ಹೊಳೆನರಸೀಪುರ: ಮೋದಿ ಉಪನಾಮ ಟೀಕೆ ಹಿನ್ನೆಲೆ ಮಾನನಷ್ಟ ಮೊಕದ್ದಮೆಯಡಿ ಗುಜರಾತ್ ಹೈ ಕೋರ್ಟ್ ಆದೇಶದಿಂದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರ ಸಂಸ್ತು ಸದಸ್ಯತ್ವ ರದ್ದಗಿದ್ದು, ಇದರ ಹಿಂದೆ ಬಿಜೆಪಿ ಪಿತೂರಿ ಇದೆ ಎಂದು ಆರೋಪಿ ರಾಜ್ಯದಲ್ಲಿ ಡಿಸಿಎಂ ಡಿ.ಕೆ .ಶಿವಕುಮಾರ್ ಪ್ರತಿಭಟನೆಗೆ ಕರೆ ನೀಡುವುದು ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ಬಿಜೆಪಿ ಮುಖಂಡ ಜಿ.ದೇವರಾಜೇಗೌಡ ಆರೋಪಿಸಿದರು.
ರಾಜ್ಯದ ಕಾಂಗ್ರೆಸ್ ಮುಖಂಡರು ಪ್ರತಿಭಟನೆಗೆ ಕರೆ ಕೊಟ್ಟಿರುವ ವೀಡಿಯೋ ಆಧಾರದ ಮೇಲೆ ಕಾನೂನು ತಜ್ಞರ ಸಲಹೆ ಪಡೆಯಲಾಗುವುದು. ಯಾವ ಯಾವ ಜಿಲ್ಲೆಯಲ್ಲಿ ನ್ಯಾಯಾಲಯದ ತೀರ್ಪಿನ ವಿರುದ್ಧ ಪ್ರತಿಭಟನೆ ಮಾಡಿದ್ದಾರೋ ಅಂತಹವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲಾಗುವುದು. ಮೊದಲಿಗೆ ಹಾಸನ ಜಿಲ್ಲೆಯಿಂದಲೇ ಈ ಕಾರ್ಯ ಆರಂಭ ಮಾಡಲಾಗುವುದು ಎಂದು ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಸಂವಿಧಾನಬದ್ದ ತೀರ್ಪಿನಿಂದ ಅವರಿಗೆ ನೋವಾಗಿದ್ದಲ್ಲಿ ಅವರು ಮೇಲ್ಮನವಿ ಸಲ್ಲಿಸಲು ಸರ್ವೋಚ್ಚ ನ್ಯಾಯಾಲಯಲ್ಲಿ ಅವಕಾಶವಿದೆ. ಅವರು ಮನವಿ ಸಲ್ಲಿಸಲು ಅರ್ಹರಿದ್ದಾರೆ. ಅದರೆ ಕರ್ನಾಟಕದ ಡಿಸಿಎಂ ಡಿ.ಕೆ.ಶಿವಕುಮಾರ್ ಜವಾಬ್ದಾರಿ ಸ್ಥಾನದಲ್ಲಿದ್ದುಕೊಂಡು ಇಡೀ ರಾಜ್ಯದಲ್ಲಿ ಬಿಜೆಪಿ ವಿರುದ್ಧ ಪ್ರತಿಭಟನೆ ಮಾಡಲು ಕರೆ ಕೊಟ್ಟಿದ್ದಾರೆ. ತಾವು ಉಪಮುಖ್ಯಮಂತ್ರಿಯಾಗಿ ಪ್ರತಿಭಟನೆಗೆ ಕರೆ ಕೊಡುವುದರ ಮೂಲಕ ನ್ಯಾಯಾಲಯದ ತೀರ್ಪಿನ ವಿರುದ್ಧ ನಡೆದುಕೊಳ್ಳುತ್ತಿರುವ ಅಮಾನವೀಯ ಕೃತ್ಯ ಎಂದು ಟೀಕಿಸಿದರು.
ಇದೇ ಸಂದರ್ಭದಲ್ಲಿ ನಾಗರಾಜ್ ಪಾಟೀಲ್ ಪ್ರಸನ್ನ ಇದ್ದರು.