ಜಿಲ್ಲೆ

ಡಿಸಿ ಅವರಿಗೆ ಮಂತ್ರಾಕ್ಷತೆ ವಿತರಣೆ

ಚಿತ್ರದುರ್ಗ: ಅಯೋಧ್ಯೆ ಶ್ರೀರಾಮಮಂದಿರ ಲೋಕಾರ್ಪಣೆ ಅಂಗವಾಗಿ ಗುರುವಾರ ಚಿತ್ರದುರ್ಗದ ಜಿಲ್ಲಾಧಿಕಾರಿ ಜಿ.ಆರ್.ಜೆ.ದಿವ್ಯಾಪ್ರಭು ಅವರಿಗೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಸೇವಾ ಟ್ರಸ್ಟ್‌ನಿಂದ ಮಂತ್ರಾಕ್ಷತೆ ವಿತರಿಸಲಾಯಿತು.

ಬಿಜೆಪಿ ಯುವಮುಖಂಡ ಜಿ.ಎಸ್.ಅನಿತ್‌ಕುಮಾರ್, ಆರ್‌ಎಸ್‌ಎಸ್‌ನ ದೇವರಾಜ್ ಕೋಟ್ಲಾ, ವಿಶ್ವ ಹಿಂದು ಪರಿಷತ್‌ನ ರುದ್ರೇಶ್, ಅಯ್ಯಪ್ಪಸ್ವಾಮಿ ಸೇವಾ ಟ್ರಸ್ಟ್‌ನ ಅಧ್ಯಕ್ಷ ಶರಣ್‌ಕುಮಾರ್, ಎಸ್.ಆರ್.ಲೇಪಾಕ್ಷಾ ಇದ್ದರು.