ಜಿಲ್ಲೆ

ಡಿಜಿಟಲ್ ಪಾವತಿಗೆ ಸದ್ಯಕ್ಕಿಲ್ಲ ತೆರಿಗೆ ಎಂದ ಸೀತಾರಾಮನ್​

ಕಲಬುರಗಿ: ಡಿಜಿಟಲ್ ಪಾವತಿಗಳ ಮೇಲೆ ಸದ್ಯಕ್ಕೆ ಯಾವುದೇ ತೆರಿಗೆ ವಿಧಿಸುವುದಿಲ್ಲ. ಅಂತಹ ಪ್ರಸ್ತಾವನೆಯೂ ಸರ್ಕಾರದ ಮುಂದಿಲ್ಲ ಎಂದು ಕೇಂದ್ರ ಹಣಕಾಸು ಮತ್ತು ಕಾರ್ಪೋರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ರಾಯಚೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಲು ಮುಂಬೈನಿAದ ರೈಲಿನಲ್ಲಿ ತೆರಳುತ್ತಿದ್ದ ಸಚಿವರನ್ನು ಶನಿವಾರ ಬೆಳಗ್ಗೆ ನಗರದ ನಿಲ್ದಾಣದಲ್ಲಿ ಜಿಲ್ಲಾಡಳಿತದ ಅಧಿಕಾರಿಗಳು ಹಾಗೂ ಬಿಜೆಪಿ ಮುಖಂಡರಿAದ ಗೌರವ ಸ್ವೀಕರಿಸಿ ರೈಲು ನಿರ್ಗಮಿಸುವ ಮುನ್ನ ವಿಜಯವಾಣಿ ಪ್ರತಿನಿಧಿ ಜತೆ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಆಶಯದಂತೆ ಡಿಜಿಟಲ್ ಇಂಡಿಯಾ ಭಾಗವಾಗಿ ಜನರು ನಗದು ಚಲಾವಣೆ ಕಡಿಮೆ ಮಾಡಿ ಡಿಜಿಟಲ್ ಪಾವತಿಗಳಿಗೆ ಮೊರೆ ಹೋಗುತ್ತಿದ್ದಾರೆ. ಅದಕ್ಕೆ ಇನ್ನಷ್ಟು ಉತ್ತೇಜನ ನೀಡುವುದಾಗಿ ಭರವಸೆ ನೀಡಿದರು.
ಡಿಜಿಟಲ್ ಪಾವತಿಗಳ ಮೇಲೆ ಕರ ವಿಧಿಸಲು ಇದು ಸೂಕ್ತ ಸಮಯವಲ್ಲ. ಡಿಜಿಟಲ್ ಆರ್ಥಿಕತೆ ಜನರನ್ನು ಸೆಳೆಯುತ್ತಿದೆ. ಹೀಗಾಗಿ  ಅಂತಹ ಪಾವತಿ ಮೇಲೆ ತೆರಿಗೆ ವಿಧಿಸಲ್ಲ ಎಂದು ಸ್ಪಷ್ಟಪಡಿಸಿದ ಅವರು, ಆರ್ಥಿಕ ಸ್ಥಿತಿ ಅತ್ಯಂತ ಸುಭದ್ರವಾಗಿದೆ. ಪ್ರತಿಪಕ್ಷಗಳ ಆರೋಪದಲ್ಲಿ ಹುರುಳಿಲ್ಲ. ಕಾಂಗ್ರೆಸ್ ಒಡೆದ ಮನೆಯಾಗುತ್ತಿದ್ದು, ಆ ಪಕ್ಷದ ಭವಿಷ್ಯ ದಿನೇದಿನೆ ಕ್ಷೀಣಿಸುತ್ತಿದೆ ಎಂದರು.
ಹೆಚ್ಚುವರಿ ಜಿ¯್ಲÁಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ, ತಹಸೀಲ್ದಾರ್ ಪ್ರಕಾಶ ಕುದುರೆ ಇತರ ಅಧಿಕಾರಿಗಳು ಜಿಲ್ಲಾಡಳಿತದ ಪರವಾಗಿ ಸಚಿವರನ್ನು ಗೌರವಿಸಿದರು. ಬೆಳ್ಳಂಬೆಳಗ್ಗೆ ರೈಲು ನಿಲ್ದಾಣಕ್ಕೆ ಆಗಮಿಸಿ ವಿಶೇಷ ಸನ್ಮಾನ ನೀಡಿದ್ದಕ್ಕಾಗಿ ಕಲಬುರಗಿ ಜನರನ್ನು ಮುಕ್ತ ಕಂಠದಿAದ ಸಚಿವೆ ನಿರ್ಮಲಾ ಶ್ಲಾಘಿಸಿದರು. ಬಿಜೆಪಿ ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಶಿವಾ ಅಷ್ಟಗಿ ಇತರರಿದ್ದರು.

ರೈತರು ಪರಿಶಿಷ್ಟರಿಗೆ ವಿಶೇಷ ಪರಿಹಾರ
ಕಲ್ಯಾಣ ಕರ್ನಾಟಕದ ರೈತರು ಹಾಗೂ ಪರಿಶಿಷ್ಟ ವರ್ಗದವರಿಗೆ ವಿಶೇಷ ಪರಿಹಾರ ನೀಡಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಬಿಜೆಪಿ ಎಸ್‌ಸಿ ಮೋರ್ಚಾ ರಾಜ್ಯ ಉಪಾಧ್ಯP್ಷÀ ಡಾ.ಅಂಬಾರಾಯ ಅಷ್ಟಗಿ ಮನವಿ ಮಾಡಿದರು. ರೈಲು ನಿಲ್ದಾಣದಲ್ಲಿ ಸಚಿವರನ್ನು ಗೌರವಿಸಿ ಮನವಿ ಸಲ್ಲಿಸಿದ ಅವರು, ಜಿ¯್ಲೆಯ ರೈತರ ಬೆಳೆಗಳು ಅತಿವೃಷ್ಟಿಯಿಂದ  ಹಾನಿಯಾಗಿದ್ದರ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು. ರಾಜ್ಯ ಸರ್ಕಾರ ಸಲ್ಲಿಸುವ ಮನವಿಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.