ಬಾಗಲಕೋಟೆ ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಗ್ರಾಮದೇವಿ ಸೇವಾ ಸಮಿತಿ ಗೌರವಾಧ್ಯಕ್ಷ ಬಸವಪ್ರಭು ಸರನಾಡಗೌಡರ ಜಾತ್ರಾ ಮಹೋತ್ಸವದ ಪ್ರಚಾರ ಸಾಮಗ್ರಿ ಬಿಡುಗಡೆಗೊಳಿಸಿದರು. ಸಮಿತಿ ಅಧ್ಯಕ್ಷ ಬಂಡೆರಾವ ಸರದೇಸಾಯಿ, ಮುಖಂಡರಾದ ಗುಂಡೂರಾವ ಸಿಂಧೆ, ಅಶೋಕ ಲಿಂಬಾವಳಿ, ಸಂಗಯ್ಯ ಸರಗಣಾಚಾರಿ, ಸಂಗಯ್ಯ ಸರಗಣಾಚಾರಿ ಇತರರು ಇದ್ದರು. 
ಜಿಲ್ಲೆ

ಡಿ.೨೦ ರಿಂದ ಗ್ರಾಮ ದೇವತೆಯ ಅದ್ಧೂರಿ ಜಾತ್ರೆ

ಬಾಗಲಕೋಟೆ: ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಬಾಗಲಕೋಟೆಯ ಗ್ರಾಮ ದೇವತೆಯ ಜಾತ್ರೆಯನ್ನು ಡಿ.೨೦ ರಿಂದ ೨೪ ರವರೆಗೆ ಅದ್ದೂರಿಯಾಗಿ ಹಮ್ಮಿಕೊಳ್ಳಲಾಗಿದೆ, ಈಗಾಗಲೇ ಅಗತ್ಯ ಸಿದ್ಧತೆಗಳು ಆರಂಭಗೊಂಡಿವೆ ಎಂದು ಗ್ರಾಮದೇವಿ ಸೇವಾ ಸಮಿತಿ ಗೌರವಾಧ್ಯಕ್ಷ ಬಸವಪ್ರಭು ಸರನಾಡಗೌಡರ ಹೇಳಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮದೇವತೆಯ ಜಾತ್ರೆಯನ್ನು ಇಂದಿನ ಯು ವಪೀಳಿಗೆಗೆ ಸಾವಿರಾರು ವರ್ಷದ ಇತಿಹಾಸ, ಸಂಪ್ರದಾಯ, ಭಕ್ತಿ ಆಚರಣೆ ತಿಳಿಸುವ ಆಶಯ ಹೊಂದಲಾಗಿದೆ. ಮುಂದಿನ ಮಂಗಳವಾರದಿಂದ ವಾರ ಹಿಡಿಯುವ ಪದ್ಧತಿಗೆ ಚಾಲನೆ ನೀಡಲಾಗುವುದು. ಐದು ವಾರಗಳ ಬಳಿಕ ಜಾತ್ರಾ ಮಹೋತ್ಸವ ಆರಂಭಗೊಳ್ಳಲಿದೆ ಎಂದರು.

ಬಹು ವರ್ಷಗಳ ಕಾಲ ಸ್ಥಗೀತಗೊಂಡಿದ್ದ ಇಲ್ಲಿನ ಗ್ರಾಮ ದೇವತೆ ಜಾತ್ರೆ ೨೦೨೧ ರಿಂದ ಆರಂಭಗೊಂಡಿತು, ಬಾಗಲಕೋಟೆಯ ಜನತೆ, ಗಣ್ಯರು, ಜನಪ್ರತಿನಿಽಗಳು, ವ್ಯಾಪಾರಸ್ಥರಿಂದ ಸಂಗ್ರಹವಾದ ದೇಣಿಗೆ ೪೬,೩೩,೧೦೧ ರೂ. ಇದರಲ್ಲಿ ೩೦,೬೦,೩೦೬ ರೂ. ಖರ್ಚು ಮಾಡಲಾಗಿದ್ದು, ೧೫೭೨೭೯೫ ರೂ. ಬ್ಯಾಂಕಿನಲ್ಲಿ ಠೇವಣಿ ಇಡಲಾಗಿದೆ. ಈ ವರ್ಷವು ಕೂಡಾ ಎಲ್ಲರ ಸಹಕಾರ ಅಗತ್ಯವಾಗಿ ಬೇಕಿದೆ ಎಂದು ತಿಳಿಸಿದರು.

ಡಿ.೨೦ ರಂದು ಬೆಳಗ್ಗೆ ೯.೩೦ ಗಂಟೆಗೆ ಆರತಿ, ಕಳಸ, ಪೂರ್ಣಕುಂಭ, ಮಂಗಲವಾದ್ಯಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಶ್ರೀದೇವಿಯ ಭವ್ಯ ಮೆರವಣಿಗೆ ನಡೆಯಲಿದೆ. ಡಿ.೨೨ ರಂದು ಬೆಳಗ್ಗೆ ೯ ಗಂಟೆಗೆ ದೇವಿಗೆ ವಿವಿಧ ಪೂಜಾ ಕೈಂಕರ್ಯಗಳು ನಡೆಯಲಿವೆ. ಡಿ.೨೩ ರಂದು ಆವಾಹಿತ ದೇವತಾ ಪೂಜೆ, ಡಿ.೨೪ ರಂದು ಶ್ರೀದೇವಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಲಿದೆ ಎಂದು ಹೇಳಿದರು.

ಗ್ರಾಮದೇವಿ ಸೇವಾ ಸಮಿತಿ ಉಪಾಧ್ಯಕ್ಷ ಅಶೋಕ ಲಿಂಬಾವಳಿ ಮಾತನಾಡಿ, ಬಾಗಲಕೋಟೆಯಲ್ಲಿ ನಡೆಯುವ ಗ್ರಾಮದೇವತೆಯ ಜಾತ್ರೆಯಲ್ಲಿ ಡಿ.೨೦ ರಂದು ಬೆಳಗ್ಗೆ ದೇವಿಜಯ ಧ್ವಜಾರೋಹಣ, ಬೆಳಗ್ಗೆ ೮ ಗಂಟೆಗೆ ಗೋ ಪೂಜೆ, ೯ ಗಂಟೆಗೆ ಕುಂಭ ಪೂಜೆ ನಡೆಯಲಿದೆ. ಕಿಲ್ಲಾದ ದ್ಯಾಮವ್ವದೇವಿ ದೇವಸ್ಥಾನದಿಂದ ೨೫೦೦ ಕುಂಭಗಳನ್ನು ಹೊತ್ತು ಮಹಿಳೆಯರು ಸಾಗಲಿದ್ದಾರೆ. ೪೦೦ ಕಲಾ ತಂಡಗಳು ಭಾಗವಹಿಸಲಿವೆ. ಅಂತರಾಜ್ಯ ಕಲಾ ತಂಡಗಳು ಸಹ ಭಾಗವಹಿಸಲಿವೆ ಎಂದರು.

ಡಿ.೨೦ ರಿಂದ ೨೪ವರೆಗೆ ಪ್ರತಿದಿನ ಒಂದೊಂದು ಕಾರ್ಯಕ್ರಮ ನಡೆಯಲಿದೆ. ಅನ್ನಸಂತರ್ಪಣೆ ಕೂಡ ನಡೆಯಲಿದ್ದು, ನಗರದ ವ್ಯಾಪಾರಸ್ಥರು, ಸಾರ್ವಜನಿಕರು, ರೈತರು, ಮಹಿಳೆಯರು ಎಲ್ಲರೂ ಕೂಡ ಗ್ರಾಮದೇವಿಯ ಜಾತ್ರೆಗೆ ಸಹಕಾರ ನೀಡಿದ್ದಾರೆ. ಐದು ದಿನಗಳ ಕಾಲ ನಡೆಯುವ ವೇದಿಕೆ ಕಾರ್ಯಕ್ರಮ ನಗರದ ತರಕಾರಿ ಮಾರುಕಟ್ಟೆಯ ಪ್ರಾಂಗಣದಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದರು.

ಸಮಿತಿ ಉಪಾಧ್ಯಕ್ಷ ನಾಗರಾಜ ಹದ್ಲಿ ಮಾತನಾಡಿ, ಗ್ರಾಮದೇವತೆಯ ಜಾತ್ರೆ ಕಿಲ್ಲಾ ಭಾಗಕ್ಕೆ ಅಷ್ಟೇ ಸೀಮಿತವಾಗದೇ ನವನಗರ, ವಿದ್ಯಾಗಿರಿ, ಹಳೆ ಬಾಗಲಕೋಟೆಯ ಜನ ಸೇರಿ ದೇವಿ ಜಾತ್ರೆಯನ್ನು ಆಚರಿಸಲಾಗುತ್ತಿದೆ. ಬಾಗಲಕೋಟೆಯ ಜನತೆಗೆ ಶಾಂತಿ, ಸಮೃದ್ಧಿಯಿಂದ ಬದಕುಲಿ ಎಂಬ ಉದ್ದೇಶವನ್ನು ಇಟ್ಟುಕೊಂಡು ದೇವಿಯಲ್ಲಿ ಪ್ರಾರ್ಥಿಸಿ ಜಾತ್ರೆಯನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.

ಗೌರವ ಕಾರ್ಯದರ್ಶಿ ಸಂಗಯ್ಯ ಸರಗಣಾಚಾರಿ ಮಾತನಾಡಿ, ನ.೨೬ ರಂದು ಮೊದಲ ಮಂಗವಾರ ವಾರ ಹಿಡಿಯಲಾಗುವುದು ಒಟ್ಟು ಐದು ಮಂಗಳವಾರ ಆದ ಬಳಿಕ ದೇವಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ ಎಂದರು.

ಮುಖಂಡರಾದ ಸಮಿತಿ ಅಧ್ಯಕ್ಷ ಬಂಡೆರಾವ ಸರದೇಸಾಯಿ, ಮುಖಂಡರಾದ ಗುಂಡೂರಾವ ಸಿಂಧೆ, ಬಸಪ್ಪ ಸ್ವಾಗಿ, ಶ್ರೀನಾಥ ಸಜ್ಜನ್, ರಮೇಶ ಕೋಟಿ, ಸದಾನಂದ ನಾರಾ, ಕಾಂತೂ ಪತ್ತಾರ, ಸುರೇಶ ಮಜ್ಜಗಿ ಇದ್ದರು.