ಬಳ್ಳಾರಿ : ಕಳೆದ ಒಂದು ವರ್ಷದಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಬಳ್ಳಾರಿ ವಿಭಾಗದಲ್ಲಿ ಶಕ್ತಿ ಯೋಜನೆಯಡಿ 2.62 ಕೋಟಿ ಪ್ರಯಾಣಿಸುವ ಮೂಲಕ 92.15 ಕೋಟಿ ರೂ. ಅದಾಯ ಇಲಾಖೆ ಬಂದಿದೆ. ಈಗಾಗಲೇ ಸರ್ಕಾರದಿಂದ ಶೇ 80% ರಷ್ಟು ಹಣ ಇಲಾಖೆಗೆ ಬಿಡುಗಡೆ ಮಾಡಲಾಗಿದೆ.
ಜಿಲ್ಲೆಯಲ್ಲಿ ಬಳ್ಳಾರಿ ಮೂರು, ಸಂಡೂರು, ಕಂಪ್ಲಿ, ಕುರುಗೋಡು, ಸಿರುಗುಪ್ಪ ದಲ್ಲಿ ತಲಾ ಒಂದು ಘಟಕಗಳಿವೆ. ಈ ಐದು ಘಟಕಗಳಿಂದ ನಿತ್ಯ 439 ಬಸ್ ಸಂಚಾರಿಸುತ್ತವೆ. ಕಳೆದ ವರ್ಷ 387 ಬಸ್‌ಗಳ ಸಂಚಾರವಿತ್ತು, ಜನರ ಅನುಕೂಲಕ್ಕಾಗಿ 80 ಹೊಸ ಬಸ್ ಖರೀದಿ ಮಾಡಲಾಗಿದೆ. ಇದಲ್ಲದೇ ಎಕ್ಸ್‌ಪ್ರೆಸ್ ಬಸ್‌ಗಳನ್ನು ದಿನಾಲೂ ಬೆಳಗ್ಗೆ ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲಕ್ಕಾಗಿ ಗ್ರಾಮೀಣ ಭಾಗಗಳಿಗೆ ಬಸ್ ಸಂಚಾರಿಸುತ್ತವೆ. ಡೆಲ್ಟ್ ಯೋಜನೆಯಡಿಯಲ್ಲಿ ನಗರದ ನಿವಾಸಿಗಳಿಗೆ ಸಂಚಾರಕ್ಕೆ 40 ಎಲೆಕ್ಟಿಕಲ್ ಬಸ್ ಖರೀದಿಸಲು ಈಗಗಾಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಹತ್ತು ಮೀ. ಹಾಗೂ ಹನ್ನೇರಡು ಮೀ. ಉದ್ದದ ಬಸ್‌ಗಳು ಕೇವಲ ನಗರದಲ್ಲಿ ಸಂಚಾರಕ್ಕೆ ಮಾತ್ರ ಅವಕಾಶವಿದೆ. ಒಂದು ದಿನಕ್ಕೆ 280 ಕಿ.ಮೀ. ಸಂಚಾರಿಸಲಿವೆ, ನಗರದ ಮೂರನೇ ಡಿಪೋದಲ್ಲಿ ಇವುಗಳಿಗೆ ರಾತ್ರಿ ವೇಳೆ ಚಾರ್ಜಿಂಗ್ ಮಾಡಲಾಗುವುದು. ಡಿಪೋದಲ್ಲಿ ಈಗಾಗಲೇ ಹತ್ತು ಲಕ್ಷಕ್ಕಿಂತ ಅಧಿಕ ಕಿ.ಮೀ. ಸಂಚಾರಿಸಿದ 73 ಬಸ್‌ಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಹೆಚ್ಚಿನ ಕಿ.ಮೀ. ಸಂಚಾರಿಸಿದ ಬಸ್‌ಗಳನ್ನು ಸ್ಥಗಿತಗೊಳಿಸಲಾಗಿದೆ. ಕಳೆದ ವರ್ಷ ಡಿಪೋದಿಂದ ಒಂದು ದಿನಕ್ಕೆ 1.37 ಲಕ್ಷ ಕಿ.ಮೀ. ಸಂಚರಿಸುತ್ತಿದ್ದವು. ಆದರೆ, ಈ ವರ್ಷ ಶಕ್ತಿ ಯೋಜನೆಯಿಂದ 17 ಸಾವಿರ ಹೆಚ್ಚುವಾರಿ ಕಿ.ಮೀ ಸಂಚರಿಸುತ್ತವೆ. ಕಳೆದ ಒಂದು ವರ್ಷದಲ್ಲಿನ ಮೇ ತಿಂಗಳಲ್ಲಿ 22.58 ಲಕ್ಷ ಮಹಿಳೆಯರು ರಾಜ್ಯದ ನಾನಾ ಕಡೆ ಸಂಚರಿಸುವ ಮೂಲಕ 8.64 ಕೋಟಿ ರೂ. ಅದಾಯ ತರುವ ಮೂಲಕ ವರ್ಷದ ಅತ್ಯಧಿಕ ಅದಾಯ ತಂದ ತಿಂಗಳು. ಇದಲ್ಲದೇ ಕಳೆದ ವರ್ಷಕ್ಕಿಂತ ಈ ವರ್ಷ ಮಹಿಳೆಯರ ಪ್ರಯಾಣ ಮೂರು ಪಟ್ಟು ಏರಿಕೆಯಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. ಕಳೆದ ಎರಡು ವರ್ಷದಿಂದ ಚಾಲಕರು, ನಿರ್ವಾಹಕರು ಬೇರೆ ಜಿಲ್ಲೆಗೆ ವರ್ಗಾವಣೆ, ವಯೋ ನಿವೃತ್ತಿ ಸೇರಿದಂತೆ ಹುದ್ದೆಗಳು ಖಾಲಿ ಇದ್ದವು. ಕೆಲ ತಿಂಗಳ ಹಿಂದಯೇ ಕೆಎಸ್‌ಆರ್‌ಟಿಸಿ ನೇಮಕಾತಿಯಲ್ಲಿ ಜಿಲ್ಲೆಗೆ 350 ಜನ ಚಾಲಕ ಹಾಗೂ ನಿರ್ವಾಹಕರನ್ನು ಭರ್ತಿ ಮಾಡಿಕೊಳ್ಳಲಾಗಿದೆ. ಇದರಲ್ಲಿ ಹೆಚ್ಚು ಗುಲ್ಬರ್ಗ ಹಾಗೂ ವಿಜಯಪುರ ಜಿಲ್ಲೆಯವರೆ ನೇಮಕವಾಗಿದ್ದಾರೆ. ಜಿಲ್ಲೆಯ ಯುವಕರು ಹುದ್ದೆ ಪಡೆಯಲು ಆಸಕ್ತಿ ತೋರುತ್ತಿಲ್ಲ. ಜಿಲ್ಲೆಯ ಕೆಲ ಗ್ರಾಮಗಳಿಗೆ ಸಂಚಾರಕ್ಕೆ ಕಿ.ಮೀ. 16 ರೂ. ಅದಾಯ ಬರುತ್ತಿತ್ತು. ಆದರೆ, ಈಗ 28 ರೂ. ಬರುತ್ತಿದೆ ಅದು ಕೂಡ ಪ್ಯಾಸೆಂಜರ್ ಬಸ್‌ಗಳ ಮೂಲಕ ಎಂಬುದು ಗಮರ್ನಾಹ ವಿಷಯವಾಗಿದೆ. ಐದು ಡಿಪೋದಲ್ಲಿ ಚಾಲಕ, ನಿರ್ವಾಹಕ ಹಾಗೂ ಸಿಬ್ಬಂದಿ ಸೇರಿ ಒಟ್ಟು 1600 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದು, ಎಲ್ಲರಿಗೂ ಪ್ರತಿ ತಿಂಗಳ ವೇತನ ಸರ್ಕಾರದಿಂದ ಬಿಡುಗಡೆಯಾಗುತ್ತಿದೆ ಎಂದು ವಿಭಾಗದ ಡಿಟಿಒ ಚಾಮರಾಜ ತಿಳಿಸಿದರು.
ಬಾಕ್ಸ್…. ಜಿಲ್ಲೆಯ ಕೆಲ ಗಡಿ ಗ್ರಾಮಗಳಿಗೆ ಸಕಾಲಕ್ಕೆ ಬಸ್‌ಗಳು ಸಂಚಾರಿಸುತ್ತಿಲ್ಲ ಎಂಬುದು ಹಲವು ದಿನಗಳಿಂದ ದೂರುಗಳಿವೆ. ಆದ್ದರಿಂದ, ಈಗಾಗಲೇ ಇದರ ಬಗ್ಗೆ ಸಂಬಂಧಪಟ್ಟ ಜನ ಪ್ರತಿನಿಧಿಗಳು, ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಕ್ರಮವಹಿಸಿಲ್ಲ . ಆಟೋ, ಟಾಟಾ ಎಸಿಗಳಲ್ಲಿ ಪ್ರಯಾಣಿಸಿ ಜಿಲ್ಲೆಗೆ ತಲುಪತ್ತವೆ ಎಂದು ಗಡಿಗ್ರಾಮದ ಕೆಲ ವಿದ್ಯಾರ್ಥಿನಿಯರು ಅಳಲು ತೋಡಿಕೊಂಡರು.
ಕೋಟ್…. ಈ ವರ್ಷ ಹೆಚ್ಚುವಾರಿ ಬಸ್ ಖರೀದಿಸಿ ಶಕ್ತಿ ಯೋಜನೆ ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿದೆ. ಜಿಲ್ಲೆಯ ಪ್ರತಿ ಗ್ರಾಮಗಳಿಗೆ ಒಂದು ಟ್ರಿಪ್ ಬೆಳಗ್ಗೆ ಹಾಗೂ ಸಂಜೆ ಎಕ್ಸ್ ಪ್ರೆಸ್ ಬಸ್‌ಗಳನ್ನು ಸಂಚಾರಿಸಲು ಸೂಚಿಸಲಾಗಿದೆ.