ವಿರಾಜಪೇಟೆ ಆಕ್ಸ್‌ಫರ್ಡ್ ಫುಟ್‌ಬಾಲ್ ಕ್ಲಬ್ ಸಂಸ್ಥೆಯ ಸುದ್ದಿಗೋಷ್ಠಿ. 
ಜಿಲ್ಲೆ

ಡಿ.27ರಿಂದ ರಾಷ್ಟ್ರಮಟ್ಟದ ಕಾಲ್ಚೆಂಡು ಪಂದ್ಯಾಟ

ವಿರಾಜಪೇಟೆ: ವಿರಾಜಪೇಟೆ ಆಕ್ಸ್‌ಫರ್ಡ್ ಫುಟ್‌ಬಾಲ್ ಕ್ಲಬ್ ವತಿಯಿಂದ ಡಿಸೆಂಬರ್ 27ರಿಂದ 30ರವರೆಗೆ ವಿರಾಜಪೇಟೆ ಸಂತ ಅನ್ನಮ್ಮ ಕಾಲೇಜು ಮೈದಾನದಲ್ಲಿ 9+3 ಮಾದರಿಯ ರಾಷ್ಟ್ರಮಟ್ಟದ ಆಲ್ ಇಂಡಿಯಾ ಮುಕ್ತ ಕಾಲ್ಚೆಂಡು ಪಂದ್ಯಾಟವನ್ನು ಆಯೋಜಿಸಲಾಗಿದೆ ಎಂದು ಸಂಸ್ಥೆ ಅಧ್ಯಕ್ಷ ರಾನ್ಸ್‌ನ್ ಚಾಕೋ ತಿಳಿಸಿದರು.

2012ರಲ್ಲಿ ಆಕ್ಸ್‌ಫರ್ಡ್ ಫುಟ್ಬಾಲ್ ಸಂಸ್ಥೆಯನ್ನು ಪ್ರಾರಂಭಿಸಲಾಯಿತು. ಕಳೆದ 3 ವರ್ಷಗಳಿಂದ ಫುಟ್ಬಾಲ್ ಪಂದ್ಯಾಟವನ್ನು ನಡೆಸಲಾಗುತ್ತಿದೆ. ಪಂದ್ಯಾಟವನ್ನು ಮೇ 27ರಿಂದ 29 ರವರೆಗೆ ನಡೆಸಲು ಉದ್ದೇಶಿಸಲಾಗಿತ್ತು. ಮಳೆಯ ಕಾರಣದಿಂದಾಗಿ ಮುಂದೂಡಲಾಗಿತ್ತು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವಿಜೇತರಿಗೆ 1ಲಕ್ಷ, ಪರಾಜಿತರಿಗೆ 75 ಸಾವಿರ ರೂ. ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು. ತಂಡದ ಹೆಸರು ನೋಂದಣಿಗೆ ಡಿ.20 ಕೊನೆಯ ದಿನವಾಗಿದ್ದು, ಮೊದಲು ಬಂದ 30 ತಂಡಗಳಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ಹೇಳಿದರು.

ಹೆಚ್ಚಿನ ವಿವಿರಗಳಿಗೆ ಕಾರ್ಯದರ್ಶಿ ಶಾಜು ಮೊ.9901699062, ಉಪಾಧ್ಯಕ್ಷ ರಾಜ ಮೊ.9448721129 ಸಂಪರ್ಕಿಸಬಹುದು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ರಾಜ, ಕಾರ್ಯದರ್ಶಿ ಶಾಜು, ಜಂಟಿ ಕಾರ್ಯದರ್ಶಿ ಲೋಕೇಶ್, ಖಜಾಂಚಿ ಸುನೀಲ್ ಕುಮಾರ್ ಉಪಸ್ಥಿತರಿದ್ದರು.