ಜಿಲ್ಲೆ

ಡಿಜೈರ್ ಫೆಸ್ಟ್‌ಗೆ ಅದ್ಬುತ ಸ್ಪಂದನೆ

ಬಳ್ಳಾರಿ: ಇಲ್ಲಿನ ಅಲ್ಲಂಭವನದಲ್ಲಿ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ವಿಜಯವಾಣಿ ಸಹಯೋಗದೊಂದಿಗೆ ಆಯೋಜಿಸಿದ್ದ ಡಿಜೈರ್ ಫೆಸ್ಟ್ ಕಾರ್ಯಕ್ರಮವನ್ನು ನಗರ ಶಾಸಕ ಭರತರೆಡ್ಡಿ ಅವರ ಪತ್ನಿ ವೈಜಯಂತಿ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಮಹಿಳಾ ಉದ್ಯಮಿ ಅಲ್ಲಂ ರಚನಾ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಭಾಗವಹಿಸಿ ಸಾಧನೆ ಗೈದಿದ್ದಾರೆ. ಮಹಿಳೆ ಅಬಲೆ ಅಲ್ಲ , ಸಬಲೆ ಎನ್ನುವುದು ವಿವಿಧ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸುವ ಮೂಲಕ ಸಾಬೀತು ಮಾಡಿದ್ದಾರೆ. ಈ ಫೆಸ್ಟ್ ನಲ್ಲಿ ಮಹಿಳಾ ಉದ್ಯಮಿಗಳು ಹೆಚ್ಚಿನ ರೀತಿಯಲ್ಲಿ ಇರುವುದರಿಂದ ಎಲ್ಲ ಮಹಿಳೆಯರು ಭಾಗವಹಿಸಿ ಪ್ರೋತ್ಸಾಹ ನೀಡಬೇಕು ಎಂದು ಕರೆ ನೀಡಿದರು.
ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮಹಿಳೆಯರಾದ ಸುವರ್ಣ ರಾಜಶೇಖರ ಪಟ್ಟಣಶೆಟ್ಟಿ, ಶಾಸಕ ನಾರಾ ಭರತರೆಡ್ಡಿ ಪತ್ನಿ ವೈಜಯಂತಿ, ಸರ್ವಮಂಗಳ ಶಿವಪ್ರಕಾಶ, ಪ್ರಭಾವತಿ ಪಾಟೀಲ, ವನಿತಾ ಬಂಡಾರಿ ಹಾಗೂ ಜ್ಯೋತಿ ಅವರಿಗೆ ಸನ್ಮಾನಿಸಲಾಯಿತು.
ಡಿಜೈರ್ ಫೆಸ್ಟ್‌ನಲ್ಲಿ ವಿವಿಧ ರಾಜ್ಯಗಳ ಮಹಿಳಾ ಉದ್ಯಮಿಗಳ ಭಾಗವಹಿಸಿ ಸಿಹಿ ತಿನಿಸು, ಬಟ್ಟೆ, ಕಾಸ್ಮಟಿಕ್ಸ್ ಹಾಗೂ ಮೋಟರ್ ಬೈಕ್‌ಗಳನ್ನು ಪ್ರದರ್ಶನ ಹಾಗೂ ಮಾರಾಟ ಮಾಡಿದರು. ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ಮಹಿಳೆಯರು ಫೆಸ್ಟ್‌ನಲ್ಲಿ ಮಾರಾಟಕ್ಕೆ ಇಟ್ಟಿದ್ದ ವಿವಿಧ ವಸ್ತುಗಳನ್ನು ಕೊಂಡರು. ಕೆಲವರು ಪ್ರದರ್ಶನಕ್ಕೆ ಇಟ್ಟಿದ್ದ ಸೀರೆ, ಎಲೆಕ್ಟಾನಿಕ್ ವಸ್ತುಗಳಿಗೆ ಮನಸೋತರು.
ವಿವಿಧ ವಸ್ತುಗಳ ಪ್ರದರ್ಶನ : ಸ್ಯಾಮ್ ಅವರ ಬೌನ್ಸಿನ್ ಬ್ಯಾಗ್, ಕ್ಷಮಾ ಪವರ್ ಅವರ ಬನನ ಫೈಬರ್, ಸೋನಲ್ ಅವರ ಕೊಲ್ಲಾಪುರಿ ಫುಟ್ ವೇರ್ಸ್‌, ಜೆನ್‌ಆಗ್ರೋ ಫುಡ್( ಆಹಾರ ತಿನಿಸುಗಳು), ಭಾವನಾ ಅವರ ಕ್ಲಾಸ್ಮೆಟಿಕ್ ( ಬ್ಯೂಟಿ ಡಿಸೈನರ್), ಸುಪ್ರಿಯಾ ರಾಮ್ ಅವರ ವಂಡರ್ ಹ್ಯಾರ್, ವನಿತಾ ಮಂಡಾಳ್ ಆರ್ಟ್ಸ್ , ಆತ್ಮನ್ ಅವರ ಗ್ಲಾಮೊರೋ, ಹೇಮಾ ಅವರ ಜೈಪುರ ಕಲೆಕ್ಷನ್, ಜಸ್ಮಿ ಅವರ ರಶ್ ಟು ಡೆನಿಮ್, ನಂದಿನಿ ಅವರ ಸಂಚಯ ಕಲೆಕ್ಟಿವ್, ದಿವ್ಯಜ ಅವರ ಆರೋಹಿ ಪೆಟಲ್ಸ್, ರಶ್ಮಿ ಅವರ ಎಟೆರೆನಾಲ್ ಫ್ಯಾಶನ್ ಡಿಜೈನರ್, ದೀಪಾ ಅವರ ಆಲಂಕಾರ್, ಶ್ರೀದೇವಿ ಅವರ ಶ್ರೀ ಸಿಲ್ಕ್ಸ್, ರಾಶಿ ಅವರ ಸೇಫ್ಟಿ ಪಿನ್ಜ್, ಸಾಕ್ಷಿ ಅವರ ಪೈಟಾಣಿ ಸಾರಿಸ್( ಆಮಿ ಚಾರ‌್ಸೋಗಿ), ಶುಭಾಂಗಿಯ ಮೆಸ್ಮ ಮ್ಮಾಂಜ್, ಕಿರಣ್ ಅವರ ಅಕ್ಷಯ ಶುಭ ಸಮಾರಂಭ, ಹೇಮಾಲಕ್ಷ್ಮಿ ಅವರ ಫ್ಯಾಶನ್ ಫ್ಯಾಕ್ಟರಿ, ಜೆ.ಎಸ್.ಮೋಟರಯಾಡ್ ಅವರು ಬಿಎಂಡಬ್ಲೂ ಬೈಕ್ ಹಾಗೂ ಷರ್ಟ್, ಜಾಕೆಟ್‌ಗಳ ಮಳಿಗೆಗಳಲ್ಲಿ ಮಾರಾಟ ಹಾಗೂ ಪ್ರದರ್ಶನಕ್ಕೆ ಇಡಲಾಗಿತ್ತು. ಕಾರ್ಯಕ್ರಮದಲ್ಲಿ ಜೂನಿಯರ್ ಮಾಸ್ಟರ್ ಚೆಫ್ ಸ್ಪರ್ಧೆಯಲ್ಲಿ ವಿಜೇತರಾದ ಸ್ಪರ್ಧೆಗಳಿಗೆ ಬಹುಮಾನ ವಿತರಿಸಲಾಯಿತು.