ಬಾಗಲಕೋಟೆ: ರೈತರು, ಬಡವರ ಮಕ್ಕಳು, ಭಕ್ತರು ಇದ್ದರೇ ಮಠ, ಮಾನ್ಯಗಳು ನಡೆಯುತ್ತವೆ. ಇಲ್ಲ ಅಂದ್ರೇ ನಡೆಯಲ್ಲ. ದಶಕಗಳಿಂದ ಹೋರಾಟ ಮಾಡಿದರು ಯೋಜನೆ ಮಾಡುವದಿಲ್ಲಂದ್ರೇ ಹೇಗೆ? ಅಧಿವೇಶದೊಳಗು ಧ್ವನಿ ಎತ್ತಿ. ಡಿ.೧೧ ರಂದು ಸಿಎಂ ಸಿದ್ದರಾಮಯ್ಯ ಸಭೆ ಕರೆದಿದ್ದಾರೆ. ಅಂದು ಸರ್ಕಾರದ ನಿರ್ಧಾರ ನೋಡಿಕೊಂಡಿಕೊಂಡು ಹೋರಾಟದ ಬಗ್ಗೆ ಕಠೋರ ತೀರ್ಮಾಣ ಮಾಡೋನ ಎಂದು ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.
ಇಲ್ಲಿನ ಡಿಸಿ ಕಚೇರಿ ಎದುರು ಕೃಷ್ಣಾ ಮೇಲ್ದಂಡೆ ಯೋಜನೆ ಬಾಽತ ಸಂತ್ರಸ್ತರ ಹೋರಾಟದಲ್ಲಿ ಸೋಮವಾರ ಭಾಗವಹಿಸಿ ವಿವಿಧ ಮಠಾಧೀಶರ ಪರವಾಗಿ ಮಾತನಾಡಿದ ಶ್ರೀಗಳು, ಎಲ್ಲ ಪಕ್ಷದ ಸರ್ಕಾರದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ದಕ್ಷಿಣಾ ಕರ್ನಾಟಕದವರು ತಮ್ಮ ಭಾಗದ ಎಲ್ಲ ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುತ್ತಾರೆ. ನಮ್ಮವರು ಹಠಕ್ಕೆ ಬೀಳೂದಿಲ್ಲ. ಅದಕ್ಕೆ ಯಾವ ಸರ್ಕಾರಗಳು ಭಾಗುವದಿಲ್ಲ. ಈ ಸಾರಿ ಹಾಗೇ ಆಗುವುದಕ್ಕೆ ಬಿಡಬಾರದು ಎಂದು ಎಚ್ಚರಿಸಿದರು.
ದಕ್ಷಿಣ ಕರ್ನಾಟಕದವರು ಬುದ್ದಿವಂತರು. ಉತ್ತರ ಕರ್ನಾಟಕದವರು ಹೃದಯವಂತರು. ಆದರೇ ಈಗಿನ ಕಾಲಕ್ಕೆ ನಡೆಯುವುದಿಲ್ಲ. ಬುದ್ಧಿವಂತಿಕೆ, ಕಠಿಣ ನಿರ್ಧಾರ ಬೇಕಾಗುತ್ತದೆ. ಕಾವಿ, ಖಾದಿ, ಕರಿ ಕೋಟ್ ಒಂದಾಗಿವೆ. ಇನ್ ಮುಂದು ಅಂಜುವ ಅಗತ್ಯವಿಲ್ಲ. ಯಾವುದೇ ಕಾರಣಕ್ಕೂ ಸರ್ಕಾರ ತನ್ನ ಭರವಸೆ ಹುಸಿಗೊಳಿಸಬಾರದು. ಸ್ವಾಮೀಜಿಗಳು ತಿರುಗಿ ಬಿದ್ದರು ಯಾವ ಸರ್ಕಾರಗಳು ಇದ್ದರು ಅಲುಗಾಡುತ್ತವೆ. ನಾಲ್ಕ ದಿವಸ ಕಾಯೋಣ. ಸರ್ಕಾರದ ನಿರ್ಧಾರ ಮಾಡಲಿಲ್ಲ ಅಂದ್ರೇ ೫೦೦ ಕ್ಕೂ ಹೆಚ್ಚು ಮಠಾಧೀಶರನ್ನು ಕರೆದುಕೊಂಡು ೮ ಜಿಲ್ಲೆಗಳ ಜನತೆ ಜೊತೆ ಬೆಳಗಾವಿ ಸುವರ್ಣ ಸೌಧಕ್ಕೆ ಹೋಗೋಣ. ಇದ್ದು ಸಂತ್ತಂಗ್ ಆಗೋದ ಸಾಕು ಇನ್ನು ಎಂದು ತಿಳಿಸಿದರು.
ಕಲಬುರ್ಗಿ ಜಿಲ್ಲೆಯ ಸೂಗೂರುಮಠದ ಚನ್ನರುದ್ರ ಶಿವಾಜಿ ಸ್ವಾಮೀಜಿ ಮಾತನಾಡಿ, ನಮ್ಮ ಭಾಗದ ಜನರು ಪುಣ್ಯ ಮಾಡಿದ್ದೇವಾ, ಪಾಪ ಮಾಡಿದ್ದೇವಾ ನೋಡುವಂಗ ಆಗಿದೆ. ಮಠಕ್ಕೆ ಬರುವ ಭಕ್ತರ ಸಮಸ್ಯೆ ಇದು. ಸಾವಿರಾರ ಸಂಖ್ಯೆಯಲ್ಲಿ ಮಠಾಧೀಶರು ಬರುತ್ತೇವೆ. ವಿಧಾನ ಸೌಧ ಚಲೋ ಮಾಡೋನ. ರೈತರು ಅಂಜುವ ಅಗತ್ಯವಿಲ್ಲ. ಸರ್ಕಾರಕ್ಕೆ ಬಿಸಿ ಮುಟ್ಟಿಸೋಣ ಎಂದರು.
ಗುಳೇದಗುಡ್ಡದ ಬ್ರಹ್ಮನಮಠದ ಪಟ್ಟದಾರ್ಯ ಸ್ವಾಮೀಜಿ ಮಾತನಾಡಿ, ಫಲಾನುಭವಿ ಜಿಲ್ಲೆಯವರು ಮೌನಕ್ಕೆ ಶರಣಾದರೇ ಹೇಗೆ. ಭೂತಕಾಲ ಬಿಟ್ಟು ವರ್ತಮಾನವನ್ನು ನೋಡನ. ಮತ ಬ್ಯಾಂಕ್‌ಗಾಗಿ ಸರ್ಕಾರಗಳು ಮೋಸ ಮಾಡುತ್ತವೆ. ಇದಕ್ಕೆ ಸೊಪ್ಪು ಹಾಕುವ ಅಗತ್ಯವಿಲ. ಹೋರಾಟಕ್ಕೆ ಖಂಡಿತ ಜಯ ಸಿಗಲಿದೆ ಎಂದು ಹೇಳಿದರು.
ಸಿಂದಗಿ ಸಾರಂಗ ಮಠದ ಸ್ವಾಮೀಜಿ ಮಾತನಾಡಿ, ೧೯೯೧ ರಲ್ಲಿ ಸಿದ್ದೇಶ್ವರ ಶ್ರೀಗಳು ನೇತೃತ್ವದಲ್ಲಿ ಆಲಮಟ್ಟಿಯಲ್ಲಿ ಕೃಷ್ಣಾ ಮೇಲ್ದಂಡೆಗಾಗಿ ಹೋರಾಟ ಮಾಡಿದ್ದೇವು. ಅಂದಿನ ಸಿಎಂ ಬಂಗಾರಪ್ಪ ಆಗಮಿಸಿ ಪುಂಕಾನು ಪುಂಕವಾಗಿ ಭಾಷಣ ಮಾಡಿದರು. ನಮಗೂ ನಂಬಿಕೆ ಬಂತು. ದುರಂತ ಅಂದರೇ ಒಂದು ರೂ. ಅನುದಾನ ಕೊಡಲಿಲ್ಲ. ಒಂದು ಹೆಜ್ಜೆ ಮುಂದೆ ಯೋಜನೆ ಸಾಗಲಿಲ್ಲ ಎಂದು ಕಿಡಿಕಾರಿದರು.
ಮಾಜಿ ಸಚಿವ ಎಸ್.ಆರ್.ಪಾಟೀಲ ಮಾತನಾಡಿ, ರಾಜಕೀಯ ಹಿತಾಸಕ್ತಿಯಿಂದ ಈ ಯೋಜನೆ ನೆನೆಗುದಿಗೆ ಬಿದ್ದಿದೆ. ದೇಶದಲ್ಲೇ ಅತೀ ದೊಡ್ಡ ನೀರಾವರಿ ಯುಕೆಪಿ. ೬೦ ವರ್ಷವಾದರು ಪೂರ್ಣಗೊಳ್ಳುತ್ತಿಲ್ಲ. ೨೦೧೫ ರಲ್ಲಿ ತೆಲಂಗಾಣ ಉದಯವಾಯಿತು. ೨೦೧೬ ರಲ್ಲಿ ಕಾಳೇಶ್ವರ ಯೋಜನೆ ಶುರು ಮಾಡಿತು. ಅಡಿಗಲ್ಲು ದಿನವೇ ಸಿಎಂ ಚಂದ್ರಶೇಖರ ರಾವ ಉದ್ಘಾಟನಾ ದಿನಾಂಕ ಪ್ರಕಟಿಸಿದರು. ಅದರಂತೆ ನಡೆದುಕೊಂಡರು. ಅಂತಹ ಬದ್ಧತೆ ಸರ್ಕಾರ ನಮ್ಮಲ್ಲಿ ಇಲ್ಲ. ಉ-ಕ ಬಗ್ಗೆ ಎಲ್ಲ ಸರ್ಕಾರಗಳು ನಿರ್ಲಕ್ಷ್ಯ ಧೋರಣೆ ಮಾಡುತ್ತಿದ್ದಾರೆ. ಬೆಂಗಳೂರಿನ ಎರಡು ಪ್ಲೆ ಓವರ್ ಓವರ್ ಮಾಡುವುದನ್ನು ಬಿಟ್ಟರೇ ನಮ್ಮ ಯೋಜನೆ ಆಗುತ್ತದೆ. ಪ್ರತಿ ವರ್ಷ ೨೫ ಸಾವಿರ ಕೋಟಿ ರೂ. ಕೊಟ್ಟರೇ ಮೂರು ವರ್ಷದಲ್ಲಿ ಮುಗಿಯುತ್ತದೆ ಎಂದು ಹೇಳಿದರು.
ಬಸವರಾಜ ಶಿವಾಚಾರ್ಯ ಸ್ವಾಮೀಜಿ, ಗುಳೇದಗುಡ್ಡ ಒಪ್ಪತ್ತೇಶ್ವರ ಸ್ವಾಮೀಜಿ, ಶಂಕರರಾಜೇಂದ್ರ ಸ್ವಾಮೀಜಿ, ಅಮೀನಗಡದ ಶಂಕರಾಜೇಂದ್ರ ಸ್ವಾಮೀಜಿ, ಆಮಮೇಲದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಚನ್ನವೀರ ಶಿವಾಚಾರ್ಯ ಸ್ವಾಮೀಜಿ, ಅಗಡಿ ಶ್ರೀಗಳು, ದೇವರ ಹಿಪ್ಪರಗಿಯ ಮಡಿವಾಳ ಶಿವಾಚಾರ್ಯ ಸ್ವಾಮೀಜಿ, ಚನ್ನಮಲ್ಲ ದೇವರು, ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ, ಅಕ್ಕಲಕೋಟ ಶಿವಾಚಾರ್ಯ ಸ್ವಾಮೀಜಿ, ರೇವಣ ಸಿದ್ದೇಶ್ವರ ಸ್ವಾಮೀಜಿ, ನಿಜಲಿಂಗ ಶಿವಾಚಾರ್ಯ ಸ್ವಾಮೀಜಿ, ಪ್ರಭು ಸ್ವಾಮೀಜಿ, ಗುರುಪಾದ ಸ್ವಾಮೀಜಿ, ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಡಾ.ವಿಶ್ವ ಪ್ರಭು ಮಹಾ ಸ್ವಾಮೀಜಿ ಸೇರಿದಂತೆ ೧೫೦ ಕ್ಕೂ ಹೆಚ್ಚು ಮಠಾಧೀಶರು ಭಾಗವಹಿಸಿದ್ದರು. ಹೋರಾಟ ಸಮಿತಿ ಗೌರವ ಅಧ್ಯಕ್ಷ ಅಜಯಕುಮಾರ ಸರನಾಯಕ, ಅಧ್ಯಕ್ಷ ಅದೃಶ್ಯಪ್ಪ ದೇಸಾಯಿ, ಅಶೋಕ ಲಾಗಲೂಟಿ, ಪ್ರಕಾಶ ಅಂತರಗೊಂಡ, ಹನುಮಂತ ಮಾವಿನಮರದ ಇತರರು ಇದ್ದರು.