ಚಿತ್ರದುರ್ಗ: ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಜಿಲ್ಲಾಸಹಕಾರ ಬ್ಯಾಂಕ್‌ನ 8 ಹೊಸ ಶಾಖೆಗಳನ್ನು ಆರಂಭಿಸ ಲಾಗುವುದೆಂದು ಜಿಲ್ಲಾ ಉಸ್ತುವಾರಿ ಸಚಿವ,ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಿ.ಸುಧಾಕರ್ ಹೇಳಿದರು. ನಗರದ ಶ್ರೀರಾಮಕಲ್ಯಾಣಮಂಟಪದಲ್ಲಿ ಶನಿವಾರ ಡಿಸಿಸಿ ಬ್ಯಾಂಕ್ 60ನೇ ವಾರ್ಷಿಕ ಸರ್ವ ಸದಸ್ಯರ ಸಭೆ ಉದ್ಘಾಟಿಸಿ ಮಾತನಾಡಿದ ಅವರು,2024 ಜನವರಿಯೊಳಗೆ ಹೊಸ ಶಾಖೆಗಳು ಪ್ರಾರಂಭವಾಗಲಿವೆ ಎಂದರು.
ಕಳೆದ ಹಣಕಾಸು ಸಾಲಿನಲ್ಲಿ ಬ್ಯಾಂಕ್ 7.28 ಕೋಟಿ ರೂ.ನಿವ್ವಳ ಲಾಭಗಳಿಸಿದೆ. 509 ಕೋಟಿ ರೂ.ಠೇವಣಿ ಸಂಗ್ರಹಿಸಿದೆ. 56803 ರೈತರಿಗೆ ಶೂನ್ಯಬಡ್ಡಿ ದರದಲ್ಲಿ 463 ಕೋಟಿ ರೂ.ಅಲ್ಪಾವಧಿ ಬೆಳೆ ಸಾಲ ವಿತರಿಸಿದೆ. ಈಪೈಕಿ ಪರಿಶಿಷ್ಟ ಜಾತಿಯ 7053 ರೈತರಿಗೆ 43.93 ಕೋಟಿ ರೂ.ಮತ್ತು ಪರಿಶಿಷ್ಟ ಪಂಗಡದ 7654 ರೈತರಿಗೆ 63.68 ಕೋಟಿ ರೂ.ಸಾಲ ವಿತರಿ ಸಲಾಗಿದೆ.ಶೇ.3 ಬಡ್ಡಿದರದಲ್ಲಿ 1360 ರೈತ ರಿಗೆ 87.25 ಕೋಟಿ ರೂ.ಮಧ್ಯಮಾವಧಿ ಕೃಷಿ ಹಾಗೂ 232.86 ಲಕ್ಷ ರೂ. ಕೃಷಿಯೇತರ ಸಾಲ ವಿತರಿಸಲಾಗಿದೆ.
ಪ್ರಸಕ್ತ ಸಾಲಿನಲ್ಲಿ 10 ಸಾವಿರ ಹೊಸ ರೈತರಿಗೆ 48 ಕೋಟಿ ರೂ.ಬೆಳೆ,812 ರೈತರಿಗೆ 76 ಕೋಟಿ ರೂ.ಮಧ್ಯಮಾವಧಿ,210 ಲಕ್ಷ ರೂ. ಕೃಷಿಯೇತರ ಸಾಲ ವಿತರಣೆ ಹಾಗೂ 560 ಕೋಟಿ ರೂ.ಠೇವಣಿ ಸಂಗ್ರಹ ಗುರಿ ಇದೆ. ಠೇವಣಿಗಳ ಮೇಲೆ ಇತರೆ ಬ್ಯಾಂಕ್‌ಗಳಿಗಿಂತ ಶೇ.0.50 ಹೆಚ್ಚಿಗೆ ಬಡ್ಡಿ ಕೊಡಲಾಗುತ್ತಿದೆ ಎಂದರು.
ವ್ಯವಸ್ಥಾಪಕ ನಿರ್ದೇಶಕ ಇಲ್ಯಾಸ್‌ಉಲ್ಲಾಷರೀಪ್ ಮಾತನಾಡಿ,ಜಿಲ್ಲೆಗಡಿ ಭಾಗದ ರೈತರ ಅನುಕೂಲಕ್ಕಾಗಿ,ಪ್ಯಾಕ್ಸ್‌ಗಳಲ್ಲಿ ಬೆಳೆ ಸಾಲ ವಿತರಿಸಲು,ರೈತರಿಗೆ ನಾಮಿನಲ್ ಮೆಂಬರ್‌ಶಿಫ್ ನೀಡಬಹುದೆಂದರು.
ಶಾಸಕ ಟಿ.ರಘುಮೂರ್ತಿ,ಉಪಾಧ್ಯಕ್ಷ ಎಚ್.ಬಿ.ಮಂಜುನಾಥ್,ನಿರ್ದೇಶಕರಾದ ಟಿ.ಮಹಾಂತೇಶ್,ಮಾಧುರಿಗಿರಿ,ಎಚ್.ಟಿ.ನಾಗಿ ರೆಡ್ಡಿ,ಪಿ.ರಾಜು,ಎಂ.ನಿಶಾನಿ ಜಯಣ್ಣ,ಡಿ.ಎಸ್.ಶಶಿಧರ್,ಸಿ.ವೀರಭದ್ರಬಾಬು,ಪಿ.ವಿನೋದಸ್ವಾಮಿ,ಕೆ.ಜಗಣ್ಣ,ರಘು ರಾಮರೆಡ್ಡಿ,ಶಿವ ಲಿ ಂಗಪ್ಪ,ಎಚ್.ಎಂ.ದ್ಯಾ ಮಣ್ಣ,ಸಹಕಾರ ಸಂಘಗಳ ಉಪನಿಬಂಧಕ ಟಿ.ಮಧುಶ್ರೀನಿವಾಸ್,ಉಪ ಪ್ರಧಾನ ವ್ಯವಸ್ಥಾಪಕ ಬಿ.ಎಂ.ಮಂಜು ನಾಥ್,ವೀರೇಶ್‌ಬಾಬು ಇತರರು ಇದ್ದರು.
ಬಾಕ್ಸ್.
ರಾಷ್ಟ್ರೀಯ ಗುರಿ
ಚಿತ್ರದುರ್ಗ ಡಿಸಿಸಿ ಬ್ಯಾಂಕ್ ರಾಷ್ಟ್ರಮಟ್ಟದಲ್ಲಿ ಉತ್ತಮಬ್ಯಾಂಕ್ ಎಂಬ ಮನ್ನಣೆ ಪಡೆದಿದೆ.2021-22ನೇ ಸಾಲಿನ ಬ್ಯಾಂಕಿನ ಸಾಧನೆ ಗುರುತಿಸಿ ಮುಂಬಯಿ ರಾಜ್ಯಸಹಕಾರ ಬ್ಯಾಂಕ್‌ಗಳ ರಾಷ್ಟ್ರೀಯ ಒಕ್ಕೂಟ(ಎನ್‌ಎಎಫ್‌ಎಸ್‌ಸಿಒಬಿ)ದೇಶದ ಡಿಸಿಸಿ ಬ್ಯಾಂಕ್‌ಗಳಲ್ಲೇ 2ನೇ ಉತ್ತಮ ಬ್ಯಾಂಕೆಂದು ಘೋಷಿಸಿದೆ. ಸೆ.26ರಂದು ಜಯಪುರದಲ್ಲಿ ಸೆ.26ರಂದು ಏರ್ಪಡಿಸಿರುವ ಎನ್‌ಎಫ್‌ಎಸ್ ಸಿಒಬಿ ಸಮಾರಂಭ ದಲ್ಲಿ ಬ್ಯಾಂಕಿನ ಅಧ್ಯಕ್ಷ ಡಿ.ಸುಧಾಕರ್ ಮತ್ತಿತರರು ಪ್ರಶಸ್ತಿ ಫಲಕ,ಪ್ರಮಾಣ ಪತ್ರ ಸ್ವೀಕರಿಸಲಿದ್ದಾರೆ.
ಕೋಟ್
ಬ್ಯಾಂಕ್ ವರ್ಷದಿಂದ,ವರ್ಷಕ್ಕೆ ಅಭಿವೃದ್ಧಿಯತ್ತ ಸಾಗುತ್ತಿದೆ. ಕಳೆದ 15 ವರ್ಷಗಳಿಂದ ಈಚೆಗೆ ಸತತವಾಗಿ ಲಾಭವನ್ನುಗಳಿಸುತ್ತಿದೆ. ರೈತರು ಕೃಷಿ ಸಾಲವನ್ನು ಸದುಪಯೋಗ ಪಡಿಸಿಕೊಳ್ಳ ಬೇಕು.
ಟಿ.ರಘುಮೂರ್ತಿ,ಚಳ್ಳಕೆರೆ ಶಾಸಕ,ಡಿಸಿಸಿ ಬ್ಯಾಂಕ್ ನಿರ್ದೇಶಕ.
ಬಾಕ್ಸ್,
ಎಲ್ಲೆಲ್ಲಿ ಹೊಸ ಶಾಖೆಗಳು?
ತಾಲೂಕು-ಯಾವ ಗ್ರಾಮಗಳಲ್ಲಿ ಹೊಸ ಶಾಖೆ
ಹೊಳಲ್ಕೆರೆ-ಎಚ್‌ಡಿಪುರ,ರಾಮಗಿರಿ,ಸಾಸಲುಹಳ್ಳ(ತರಳಬಾಳು)
ಚಳ್ಳಕೆರೆ-ತಳಕು
ಹೊಸದುರ್ಗ-ಮಾಡದಕೆರೆ,ಹೊಸದುರ್ಗರೋಡ್(ಮಲ್ಲಪ್ಪನಹಳ್ಳಿ)
ಹಿರಿಯೂರು-ಧರ್ಮಪುರ,ಐಮಂಗಲ