ಕಮಲಾಪುರ: ಬಾಚನಾಳ ಗ್ರಾಮದ ಅಂಗಡಿಯಲ್ಲಿನ ವಿವಿಧ ಕಂಪನಿಯ ಎಂಪ್ಲಿಫೈಯರ್, ಮಿಕ್ಸರ್, ಪ್ಲೇಯರ್ ಹೀಗೆ 1.48 ಲಕ್ಷ ರೂ. ಮೌಲ್ಯದ ಸಾಮಗ್ರಿಗಳನ್ನು ಕದ್ದಿದ್ದ ಕಳ್ಳನನ್ನು ಬುಧವಾರ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಪತ್ತೆಗಿಳಿದ ಪೊಲೀಸರು 24 ಗಂಟೆಯಲ್ಲಿ ಭಾಲ್ಕಿಯ ಮಲ್ಲಿಕಾರ್ಜುನ ಗೌರೆ(30) ಎಂಬುವನನ್ನು ಬಂಧಿಸಿ ಡಿಜೆ ಸಾಮಾನು ಮತ್ತು ಕಳ್ಳತನಕ್ಕೆ ಬಳಸಿದ ಮಾರುತಿ ಶಿಫ್ಟ್ ಕಾರು ಜಪ್ತಿ ಪಡಿಸಿಕೊಂಡಿದ್ದಾರೆ. ಬಾಚನಾಳದ ವೀರೇಶ ಅವರ ಡಿಜೆ ಸಾಮಗ್ರಿಗಳನ್ನು ಆ.9ರಂದು ಕದ್ದಿರುವ ಕುರಿತು 15ರಂದು ಕಮಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪಿಎಸ್‌ಐ ಕುಮಾರಿ ಸಂಗೀತಾ, ಶಿವಶಂಕರ ಸುಬೇದಾರ, ಎಎಸ್‌ಐ ಜಯಲಿಂಗಪ್ಪ, ಪೇದೆಗಳಾದ ರಮೇಶ, ಗುರುನಾಥ ರೆಡ್ಡಿ, ಸಖೀಲ, ಶರಣಬಸ್ಸಪ್ಪ, ರಾಜಶೇಖರ, ಬಲರಾಮ ಇತರರು ಕಾರ್ಯಾಚರಣೆ ತಂಡದಲ್ಲಿದ್ದರು.