ಜಿಲ್ಲೆ

ಡಿ.1 ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಉಚಿತ ಪ್ಲಾಸ್ಟಿಕ್ ಶಸ್ತ್ರ ಚಿಕಿತ್ಸಾ ಶಿಬಿರ

ಹಾಸನ: ಡಿ.1 ರಿಂದ 13 ವರೆಗೆ ಆದಿ ಚುಂಚನಗಿರಿ ಆಸ್ಪತ್ರೆಯಲ್ಲಿ ಸೀಳು ತುಟಿ ಉಚಿತ ಪ್ಲಾಸ್ಟಿಕ್ ಶಸ್ತ್ರ ಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಲಾಗಿದೆ ಆಸ್ಪತ್ರೆಯ ಪಿಆರ್‌ಒ ಧರ್ಮೇಂದ್ರ ತಿಳಿಸದರು.

ಮಂಡ್ಯ ಜಿಲ್ಲೆ ಬಿ.ಜಿ.ನಗರದ ಆದಿ ಚುಂಚನಗಿರಿ ಆಸ್ಪತ್ರೆ ಟ್ರಸ್ಟ್, ಆದಿಚುಂಚನಗಿರಿ ವಿಶ್ವ ವಿದ್ಯಾಲಯ ಮತ್ತು ಆಸ್ಪತ್ರೆ, ರೋಟರಿ ಬೆಂಗಳೂರು ಉತ್ತರ ಹಾಗೂ ರೋಟೋಪ್ಲಾಸ್ಟ್ ಇಂಟರ್ ನ್ಯಾಷನಲ್, ಯುಎಸ್‌ಎ ಇವರ ಸಂಯುಕ್ತ ಆಶ್ರಯದಲ್ಲಿ ಸೀಳು ತುಟಿ, ಸೀಳು ಅಂಗುಳ ಹಾಗೂ ಸುಟ್ಟ ಗಾಯಗಳಿಂದ ಉಂಟಾದ ವಿರೂಪಗಳ ಬಗ್ಗೆ ಉಚಿತ ಶಸ್ತ್ರ ಚಿಕಿತ್ಸೆ ನಡೆಸಲಾಗುವುದು ಇದರಲ್ಲಿ ಸುಮಾರು 30 ಮಂದಿ ನುರಿತ ತಜ್ಞ ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಭೈರವೈಕ್ಯ ಪರಮಪೂಜ್ಯ ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ ಆಶಯ ಹಾಗೂ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ಆಶೀರ್ವಾದದಿಂದ ಕಳೆದ 10 ವರ್ಷಗಳಿಂದ ಈ ಶಿಬಿರ ನಡೆಸುಕೊಂಡು ಬರಲಾಗುತ್ತಿದ್ದು, ಈವರೆಗೆ ಸುಮಾರು 16 ಸಾವಿರ ಮಂದಿ ಪ್ರಯೋಜನ ಪಡೆದಿದ್ದಾರೆ ಎಂದರು.

3 ತಿಂಗಳಿಂದ 12 ವರ್ಷದವರೆಗೆ ಶಸ್ತ್ರ ಚಿಕಿತ್ಸೆಗೆ ಬರುವವರು ಹಾಗೂ ಅವರ ಸಂಬಂಧಿಕರಿಗೆ ವಸತಿ, ಊಟ, ವಾರ್ಡ್, ಶಸ್ತ್ರಚಿಕಿತ್ಸೆ, ಅಗತ್ಯ ಔಷಧ ವಿತರಣೆ ಎಲ್ಲವೂ ಉಚಿತವಾಗಿ ದೊರೆಯಲಿದೆ ಎಂದು ಹೇಳಿದರು. ಇದಕ್ಕಾಗಿ ಬಿಪಿಎಲ್, ಆಧಾರ್ ಸೇರಿದಂತೆ ಯಾವುದ ಕಾರ್ಡ್ ಹಾಜರು ಪಡಿಸಬೇಕಿಲ್ಲ ಎಂದು ತಿಳಿಸಿದರು.

ಆಸ್ಪತ್ರೆಯ ವೈದ್ಯ ಅಧೀಕ್ಷಕ ಡಾ. ರವಿ ಮಾತನಾಡಿ, ಶಿಬಿರದಲ್ಲಿ ಅಗತ್ಯವಿರುವ ಎಲ್ಲ ಚಿಕಿತ್ಸೆ, ಶಸ್ತ್ರ ಚಿಕಿತ್ಸೆಯನ್ನು ನುರಿತ ವೈದ್ಯರು ಉಚಿತವಾಗಿ ನಡೆಸಲಿದ್ದಾರೆ. ಈಗಾಗಲೇ ನೋಂದಣಿ ಶುರುವಾಗಿದ್ದು, ಶಿಬಿರದಲ್ಲಿ ಭಾಗವಹಿಸುವವರು, 9945558579, 9900758946, 7975102982 ಈ ನಂಬರನ್ನು ಸಂಪರ್ಕಿಸಿ ಅಥವಾ ಖುದ್ದು ಆಸ್ಪತ್ರೆಗೆ ಬಂದು ನೋಂದಣಿ ಮಾಡಿಕೊಳ್ಳಬಹುದು ಎಂದರು.

3 ತಿಂಗಳ ಮೇಲ್ಪಟ್ಟ ಎಲ್ಲರಿಗೂ ಈ ಶಸ್ತ್ರಚಿಕಿತ್ಸೆ ನಡೆಸಬಹುದು. ಆದರೆ ವಯಸ್ಸು ಮೀರಿದರೆ ಹಲವು ರೀತಿಯ ತೊಂದರೆ ಆಗಬಹುದು ಎಂಬ ಕಾರಣಕ್ಕೆ 12 ವರ್ಷ ವಯೋಮಿತಿ ನಿಗದಿ ಪಡಿಸಲಾಗಿದೆ.ಪ್ರತಿವರ್ಷದ ಶಿಬಿರದಲ್ಲೂ 120-130 ಮಂದಿಯನ್ನು ಶಸ್ತ್ರಚಿಕಿತ್ಸೆ ಆಯ್ಕೆ ಮಾಡಲಾಗುವುದು. ಅದಕ್ಕೂ ಮುನ್ನ ಮೊದಲ ದಿನ ಸ್ಕ್ರೀನಿಂಗ್ ಮಾಡಿ, ಶಸ್ತ್ರ ಚಿಕಿತ್ಸೆ ಹಾಗೂ ಬೇರೆ ಚಿಕಿತ್ಸೆ ಅಗತ್ಯವಿರುವವರನ್ನು ಆಯ್ಕೆ ಮಾಡಲಾಗುವುದು. ಈ ಮೊದಲು ಚಿಕಿತ್ಸೆ ಪಡೆದಿರುವವರೂ ಆಗಮಿಸಲಿದ್ದಾರೆ ಎಂದು ಹೇಳಿದರು.

ಸಂಬಂಧಪಟ್ಟವರು ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಮನವಿ ಮಾಡಿದರು. ಶ್ರೀಗಳ ಆಶೀರ್ವಾದ ಇರುವವರೆಗೂ ಈ ರೀತಿಯ ಉಚಿತ ಶಿಬಿರ ಮುಂದುವರಿಯಲಿದೆ ಎಂದರು.

ಸುದ್ದಿಗೋಷ್ಟಿಯಲ್ಲಿ ಪಿಆರ್‌ಒ ಶಿವಕುಮಾರ್ ಇದ್ದರು.