ಜಿಲ್ಲೆ

ಡಿ.ಎಸ್.ಹಳ್ಳಿಯಲ್ಲಿ ನವರಾತ್ರಿ ಉತ್ಸವ

ಚಿತ್ರದುರ್ಗ: ತಾಲೂಕಿನ ದೊಡ್ಡಸಿದ್ಧವ್ವನಹಳ್ಳಿಯ ಕಾಳಿಕಾ ದೇವಿ ದೇಗುಲದಲ್ಲಿ ನವರಾತ್ರಿ ಮಹೋತ್ಸವ ಆರಂಭವಾಗಿದ್ದು, ಗುರುವಾರ ಗಂಗಾಪೂಜೆ, ಅಭಿಷೇಕ, ನವಗ್ರಹ ಹೋಮ, ಪೂರ್ಣಾಹುತಿ ನಂತರ ಮಹಾಮಂಗಳಾರತಿ ನೆರವೇರಿತು.

ಅಂತರಹಳ್ಳಿ ಮಠದ ವಿಶ್ವಕರ್ಮ ಸಮುದಾಯದ ಶ್ರೀ ಸೂರ್ಯನಾರಾಯಣ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಅ. 11ರ ವರೆಗೂ ನಿತ್ಯ ದೇವಿ ಮಹಾತ್ಮೆ ಪಾರಾಯಣ ನಡೆಯಲಿದೆ. ವಿಜಯದಶಮಿ ದಿನದಂದು ಬನ್ನಿ ಮುಡಿಯುವ ಪೂಜಾ ಕಾರ್ಯಕ್ರಮವಿದೆ ಎಂದು ವಿಶ್ವಕರ್ಮ ಸಮಾಜ ತಿಳಿಸಿದೆ.