ಜಿಲ್ಲೆ

ಡಿವೈಡರ್‌ಗೆ ಕಾರು ಡಿಕ್ಕಿ,ಇಬ್ಬರ ಸಾವು

ಡಿ.ಪಿ.ನಾಗರಾಜ ಶ್ರೇಷ್ಠಿ

ಚಿತ್ರದುರ್ಗ: ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಕಾರು ಡಿಕ್ಕಿ ಹೊಡೆದು ಇಬ್ಬರ ಅಸು ನೀಗಿರುವ ಘಟನೆ ಹಿರಿಯೂರು ತಾಲೂಕು ಕಳವಿ ಬಾಗಿ ಬಳಿ ಮಂಗಳವಾರ ನಡೆದಿದೆ. ದುರ್ಘಟನೆಯಲ್ಲಿ ಮೃತರಾದವರನ್ನು ತುಮಕೂರು ಮೂಲದ ವಿಶಾಲಾಕ್ಷಮ್ಮ (75)ಹಾಗೂ ನಾಗರಾಜ ಶೆಟ್ಟಿ(55)ಎಂದು ಗುರುತಿಸಲಾಗಿದೆ. ನಾಗರಾಜಶೆಟ್ಟಿ ಅವರು ತಮ್ಮ ಪುತ್ರಿಯನ್ನು ಶಾಲೆಗೆ ಬಿಟ್ಟು ಬರಲು ತುಮಕೂರಿಗೆ ತೆರಳುವ ವೇಳೆ ಅಪಘಾತವಾಗಿದ್ದು, ಗಂಭೀರವಾಗಿ ಗಾಯಗೊಂಡಿರುವ ಬಿಂದು,ಭಾಗ್ಯಲಕ್ಷ್ಮೀ ಹಾಗೂ ಗೀತಾ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಐಮಂಗಲ ಠಾಣೆ ಪಿಎಸ್‌ಐ ಮಾರುತಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.