ಜಿಲ್ಲೆ

ಡಿಪೋ ಕಾಮಗಾರಿ ಶೀಘ್ರ ಆರಂಭ

ಜಗಳೂರು: ಕೆಎಸ್‌ಆರ್‌ಟಿಸಿ ಡಿಪೋ ನಿರ್ಮಾಣ ಸಂಬಂಧ ಪಟ್ಟಣದ ಮರೇನಹಳ್ಳಿ ರಸ್ತೆಯ ಪಕ್ಕದಲ್ಲಿರುವ ಸ.ನಂ 51ರ ಜಾಗಕ್ಕೆ ಶಾಸಕ ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ ಕೆಎಸ್‌ಆರ್‌ಟಿಸಿ ಜಿಲ್ಲಾಧಿಕಾರಿ ಶ್ರೀನಿವಾಸ್ ಜತೆ ಸೋಮವಾರ ಭೇಟಿ ನೀಡಿ ಪರಿಶೀಲಿಸಿ ಮಾಹಿತಿ ಪಡೆದುಕೊಂಡರು.
ಬೆಂಚೆಕಟ್ಟೆ ಸಮೀಪದ ಜಾಗಕ್ಕಿಂತ ಪಟ್ಟಣಕ್ಕೆ ಹತ್ತಿರುವಿರುವ ಮರೇನಹಳ್ಳಿ ರಸ್ತೆಯ ಪಕ್ಕದಲ್ಲಿರುವ ಜಾಗ ಡಿಪೋ ನಿರ್ಮಾಣಕ್ಕೆ ಸೂಕ್ತವಾಗಿದೆ. ಇದಕ್ಕೆ ಬೇಕಾದ ಎಲ್ಲ ದಾಖಲಾತಿ ಸಂಗ್ರಹಿಸಿ ಮಾಹಿತಿ ನೀಡುವಂತೆ ಸರ್ವೇ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಡಿಪೋ ನಿರ್ಮಾಣವಾಗುವವರೆಗೂ ವಿದ್ಯಾರ್ಥಿಗಳು, ಕೂಲಿಕಾರರಿಗೆ ಅನುಕೂಲವಾಗುವಂತೆ ಅಗತ್ಯವಿರುವ ಕಡೆ ಸರ್ಕಾರಿ ಬಸ್‌ಗಳನ್ನು ಓಡಿಸಬೇಕು ಎಂದು ಅಧಿಕಾರಿಗೆ ತಾಕೀತು ಮಾಡಿದರು.
ಕೆಎಸ್‌ಆರ್‌ಟಿಸಿ ಜಿಲ್ಲಾಧಿಕಾರಿ ಶ್ರೀನಿವಾಸ್ ಮಾತನಾಡಿ, ತಾಲೂಕಿನಲ್ಲಿ ಡಿಪೋ ನಿರ್ಮಾಣ ಮಾಡುವ ಅವಶ್ಯಕತೆ ಇದ್ದು, ಆದ್ದರಿಂದ ಸೂಕ್ತ ಸ್ಥಳವನ್ನು ಗುರುತಿಸಿ ಸರ್ಕಾರದಿಂದ ಮಂಜೂರಾತಿ ಪಡೆದು ಆದಷ್ಟು ಬೇಗ ಕಾಮಗಾರಿ ಆರಂಭಿಸಲಾಗುವುದು ಎಂದು ಬರವಸೆ ನೀಡಿದರು.
ದಾವಣಗೆರೆ-ಜಗಳೂರು ಮಾರ್ಗವಾಗಿ ತಡೆ ರಹಿತ ಬಸ್‌ಗಳ ಸೇವೆ ಒದಗಿಸಲಾಗುವುದು, ಅಲ್ಲದೇ ಜಗಳೂರಿನಿಂದ ಬೆಂಗಳೂರು ಹಾಗೂ ಮಣಿಪಾಲ್ ಮಾರ್ಗ ರಾಜಹಂಸ ಬಸ್ ಓಡಿಸಲಾಗುವುದು ಎಂದು ಕೆಎಸ್‌ಆರ್‌ಟಿಸಿ ನಿಯಂತ್ರಣಾಧಿಕಾರಿ ಫಕೃದ್ದೀನ್ ತಿಳಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಎಸ್ಟಿ ಘಟಕದ ಅಧ್ಯಕ್ಷ ಕೆ.ಪಿ ಪಾಲಯ್ಯ, ಜಿಲ್ಲಾ ಕಾರ್ಯದರ್ಶಿ ಪಲ್ಲಾಗಟ್ಟೆ ಶೇಖರಪ್ಪ, ಪಪಂ ಸದಸ್ಯ ರಮೇಶ್, ನಿವೃತ್ತ ಡಿವೈಎಸ್ಪಿ ಕಲ್ಲೇಶಪ್ಪ, ಗುತ್ತಿಗೆದಾರ ಸುಧೀರ್, ಮುಖಂಡರಾದ ಕಾನನಕಟ್ಟೆ ಪ್ರಭು, ಅನೂಪ್, ಗುರುಸಿದ್ದನಗೌಡ, ಉಪನ್ಯಾಸಕ ತಿಪ್ಪೇಸ್ವಾಮಿ ಇತರರಿದ್ದರು.