ಚಿಕ್ಕಮಗಳೂರು: ಮಹಾಡ್ ಚಳವಳಿಯಲ್ಲಿ ಬಾಬಾಸಾಹೇಬ ಅಂಬೇಡ್ಕರ್ ಬಹಿರಂಗವಾಗಿ ಮನುಸ್ಮೃತಿ ಸುಟ್ಟು ಹಾಕಿದ ದಿನವನ್ನು ಡಿಎಸ್‌ಎಸ್ ಮುಖಂಡರು ನಗರದ ಆಜಾದ್‌ಪಾರ್ಕ್ ವೃತ್ತದಲ್ಲಿ ನೆನಪಿನ ದಿನ ಆಚರಿಸಿದರು.
ಈ ವೇಳೆ ಮಾತನಾಡಿದ ಬಿಎಸ್‌ಪಿ ಜಿಲ್ಲಾಧ್ಯಕ್ಷ ಪಿ.ಪರಮೇಶ್ವರ ಮಾತನಾಡಿ, ಬ್ರಿಟೀಷ್ ಮುಂದೆ ನಾವು ಹಿಂದೂಗಳಲ್ಲ ಎಂದು ತೋರಿಸುವ ಸಲುವಾಗಿ ಮಹಾಡ್ ಕೆರೆ ಹಾಗೂ ಕಾಳರಾಂ ದೇವಸ್ಥಾನ ಪ್ರವೇಶ ಮಾಡಿ ಬ್ರಿಟೀಷರಿಗೆ ಮನವರಿಕೆ ಮಾಡಿಕೊಟ್ಟರು ಎಂದರು.
ಡಿಎಸ್‌ಎಸ್ ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಮರ್ಲೆ ಅಣ್ಣಯ್ಯ ಮಾತನಾಡಿ, ಮನು ಧರ್ಮದ ಪ್ರಕಾರ ಇರುವ ಗುಲಾಂ ಗಿರಿ ತೊಲಗಿಸಲು ಅಂಬೇಡ್ಕರ್ ಅಂದು ಮನುಧರ್ಮ ಸುಟ್ಟು ಹಾಕಿದ ಕಾರಣ ಇಂದು ಅಸಮಾನತೆ ತೊಲಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಿಎಸ್‌ಎಸ್ ಜಿಲ್ಲಾ ಪ್ರಧಾನ ಸಂಚಾಲಕ ಮಂಜಯ್ಯ, ಮುಖಂಡರಾದ ಮಂಜುನಾಥ ನಂಬಿಯರ್, ಹರಿಯಪ್ಪ, ಗಂಗಾಧರ, ವೀರಭದ್ರಯ್ಯ, ಪರಮೇಶ, ರಮೇಶ್, ಸಣ್ಣಪ್ಪ, ಸಂತೋಷ್, ಸಂತೋಷ್ ಲಕ್ಯಾ, ಆಶಾ ಉಪಸ್ಥಿತರಿದ್ದರು.