ಜಿಲ್ಲೆ

ಡಿಸಿ ವೃದ್ಧೆಯ ಕಾಲಿಗೆರಗಿದ್ದೇಕೆ..?

ಕಾರವಾರ: ತೊಂಭತ್ತರ ಇಳಿ ವಯಸ್ಸಿನಲ್ಲೂ ಹೋಟೆಲ್ ನಡೆಸುತ್ತಿರುವ ವೃದ್ಧೆಯ ವೃತ್ತಿನಿಷ್ಠೆ ಕಂಡ ಉತ್ತರ ಕನ್ನಡ ಜಿಲ್ಲಾಧಿಕಾರಿ ಆಕೆಯ ಕಾಲಿಗೆರಗಿದ ಘಟನೆ ಬುಧವಾರ ಗ್ರಾಮ‌ ವಾಸ್ತವ್ಯದಲ್ಲಿ ನಡೆಯಿತು.

ಮುಡಗೇರಿ ಗ್ರಾಮದ ಅಂಗಡಿಯಲ್ಲಿ ಡಿಸಿ ಮುಲ್ಲೈ ಮುಗಿಲನ್ ಗ್ರಾಮ ವಾಸ್ತವ್ಯ ನಡೆಸಿ, ಜನರ ಸಮಸ್ಯೆ ಆಲಿಸಿದರು‌. ನಂತರ ಗ್ರಾನದ ವಿಶಿಷ್ಟ ಹೋಟೆಲ್ ಬಗ್ಗೆ ಜನ ವಿವರಿಸಿದರು‌.

ತಕ್ಷಣ ಸ್ಥಳಕ್ಕೆ ತೆರಳಿದ ಜಿಲ್ಲಾಧಿಕಾರಿ ರುಕ್ಮಾಬಾಯಿ ಶೇಟಿಯಾ ಅವರ ಹೋಟೆಲ್ ಗೆ ತೆರಳಿ, ಶಂಕರ‌ ಪೊಳೆ, ಬೂಂದಿ ಲಾಡು, ರವೆ ಲಾಡು ಶೇವು ಮುಂತಾದ ತಿಂಡಿಗಳನ್ನು ಸಾಮಾನ್ಯರಂತೆ ಕುಳಿತು ಸವಿದರು‌. ನಂತರ ಅಜ್ಜಿಯ ಕಾಲಿಗೆರಗಿ ನಮಸ್ಕರಿಸಿದರು. ಸನ್ಮಾನ ಮಾಡಿದರು.

ಸ್ವಾತಂತ್ರ್ಯಾ ಪೂರ್ವದ ಹೋಟೆಲ್: ರುಕ್ಮಾಬಾಯಿ ಕುಟುಂಬ 125 ವರ್ಷದಿಂದ ಮುಡಗೇರಿಯಲ್ಲಿ ಹೋಟೆಲ್ ನಡೆಸುತ್ತಿದೆ. ಅವರ ವೃತ್ತಿ ನಿಷ್ಠೆ ಅವಿಸ್ಮರಣೀಯ ಎಂದು ಡಿಸಿ ಮುಲ್ಲೈ ಮುಗಿಲನ್ ತಮ್ಮ ಅಧಿಕೃತ ಜಾಲತಾಣದಲ್ಲೂ ಬರೆದುಕೊಂಡಿದ್ದಾರೆ.