ಬಾಗಲಕೋಟೆ: ಸುಪ್ರೀಂಕೋರ್ಟ್ ಆದೇಶವಿದ್ದರೂ ರಾಜ್ಯ ಸರ್ಕಾರ ಒಳಮೀಸಲಾತಿ ಜಾರಿಗೊಳಿಸದಿರುವುದನ್ನು ಖಂಡಿಸಿ ಡಿ.೧೬ ರಂದು ಬೆಳಗಾವಿಯಲ್ಲಿ ಮಾದಿಗ, ಸಮಗಾರ, ಮಚಗಾರ, ಡೊಹರ, ಡಕ್ಕಲಿಗ ಜಾತಿ, ಉಪಜಾತಿ ಸಂಘಟನೆಗಳ ಒಕ್ಕೂಟದಿಂದ ಹಕ್ಕೋತ್ತಾಯ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ರಾಜ್ಯ ಸಂಚಾಲಕ ಮುತ್ತಣ್ಣ ಬೆಣ್ಣೂರ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ ಅಽವೇಶನದಲ್ಲಿ ಈ ಬಗ್ಗೆ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಧ್ವನಿಯಾದರೆ ಅದನ್ನು ಕಾಂಗ್ರೆಸ್ ಶಾಸಕರಾದ ನಯನ ಮೋಟಮ್ಮ, ಎ.ನರೇಂದ್ರಸ್ವಾಮಿ ಅವರು ವಿರೋಽಸಿ ಅಽಕತನ ಪ್ರದರ್ಶಿಸಿದ್ದಾರೆ. ಯತ್ನಾಳರು ಸಮುದಾಯದ ಪರವಾಗಿ ಧ್ವನಿಯಾಗಿದ್ದಾರೆ, ನಮ್ಮ ಪರ ಧ್ವನಿಯಾಗುವವರ ಜತೆಗೆ ಸಮಾಜ ಒಟ್ಟಾಗಿ ನಿಲ್ಲಲಿದೆ ಎಂದರು.
ಸುಪ್ರೀA ಕೋರ್ಟ್ನ ಆದೇಶ ಬಂದು ಇಷ್ಟು ತಿಂಗಳು ಕಳೆದರೂ ರಾಜ್ಯ ಸರ್ಕಾರ ಯಾವ ಕ್ರಮಕ್ಕೂ ಮುಂದಾಗುತ್ತಿಲ್ಲ. ಕಾಟಾಚಾರಕ್ಕೆ ಎಂಬAತೆ ನ್ಯಾ.ನಾಗಮೋಹನದಾಸ್ ಸಮಿತಿಯನ್ನು ರಚನೆ ಮಾಡಿದೆ. ರಾಜ್ಯ ಸರ್ಕಾರ ಕೇವಲ ಕಾಲಹರಣ ಮಾಡುವ ತಂತ್ರಕ್ಕೆ ಮೊರೆ ಹೋಗುತ್ತಿದ್ದು, ಈ ಬಗ್ಗೆ ಸಮಾಜದಲ್ಲಿ ವ್ಯಾಪಕ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.
ಸಚಿವರಾದ ಜಿ.ಪರಮೇಶ್ವರ, ಎಚ್.ಸಿ.ಮಹದೇವಪ್ಪ ಸೇರಿ ಹಲವರು ಈ ವಿಚಾರದಲ್ಲಿ ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಈ ಎಲ್ಲ ವಿಚಾರಗಳು ಈಗ ಗುಟ್ಟಾಗಿ ಉಳಿದಿಲ್ಲ. ಸಮಾಜದಲ್ಲಿ ವ್ಯಾಪಕ ಜಾಗೃತಿ ಮೂಡಿಸುವ ಕೆಲಸವನ್ನು ಒಕ್ಕೂಟ ಗಟ್ಟಿಯಾಗಿ ಮಾಡಲಿದೆ ಎಂದು ಹೇಳಿದರು.
ಒಕ್ಕೂಟದ ಸಹ ಸಂಚಾಲಕ ಶಿವಾನಂದ ಟವಳಿ ಅವರು ಮಾತನಾಡಿ, ಕಾಂಗ್ರೆಸ್ ಸರ್ಕಾರ ದಲಿತರ ಹಕ್ಕು ಕಸಿದುಕೊಳ್ಳುವ ಕೆಲಸ ಮಾಡುತ್ತಿದೆ. ನಿರಂತರವಾಗಿ ದಲಿತರಿಗೆ ಮೋಸ ಮಾಡುತ್ತ ಬಂದಿತ್ತು, ಒಳಮೀಸಲಾತಿ ವಿಚಾರವೂ ತಾಜಾ ಉದಾಹರಣೆ ಆಗಿದೆ. ಸುಪ್ರೀಂಕೋರ್ಟ್ ಸ್ಪಷ್ಟ ಆದೇಶ ನೀಡಿದರೂ ಸರ್ಕಾರ ತನ್ನ ಕರ್ತವ್ಯ ನಿರ್ವಹಿಸದಿರುವುದು ನಾಚಿಗೇಡಿನ ಸಂಗತಿ ಎಂದರು.
ಮುಖ0ಡರಾದ ಸತೀಶ ಮಾದರ, ಯುವರಾಜ, ಶಂಕರ ಚಂದಾವರಿ, ಹಣಮಂತ ಮುತ್ತತ್ತಿ ಮತ್ತಿರರು ಇದ್ದರು.