ಚಿತ್ರದುರ್ಗ:ತಾಂತ್ರಿಕ ಶಿಕ್ಷಣ ಇಲಾಖೆ ವ್ಯಾಪ್ತಿ ಚಿತ್ರದುರ್ಗ ಸರ್ಕಾರಿ ಪಾಲಿಟೆಕ್ನಿಕ್‌ನ ಪ್ರಸಕ್ತ ಸಾಲಿನ ಐಟಿಐ,ಪಿಯುಸಿ(ತಾಂತ್ರಿಕ ವಿಷಯಗಳು)ಉತ್ತೀರ್ಣ ವಿದ್ಯಾರ್ಥಿಗಳಿಂದ 2ನೇ ವರ್ಷದ ಡಿಪ್ಲೊಮಾ ಪ್ರವೇಶಕ್ಕೆ ಲ್ಯಾಟರಲ್ ಎಂಟ್ರಿ ಸ್ಕೀಂನಡಿ ಜೂ.25ರೊಳಗೆ ಅರ್ಜಿ ಆಹ್ವಾನಿಸಲಾಗಿದೆ. ಐ ಟಿಐ,ಪಿಯುಸಿ ತಾಂತ್ರಿಕ ವಿಷಯ ಉತ್ತೀರ್ಣ ಆಸಕ್ತರು www.dtek.kar.nic.in ಮೂಲಕ ಅರ್ಜಿ ಡೌನ್‌ಲೋಡ್ ಮಾಡಿಕೊಂಡು ಭರ್ತಿ ಮಾಡಿದ ಅರ್ಜಿಯೊಂದಿಗೆ ಸಾಮಾನ್ಯಅಭ್ಯರ್ಥಿಗಳು 100 ರೂ.ಹಾಗೂ ಎಸ್‌ಸಿ,ಎಸ್‌ಟಿ,ಪ್ರ.ವರ್ಗ-1ರ ಅಭ್ಯರ್ಥಿ ಗಳು 50 ರೂ.ಸಲ್ಲಿ ಸಬೇಕು. ಜೂ.26ರಂದು ಮೆರಿಟ್ ಪಟ್ಟಿ ಪ್ರಕಟಿಸಲಾಗುವುದೆಂದು ಪ್ರಕಟಣೆ ತಿಳಿಸಿದೆ.