ಜಿಲ್ಲೆ

ಡಿ. 4 ರಿಂದ 6ರವರೆಗೆ ಜಿಲ್ಲೆಯಾದ್ಯಂತ ಕನ್ನಡ ಜ್ಯೋತಿ ರಥಯಾತ್ರೆ ಸಂಚಾರ

ಚಾಮರಾಜನಗರ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಕನ್ನಡ ಜ್ಯೋತಿ ಹೊತ್ತ ರಥಯಾತ್ರೆಯು ಜಿಲ್ಲೆಯಾದ್ಯಂತ ಡಿ. 4 ರಿಂದ 6 ವರೆಗೆ ಸಂಚರಿಸಿ ಕನ್ನಡ ನಾಡು, ನುಡಿ ಬಗ್ಗೆ ನಾಗರಿಕರಿಗೆ ಜಾಗೃತಿ ಮೂಡಿಸಲಿದೆ.

ಕನ್ನಡ ಜ್ಯೋತಿ ಹೊತ್ತ ರಥಯಾತ್ರೆಯು ಡಿಸೆಂಬರ್ 4ರಂದು ಹನೂರು ಹಾಗೂ ಕೊಳ್ಳೇಗಾಲ ಭಾಗದಲ್ಲಿ ಸಂಚರಿಸಲಿದೆ.ಡಿ. 5ರಂದು ಯಳಂದೂರು ಹಾಗೂ ಚಾಮರಾಜನಗರದಲ್ಲಿ ಸಂಚರಿಸಲಿದೆ. ಡಿ.6ರಂದು ಗುಂಡ್ಲುಪೇಟೆ ಭಾಗದಲ್ಲಿ ಸಂಚರಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.