ಜಿಲ್ಲೆ

ಡಾಕ್ಟರ್ ರೋಗಿಗಳ ಪಾಲಿನ ದೇವರು

ಅಥಣಿ: ಶಾಸಕಾಂಗ ಮತ್ತು ಕಾರ್ಯಾಂಗದ ಸೇತುವೆಯಾಗಿ ಸಮಸ್ಯೆ ಪರಿಹರಿಸುವಲ್ಲಿ ಪತ್ರಿಕಾ ರಂಗದ ಕೊಡುಗೆ ಅಪಾರವಾಗಿದೆ ಎಂದು ರೋಟರಿ ಕ್ಲಬ್ ಸಂಸ್ಥಾಪಕ ಅಧ್ಯಕ್ಷ ಗಜಾನನ ಮಂಗಸೂಳಿ ಹೇಳಿದರು.

ಇಲ್ಲಿನ ರೋಟರಿ ಕ್ಲಬ್ ಸಹಯೋಗದಲ್ಲಿ ವಿಶ್ವ ವೈದ್ಯರ ಮತ್ತು ಪತ್ರಿಕಾ ದಿನಾಚರಣೆ ಅಂಗವಾಗಿ ಮಂಗಳವಾರ ವೈದ್ಯರು ಮತ್ತು ಪತ್ರಕರ್ತರನ್ನು ಸನ್ಮಾನಿಸಿ ಮಾತನಾಡಿದರು. ಜೀವರಕ್ಷಕರಾಗಿರುವ ವೈದ್ಯರು ಹಾಗೂ ಸಮಾಜಮುಖಿ ಕೆಲಸ ಮಾಡುತ್ತಿರುವ ಪತ್ರಕರ್ತರ ಸೇವೆ ಅನನ್ಯವಾಗಿದೆ. ವೈದ್ಯರು ರೋಗಿಗಳ ಪಾಲಿನ ದೇವರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿಜಯವಾಣಿ ಹೊರತಂದಿರುವ ವೈದ್ಯರ ದಿನಾಚರಣೆ ವಿಶೇಷ ಪುರವಣಿ ಒಂದು ಉತ್ತಮ ಕೈಪಿಡಿಯಾಗಿದೆ. ಆರೋಗ್ಯ ಮಾಹಿತಿ ಒಳಗೊಂಡ ಪತ್ರಿಕೆಯ ಕಾರ್ಯ ಶ್ಲಾಘನೀಯ ಎಂದರು.

ರೋಟರಿ ಕ್ಲಬ್ ಅಧ್ಯಕ್ಷ ಸಚಿನ ದೇಸಾಯಿ ಮಾತನಾಡಿದರು. ವಿಜಯವಾಣಿ ಪತ್ರಿಕೆ ಹೊರತಂದಿರುವ `ನಮಸ್ತೆ ಡಾಕ್ಟರ್ಸ್' ಪುರವಣಿಯನ್ನು ಗಣ್ಯರು ಬಿಡುಗಡೆ ಮಾಡಿದರು.

ವೈದ್ಯರಾದ ಡಾ.ಸಿ.ಎ.ಸಂಕ್ರಟ್ಟಿ, ಡಾ.ಮೇಘನಾ ಸಂಕ್ರಟ್ಟಿ, ಡಾ.ಸಿದ್ದು ಸಂಕ್ರಟ್ಟಿ, ಡಾ.ಶಶಿಧರ ಸಂಕ್ರಟ್ಟಿ, ವರದಿಗಾರರಾದ ರಾಜು ಗಾಲಿ, ಎ.ಎಸ್.ತೆಲಸಂಗ, ಜಬ್ಬಾರ್ ಚಿಂಚಲಿ, ಯಾಸಿನ್ ಜಾರೆ, ಪ್ರಶಾಂತ ಸತ್ತಿ ಇತರರನ್ನು ಸನ್ಮಾನಿಸಲಾಯಿತು.

ರೋಟರಿ ಸದಸ್ಯರಾದ ಅನಿಲ ಸೌದಾಗರ, ಶೇಖರ ಕೋಲಾರ, ಅರುಣ ಯಲಗುದ್ರಿ, ಅನಿಲ ದೇಶಪಾಂಡೆ, ಭರತ ಸೋಮಯ್ಯ, ಮೇಘರಾಜ ಪರಮಾರ, ಸಂತೋಷ ಭೊಮ್ಮಣವರ, ಶ್ರೀಕಾಂತ ಅಥಣಿ, ಸೋಮು ವಾಂಗಿ, ಶಶಿಕಾಂತ ಹುಲಕುಂದ ಇತರರು ಇದ್ದರು.