ಜಿಲ್ಲೆ

ಡಿ.10ರಿಂದ ಜಿಲ್ಲಾ ಮಟ್ಟದ ಹಾಕಿ ಟೂರ್ನಮೆಂಟ್

Kodagu

ಗೋಣಿಕೊಪ್ಪ: ಕ್‌ಗ್ಗಟ್ನಾಡ್ ಫ್ಲೈಯಿಂಗ್ ಎಲ್ಬೋಸ್ ಅಸೋಸಿಯೇಷನ್ ವತಿಯಿಂದ ಡಿಸೆಂಬರ್ 10 ರಿಂದ ಜಿಲ್ಲಾ ಮಟ್ಟದ (7 ಆಟಗಾರರನ್ನು ಒಳಗೊಂಡ) ಸೆವೆನ್ ಎ ಸೈಡ್ ಹಾಕಿ ಟೂರ್ನಮೆಂಟ್-2022 ಆಯೋಜಿಸಲಾಗಿದೆ ಎಂದು ಅಸೋಷಿಯೇಷನ್ ಅಧ್ಯಕ್ಷ ಚಿರಿಯಪಂಡ ಪವನ್ ಬಿದ್ದಪ್ಪ ತಿಳಿಸಿದ್ದಾರೆ.


ಡಿಸೆಂಬರ್ 10, 11 ಮತ್ತು 12 ರಂದು ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆಯ ಟರ್ಫ್ ಮೈದಾನದಲ್ಲಿ ನಡೆಸಲಾಗುವುದು. ಗ್ರಾಮೀಣ ಮಟ್ಟದ ಆಟಗಾರರಿಗೆ ಮುಕ್ತ ಅವಕಾಶವಿದ್ದು, ಒಂದು ತಂಡದಲ್ಲಿ 7 ಆಟಗಾರರು ಆಡಿಸಲಾಗುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಒಂದು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗರಿಷ್ಠ 2 ತಂಡಗಳು ಮಾತ್ರ ಭಾಗವಹಿಸಬಹುದಾಗಿದೆ. ಆಯಾ ತಂಡಗಳಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಟಗಾರರು ಮಾತ್ರ ಆಡಲು ಅವಕಾಶವಿದ್ದು, ಅತಿಥಿ ಆಟಗಾರರಿಗೆ ಅವಕಾಶವಿಲ್ಲ. ಜಿಲ್ಲೆಯ ಯಾವುದೇ ಗ್ರಾಮ ಪಂಚಾಯಿತಿ ಮಟ್ಟದ ತಂಡಗಳು ಭಾಗವಹಿಸಬಹುದಾಗಿದೆ. ಗ್ರಾಮದ ಆಟಗಾರ ಬೇರೆ ಜಿಲ್ಲೆ, ರಾಜ್ಯ, ರಾಷ್ಟ್ರ ಮಟ್ಟದಲ್ಲಿದ್ದರೂ ಗ್ರಾಮ ಪಂಚಾಯಿತಿ ಮಟ್ಟದ ತಂಡಕ್ಕೆ ಪ್ರತಿನಿಧಿಸಬಹುದಾಗಿದೆ. ಆಟಗಾರರು ತಮ್ಮ ಆಧಾರ್ ಅಥವಾ ಪಡಿತರ ಚೀಟಿ ನಕಲಿ ಪ್ರತಿ ನೀಡಿ ದೃಢೀಕರಿಸಿಕೊಳ್ಳಬೇಕಾಗಿದೆ ಎಂದರು.


ನವೆಂಬರ್ 22ರೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕು. 3 ದಿನಗಳ ಟೂರ್ನಿಯಲ್ಲಿ 32 ತಂಡಗಳು ಮಾತ್ರ ಭಾಗವಹಿಸಲು ಅವಕಾಶವಿದ್ದು, ಮೊದಲು ಹೆಸರು ನೋಂದಾಯಿಸಿಕೊಳ್ಳುವ 32 ತಂಡಗಳಿಗೆ ಅವಕಾಶ ನೀಡುವುದಾಗಿ ತಿಳಿಸಿದರು. ಹೆಚ್ಚಿನ ಮಾಹಿತಿಗೆ ಮೊ.9980989695, 9686724532 ಸಂಪರ್ಕಿಸಬಹುದಾಗಿದೆ.
ಗೋಷ್ಠಿಯಲ್ಲಿ ಉಪಾಧ್ಯಕ್ಷ ಕೂಕಂಡ ಬಿದ್ದಪ್ಪ, ಕಾರ್ಯದರ್ಶಿ ಮಾಚಿಮಾಡ ಕಾರ್ಯಪ್ಪ, ಖಜಾಂಚಿ ತಾಣಚ್ಚೀರ ನಿಖಿಲ್, ಜಂಟಿ ಕಾರ್ಯದರ್ಶಿ ಚಿರಿಯಪಂಡ ಸೌರಭ್ ಇದ್ದರು.