ಚಾಮರಾಜನಗರ: ದಲಿತ ಸಂಘರ್ಷ ಸಮಿತಿಯ ಕೊಳ್ಳೇಗಾಲ ತಾಲೂಕು ಸಮಿತಿಯನ್ನು ಶನಿವಾರ ರಚನೆ ಮಾಡಲಾಯಿತು.
ಕೊಳ್ಳೇಗಾಲ ಪಟ್ಟಣದ ಪ್ರವಾಸಿಮಂದಿರದಲ್ಲಿ ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಸಿ.ರಾಜಣ್ಣ ಯರಿಯೂರು ಅಧ್ಯಕ್ಷತೆಯಲ್ಲಿ ರಚನೆ ಮಾಡಿದ ಸಮಿತಿಯಲ್ಲಿ ತಾಲೂಕು ಸಂಚಾಲಕರಾಗಿ ಸಿ.ಸಿದ್ದರಾಜು ಸಿದ್ದಯ್ಯನಪುರ, ಸಂಘಟನೆ ಸಂಚಾಲಕರಾಗಿ ಶಾಂತರಾಜು, ದಾಸನಪುರ ರವಿ ದಾಸನಪುರ, ಮಹೇಶ್ ಮುಳ್ಳೂರು, ಖಜಾಂಚಿಯಾಗಿ ಮಹದೇವ ಆದರ್ಶನಗರ, ಕೊಳ್ಳೇಗಾಲ ಪಟ್ಟಣ ಸಂಚಾಲಕರಾಗಿ ಶಂಕರ ಬಸ್ತಿಪುರ, ಕಸಬಾ ಹೋಬಳಿ ಸಂಚಾಲಕರಾಗಿ ಆರ್.ಕೆಂಪರಾಜು, ತೆರಂಬಳ್ಳಿ ಪಾಳ್ಯ ಹೋಬಳಿ ಸಂಚಾಲಕರಾಗಿ ಬಾಬು, ಕಾಮಗೆರೆ ಸಂಘಟನಾ ಸಂಚಾಲಕರರಾಗಿ ಸಿದ್ದಯ್ಯ ಕರಿನಪುರ, ಪ್ರವೀಣ್ ಇಕ್ಕಡಹಳ್ಳಿ ಅವರನ್ನು ನೇಮಕ ಮಾಡಲಾಯಿತು.