ಜಿಲ್ಲೆ

ಡಿಸಿಗೆ ಗೋಮಾಳ ಜಾಗದ ದಾಖಲೆ ಸಲ್ಲಿಕೆ

ಬಾಲಮುರಳಿಕೃಷ್ಣ

ಕೊಳ್ಳೇಗಾಲ: ತಾಲೂಕಿನ ಸರಗೂರು ಗ್ರಾಮದ ಕಾವೇರಿ ನದಿ ತೀರದಲ್ಲಿರುವ ಸ.ನಂ. 215ಬಿ ಸ್ನಾನ ಘಟ್ಟ (ಗೋಮಾಳ) ಜಾಗಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸೋಮವಾರ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರಿಗೆ ಗ್ರಾಮದ ಆದಿ ಕರ್ನಾಟಕ ಜನಾಂಗದ ಯಜಮಾನರು ಸಲ್ಲಿಸಿದರು.

ಚಾಮರಾಜನಗರ ಜಿಲ್ಲಾಡಳಿತ ಭವನಕ್ಕೆ ಗ್ರಾಮದ ಆದಿ ಕರ್ನಾಟಕ ಜನಾಂಗದ ಯಜಮಾನರಾದ ಶಿವಶಂಕರ್, ಮಲ್ಲು, ಶಿವಕುಮಾರ್, ರಂಗಸ್ವಾಮಿ, ಪಾಳ್ಯ ಪರಮೇಶ್, ಹರಳೆ ಸುರೇಶ್, ಧನಗೆರೆ ಮಹದೇವ ಇತರರು ಭೇಟಿ ಮಾಡಿ, ಸ್ನಾನಘಟ್ಟ ಾಗಕ್ಕೆ ಸೇರಿದ ಸ್ಕೆಚ್, ಆರ್‌ಆರ್‌ಪಿಆರ್, ಆರ್.ಎಸ್. ಆರ್, ಅಡಂಗಲ್, ಕೈಬರಹ ಆರ್‌ಟಿಸಿ ಹಾಗೂ ಒತ್ತುವರಿ ಸ್ಥಳದ ಮಾಹಿತಿ ಸೇರಿದಂತೆ ಇತರೆ ಮೂಲ ದಾಖಲಾತಿಗಳನ್ನು ಜಿಲ್ಲಾಧಿಕಾರಿಗಳಿಗೆ ನೀಡಿದರು.

ಬಳಿಕ ಜಿಲ್ಲಾಧಿಕಾರಿ ಶಿಲ್ಪಾನಾಗ್ ಮಾತನಾಡಿ, ಸರಗೂರು ಸ್ನಾನಘಟ ಜಾಗದ ಸರ್ವೆ ವರದಿ ತಲುಪಿದ್ದು, ಮುಂದೆ ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ಕರೆಯಲಾಗುತ್ತದೆ. ಸಭೆಯ ನಂತರ ಎಸಿ ನೀಡುವ ವರದಿ ಆಧರಿಸಿ ಕ್ರಮವಹಿಸುವುದಾಗಿ ತಿಳಿಸಿದರು.