ಮೈಸೂರು: ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದಿಂದ ಆಯೋಜಿಸಿರುವ ದಸರಾ ವಸ್ತುಪ್ರದರ್ಶನದಲ್ಲಿ ಡಿಸೆಂಬರ್ 4ರವರೆಗೆ ನಿತ್ಯ ಸಂಜೆ 7ರಿಂದ 9.30ರವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.
ನ.30ರಂದು ದತ್ತಗಿರಿಯ ಅಲೆಕ್ಸಾಂಡರ್ ಅವರಿಂದ ಸುಗಮ ಸಂಗೀತ, ಬೆಂಗಳೂರಿನ ಶ್ರೀರೇಣುಕಾಂಬ ಕಲಾಸಂಘದಿಂದ ನಾಟಕ, ಡಿಸೆಂಬರ್ 1ರಂದು ಎಂ.ಎನ್.ವೈಷ್ಣವಿ ಅವರಿಂದ ಸುಗಮಸಂಗೀತ, ಮೈಸೂರು ರಾಘವೇಂದ್ರ ರತ್ನಾಕರ್ ಅವರಿಂದ ಚಲನಚಿತ್ರಗೀತೆ, ಡಿ.2ರಂದು ವಿ.ನಂಜುಂಡ ಅವರಿಂದ ರಸಮಂಜರಿ, ಸರಸ್ವತಿ ಕೃಪಾ ಪೋಷಿತ ನಾಟಕ ಮಂಡಳಿಯಿಂದ ನಾಟಕ, ಡಿ.3ರಂದು ಸುಧಾ ಬರಗೂರು ಅವರಿಂದ ನಗೆಹಬ್ಬ, ಡಿ.4ರಂದು ಬೆಂಗಳೂರಿನ ಕಲ್ಪವೃಕ್ಷ ಟ್ರಸ್ಟ್‌ನಿಂದ ನಾಟಕ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.