ಜಿಲ್ಲೆ

ಡಿಸಿ ಕಚೇರಿ ಎದುರು ಪ್ರತಿಭಟನೆ ನಾಳೆ

ರಮೇಶ ಮೇಳಕುಂದಾ

ಕಲಬುರಗಿ: ಚಂದ್ರಶೇಖರ ಪಾಟೀಲï ಕ್ರೀಡಾಂಗಣದಲ್ಲಿ ವಿಶ್ವ ಯೋಗ ದಿನಾಚರಣೆ ಸಂದರ್ಭದಲ್ಲಿ ಆರ್‌ಎಸ್‌ಎಸ್ ಸಾಹಿತ್ಯ ಮತ್ತು ಕಮ್ಯುನಿಷ್ಟ ವಿರೋಧಿ ಪುಸ್ತಕ ಮಾರಾಟಕ್ಕೆ ಅನುಮತಿ ನೀಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಸಿಪಿಐ(ಎಂ) ಪಕ್ಷದಿಂದ ಸೋಮವಾರ ಜಿ¯್ಲÁಧಿಕಾರಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಪP್ಷÀದ ನಗರ ಕಾರ್ಯದರ್ಶಿ ಎಂ.ಬಿ.ಸಜ್ಜನ್ ಹೇಳಿದರು. ಸೀತಾರಾಮ ಗೊಯಲ್ ಅವರ ದಿಗ್ಬಂಧನದಲ್ಲಿ ಹಿಂದು ಸಮಾಜ, ಆಚಾರ್ಯ ಖಂಡೇರಾವ್ ಕುಲಕರ್ಣಿ ರಚಿತ ಹೈದರಾಬಾದ್ ವಿಮೋಚನೆಯ ವೀರಗಾಥೆ ಕುಟುಂಬ ಪ್ರಮೋಧನ, ಸಂಘ ಶಕ್ತಿ ಮತ್ತು ಇನ್ನಿತರ ಆರ್‌ಎಸ್‌ಎಸ್ ಪ್ರಚಾರದ ಪುಸ್ತಕಗಳನ್ನು ಮಾರಾಟ ಮಾಡುವುದು ಕಂಡುಬAದಿದೆ. ಈ ಪುಸ್ತಕ ಮಳಿಗೆಯ ಉz್ದೆÃಶ ಮತಭ್ರಾಂತಿ ಮತ್ತು ಮತ ಮೌಲ್ಯ ಬಿತ್ತುವುದಾಗಿದೆ. ಈ ಪುಸ್ತಕ ಮಳಿಗೆಯಲ್ಲಿ ಬೆಲೆ ಏರಿಕೆ, ನಿರುದ್ಯೋಗ, ಪೇಪರ್‌ಲೀಕ್, ಮಹಿಳೆಯರ ಮತ್ತು ದಲಿತರ ಮೇಲಿನ ಶೋಷಣೆಯಂತಹ ಸಮಕಾಲೀನ ವಿಷಯಗಳ ಕುರಿತ ಯಾವುದೇ ಸಾಹಿತ್ಯ ಇರಲಿಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಚಂದ್ರಶೇಖರ ಪಾಟೀಲï ಕ್ರೀಡಾಂಗಣದಲ್ಲಿ ನಡೆದ ಜನವಿರೋಧಿ ಪುಸ್ತಕ ಮಳಿಗೆಗೆ ಅನುಮತಿ ನೀಡಿರುವವರ ವಿರುದ್ಧ ಶಿಸ್ತಿನ ಕ್ರಮಕ್ಕಾಗಿ ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪP್ಷÀದ ಮುಖಂಡರು, ಕಾರ್ಯಕರ್ತರು, ಸಾರ್ವಜನಿಕರು ಭಾಗವಹಿಸಬೇಕು ಎಂದು ಮನವಿ ಮಾಡಿದರು. ನಾಗಯ್ಯ ಸ್ವಾಮಿ, ಯಶ್ವಂತರಾವ ಪಾಟೀಲ್, ಬಾಬು ಸಿಂದಗಿ, ನಾಗಪ್ಪ ರಾಯಚೂರಕರ್ ಇದ್ದರು.