ಬಾಗಲಕೋಟೆ: ಚಾಲುಕ್ಯರ ರಾಜಧಾನಿ ಐಹೊಳೆ ಹೆಸರಿನಲ್ಲಿ ನಿರ್ಮಾಣವಾಗಿರುವ, ಉತ್ತಮ ಕಥಾ ಹಂದರ ಇರುವ ಐಹೊಳೆ ಚಲನ ಚಿತ್ರವು ಡಿ.೨೩ ರಂದು ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ದೇಶಕ ರವೀಂದ್ರನಾಥ ಸಿರವರ ಹೇಳಿದರು.
ಕೇಶ್ಯಾ ಎಂಬ ಬಾಲಕ ಅವನ್ನೂರಿನ ಇತಿಹಾಸವನ್ನು ಜಗತ್ತಿಗೆ ಸಾರುವ ಗೈಡ್ ಆಗಬೇಕೆಂಬ ಕನಸು, ಅದಕ್ಕೆ ಪೂರಕವಾಗಿ ನಿಲ್ಲುವವರು ಕಥೆ ಹೇಳುವ ಅಜ್ಜಿ, ಐಹೊಳೆ ಗ್ರಾಮ ಸ್ವಚ್ಛವಾಯಿತೇ, ಸ್ಥಳಾಂತರ ವಿಷಯ ಸೇರಿದಂತೆ ವಿಭಿನ್ನ ಕಥೆ ಹೊಂದಿದೆ. ಐಹೊಳೆ ಚಿತ್ರದಲ್ಲಿ ಗ್ರಾಮದ ಇತಿಹಾಸ, ಪರಂಪರೆ, ಶಿಲ್ಪಕಲೆಗಳು ೧೯೦ ವಿಶೇಷ ತಾಣಗಳನ್ನು ಚಿತ್ರದಲ್ಲಿ ತೋರಿಸಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಐಹೊಳೆ ಚಿತ್ರಕ್ಕೆ ಹಂಸಲೇಖ ಅವರ ಸಾಹಿತ್ಯ ಸಂಗೀತ ನೀಡಿದ್ದು. ಮನೋಜಕುಮಾರ ಛಾಯಾಗ್ರಾಹಣವಿದೆ. ಅತಿ ಕಡಿಮೆ ಬಜೆಟ್‌ನಲ್ಲಿ ಎಂಟು ಸ್ನೇಹಿತರು ಜೊತೆಗೂಡಿ ಈ ಚಿತ್ರ ನಿರ್ಮಿಸುತ್ತಿದ್ದು, ಸಾರ್ವಜನಿಕರು ಬೆಂಬಲಿಸಬೇಕು. ೧೦೦ ಚಿತ್ರ ಮಂದಿರಗಳಲ್ಲಿ ತೆರೆ ಕಾಣಲಿದೆ ಎಂದು ಹೇಳಿದರು.
ಬಿ. ವೆಂಕಟೇಶ., ಎಂ.ಎನ್.ಮಂಜುನಾಥ, ನಂದಾ ಹೊಸಮನಿ, ಮಹಾಂತೇಶ ಗಜೇಂದ್ರಗಡ, ರಮೇಶ ಮಡಿವಾಳರ, ಉಪಸ್ಥಿತರಿದ್ದರು.