ದಕ್ಷಿಣ ಕೊರಿಯಾದ ಎಂಎನ್‌ಸಿ ಕಂಪನಿಗೆ ಆಯ್ಕೆಯಾದ ವಿಜಯಪುರದ ಬಿಎಲ್‌ಡಿಇ ಸಂಸ್ಥೆಯ ಡಾ. ಫ.ಗು. ಹಳಕಟ್ಟಿ ಅಭಿಯಾಂತ್ರಿಕ ಮತ್ತು ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳೊಂದಿಗೆ ಮಹಾವಿದ್ಯಾಲಯದ ನಿರ್ದೇಶಕ ಡಾ. ವಿ.ಜಿ. ಸಂಗಮ ಮತ್ತು ಪ್ಲೇಸ್ಮೆಂಟ್ ಅಧಿಕಾರಿ ಪ್ರೊ. ಪ್ರಶಾಂತ ಪಾಟೀಲ ಇದ್ದಾರೆ. 
ಜಿಲ್ಲೆ

ಡಿ.ಎನ್. ಸೊಲ್ಯೂಷನ್‌ಗೆ ಎಂಟು ವಿದ್ಯಾರ್ಥಿಗಳು ಆಯ್ಕೆ

ವಿಜಯಪುರ: ನಗರದ ಬಿಎಲ್‌ಡಿಇ ಸಂಸ್ಥೆಯ ಡಾ. ಫ.ಗು. ಹಳಕಟ್ಟಿ ಅಭಿಯಾಂತ್ರಿಕ ಮತ್ತು ತಾಂತ್ರಿಕ ಮಹಾವಿದ್ಯಾಲಯದ ಎಂಟು ವಿದ್ಯಾರ್ಥಿಗಳು ದಕ್ಷಿಣ ಕೊರಿಯಾದ ಬಹುರಾಷ್ಟ್ರೀಯ ಕಂಪನಿ ಡಿಎನ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ಆಯ್ಕೆಯಾಗಿದ್ದಾರೆ.

ಮಹಾವಿದ್ಯಾಲಯದ ಮೆಕ್ಯಾನಿಕಲ್ ಮತ್ತು ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ವಿಭಾಗಗಳಿಂದ ವಿದ್ಯಾರ್ಥಿಗಳು ಆಯ್ಕೆಯಾಗಿದ್ದು, ವಾರ್ಷಿಕ 4.80 ಲಕ್ಷ ರೂಗಳ ಪ್ಯಾಕೇಜ್ ಪಡೆಯಲಿದ್ದಾರೆ. ಸಂಸ್ಥೆ ಅಧ್ಯಕ್ಷ, ಸಚಿವ ಎಂ.ಬಿ. ಪಾಟೀಲರು ಇತ್ತೀಚೆಗೆ ದಕ್ಷಿಣ ಕೊರಿಯಾಕ್ಕೆ ಭೇಟಿ ನೀಡಿ ಬಹುರಾಷ್ಟ್ರೀಯ ಕಂಪನಿಯಲ್ಲಿ ವಿದ್ಯಾರ್ಥಿಗಳು ಸ್ಥಾನ ಪಡೆಯಲು ಬೆಂಬಲಿಸಿದ್ದರು.

ವಿದ್ಯಾರ್ಥಿಗಳ ಆಯ್ಕೆ ಕುರಿತು ನಿರ್ದೇಶಕ ಡಾ.ವಿ.ಜಿ. ಸಂಗಮ ಮತ್ತು ಪ್ಲೇಸ್ಮೆಂಟ್ ಅಧಿಕಾರಿ ಪ್ರೊ. ಪ್ರಶಾಂತ ಪಾಟೀಲ ಘೋಷಣೆ ಮಾಡಿದ್ದಾರೆ.

ವಿದ್ಯಾರ್ಥಿಗಳು ನಿಯೋಜನೆಗೊಂಡಿದ್ದಕ್ಕಾಗಿ ಸಂಸ್ಥೆ ಅಧ್ಯಕ್ಷ ಡಾ. ಎಂ.ಬಿ. ಪಾಟೀಲ, ಪ್ರಧಾನ ಕಾರ್ಯದರ್ಶಿ ಸುನಿಲಗೌಡ ಪಾಟೀಲ, ನಿರ್ದೇಶಕ ರಾಹುಲ್ ಪಾಟೀಲ, ಉಪ ಪ್ರಾಚಾರ್ಯ ಡಾ. ಲೀನಾ ರಾಘಾ, ಡಾ. ಪಿ.ವಿ. ಮಾಳಜಿ ಹರ್ಷ ವ್ಯಕ್ತಪಡಿಸಿದ್ದಾರೆ.

ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಾದ ಆನಂದ ಕುರಪಿ, ಚೇತನ ಕೂಚಬಾಳ, ಗಂಗಾಧರ ಡಂಗಿ, ಜಯಂತ ಕೋಟಿ ಮತ್ತು ವೀರೇಶ ನವಪಾಟೀಲ ಹಾಗೂ ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ವಿಭಾಗದ ಈರಣ್ಣ ಕೋನಳ್ಳಿ, ರಾಧಾ ಕುಲಕರ್ಣಿ, ಸಂಧ್ಯಾರಾಣಿ ವಾಗಮೋರೆ ಕಂಪನಿಗೆ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.