ಹುಮನಾಬಾದ್: ಡಾಕುಳಗಿ ಗ್ರಾಮದಲ್ಲಿ ಮಂಗಳವಾರ ಬೆಳಗ್ಗೆ ೯.೧೧ ಗಂಟೆಗೆ ಲಘು ಭೂಕಂಪ ಸಂಭವಿಸಿದ್ದು, ಗ್ರಾಮಸ್ಥರದಲ್ಲಿ ಭಯ ಆವರಿಸುವಂತೆ ಮಾಡಿದೆ. ರಿಕ್ಟರ್ ಮಾಪನದ ಪ್ರಕಾರ ೨.೬ ಭೂಕಂಪ ದಾಖಲಾಗಿದ್ದು, ಪಕ್ಕದ ಸಿಂದಬಂದಗಿ ಗ್ರಾಮದಲ್ಲಿ ಅದಕ್ಕಿಂತ ಕಡಿಮೆ ಪ್ರಮಾಣದಲ್ಲಿ ಭೂಕಂಪನ ಕಂಡುಬAದಿದೆ. ಗ್ರಾಮಕ್ಕೆ ತೆರಳಿದ ತಹಸೀಲ್ದಾರ್ ಅಂಜುಮ ತಬಸುಮ್ ಗ್ರಾಮಸ್ಥರೊಂದಿಗೆ ಚರ್ಚಿಸಿ ಧೈರ್ಯ ತುಂಬಿದ್ದಾರೆ. ಭೂಕಂಪನ ಗ್ರಾಮಸ್ಥರ ಅನುಭಕ್ಕೂ ಬಂದಿಲ್ಲ. ಯಾವುದೇ ಹಾನಿ ಸಂಭವಿಸಿಲ್ಲ ಎಂದು ತಹಸೀಲ್ದಾರ್ ತಿಳಿಸಿದ್ದಾರೆ. ಎರಡು ಗ್ರಾಮದಲ್ಲಿ ಎಲ್ಲ ಸಾರ್ವಜನಿಕರಿಗೆ ಪೊಲೀಸ್ ಮತ್ತು ತಾಲೂಕು ಆಡಳಿತದಿಂದ ತಿಳುವಳಿಕೆ ನೀಡಲಾಗಿದೆ. ಗ್ರೇಡ್-೨ ತಹಸೀಲ್ದಾರ್ ಮಂಜುನಾಥ ಪಂಚಾಳ, ಉಪ ತಹಸೀಲ್ದಾರ್ ಹಾವಗೀರಾವ, ಕಂದಾಯ ನಿರೀಕ್ಷಕ ಮುತ್ತಪ್ಪ, ಗ್ರಾಮ ಆಡಳಿತಾಧಿಕಾರಿ ಶ್ರೀಶೈಲ್, ಪಿಎಸ್‌ಐ ಅಯ್ಯಪ್ಪ ಇತರರಿದ್ದರು.