿತ ಮಂಡಳಿ ತೀರ್ಮಾನಿಸಿ ಸಂಘವನ್ನು ಮುಂಚೂಣಿಗೆ ತರಲು ಪ್ರಯತ್ನಿಸಲಾಗುವುದು. ರೈತರು ಸಹ ಸಹಕಾರ ಸಂಘದಲ್ಲಿ ಠೇವಣಿ ಇರಿಸುವ ಜೊತೆಗೆ ವಹಿವಾಟು ನಡೆಸಿದರೆ ಶೈಕ್ಷಣಿಕ ಪ್ರಗತಿ ಸಾಧ್ಯವಾಗಲಿದೆ ಎಂದು ತಿಳಿಸಿದರು.

ಪ್ರಸಕ್ತ ಸಾಲಿನಲ್ಲಿ ಸಂಘವು ೫.೯೭ ಲಕ್ಷ ರೂ.ಗಳ ನಿವ್ವಳ ಲಾಭಗಳಿಸುವ ಮೂಲಕ ಆರ್ಥಿಕವಾಗಿ ಗಟ್ಟಿಯಾಗಿದೆ. ಸಭೆಯಲ್ಲಿ ಹಲವಾರು ಚರ್ಚೆಗಳು ನಡೆದಿದ್ದು ಹಾಲಿ, ಮಾಜಿ ಅಧ್ಯಕ್ಷರು, ಸದಸ್ಯರ ಸಲಹೆ, ಸಹಕಾರಗಳನ್ನು ಪಡೆದುಕೊಳ್ಳಲಾಗಿದೆ. ಮುಂದಿನ ದಿನದಲ್ಲಿ ಸಂಘದ ಬೆಳವಣಿಗೆಗೆ ನಿರಂತರ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.

ಒಟ್ಟಾರೆ ಕೃಷಿ ಪತ್ತಿನ ಸಹಕಾರಿ ಸದಸ್ಯರಿಗೆ ೮ ಕೋಟಿ ರೂ.ಗಳ ಸಾಲಸೌಲಭ್ಯ ಒದಗಿಸಿ ಶೇ. ೯೦ರಷ್ಟುವ ವಸೂಲಾತಿ ಕಾರ್ಯವು ಪೂರ್ಣಗೊಂಡಿದೆ. ಮುಂದೆÀ ರೈತರ ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಬೆಳವಣಿಗೆಗೆ ಆಡಳಿತ ಮಂಡಳಿ ಸದಾಕಾಲ ಸ್ಪಂದಿಸಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಕೆ.ಎಂ.ಲೋಹಿತೇಶ್, ನಿರ್ದೇಶಕರಾದ ಎಂ.ಜಗದೀಶ್, ನೀಲಶೆಟ್ಟಿ, ಎಚ್.ವಿ.ಅಶೋಕ್, ಕೆ.ಆರ್.ಆನಂದರಾಜ್‌ಅರಸ್, ಎಲ್.ಜೆ.ಮೋಹನ್, ತಮ್ಮೇಗೌಡ, ಎಂ.ಡಿ. ಚಂದ್ರಕಲಾ, ಯು.ಈ.ಪ್ರೇಮ, ಎಚ್.ಜೆ.ಸಚಿನ್, ಮೇಲ್ವಿಚಾರಕ ಪವನ್‌ಕುಮಾರ್, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಿ.ಜಿ.ಆಶ್ರಿಕ್ ಮತ್ತಿತರರಿದ್ದರು.