ಜಿಲ್ಲೆ

ಡಾ.ಸಂಗಣ್ಣ ಲಕ್ಕಣ್ಣವರಗೆ ಸನ್ಮಾನ

ವಿಜಯಪುರ: ವಿಜಯಪುರ ಜಿಲ್ಲಾಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕರಾಗಿ ಡಾ. ಸಂಗಣ್ಣ ಲಕ್ಕಣ್ಣವರ ನೇಮಕವಾಗಿದ್ದಾರೆ. ಈ ಮೊದಲು ಪ್ರಭಾರಿಯಾಗಿ ಜಿಲ್ಲಾ ಆಸ್ಪತ್ರೆಯ ಶಸ್ತ್ರಚಿಕಿತ್ಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ. ಸಂಗಣ್ಣ ಅವರಿಗೆ ಆರೋಗ್ಯ ಇಲಾಖೆ ಇದೀಗ ಜಿಲ್ಲಾ ಶಸ್ತ್ರಚಿಕಿತ್ಸಕ ಹುದ್ದೆಗೆ ನೇಮಕ ಮಾಡಿದೆ. ಈ ಹಿನ್ನೆಲೆ ಇಂದು ಜಿಲ್ಲಾ ಆಸ್ಪತ್ರೆಯ ವಾಹನ ಚಾಲಕರು, ಬ್ಲಡ್ ಬ್ಯಾಂಕ್ ವಾಹನ ಚಾಲಕರು ಸೇರಿದಂತೆ ಆಸ್ಪತ್ರೆಯ ವಿವಿಧ ವಾಹನಗಳ ಚಾಲಕರು ಸೇರಿ ಡಾ. ಸಂಗಣ್ಣ ಅವರನ್ನು ಸನ್ಮಾನಿಸಿ ಗೌರವಿಸಿದ್ರು. ಅತ್ಯಂತ ಸರಳ ಸಜ್ಜನಿಕೆಯ ಸ್ವಭಾವವುಳ್ಳ, ಬಡ ರೋಗಿಗಳ ಸಮಸ್ಯೆಗೆ, ಸಂಕಷ್ಟಕ್ಕೆ ಸ್ಪಂದಿಸುವ ಗುಣವುಳ್ಳ ವೈದ್ಯರು ಜಿಲ್ಲಾ ಶಸ್ತ್ರಚಿಕಿತ್ಸಕರಾಗಿದ್ದು ಬಡವರಿಗೆ ಅನುಕೂಲವಾಗಲಿದೆ. ಡಾ. ಸಂಗಣ್ಣ ಲಕ್ಕಣ್ಣವರ ಅವರನ್ನು ಸನ್ಮಾನಿಸಿದ ಸಂದರ್ಭದಲ್ಲಿ ಬ್ಲಡ್ ಬ್ಯಾಂಕ್ ವಾಹನ ಚಾಲಕ ಪ್ರಕಾಶ ಕೌಲಗಿ ಸೇರಿದಂತೆ ಇತರೆ ವಾಹನಗಳ ಚಾಲಕರು ಪಾಲ್ಗೊಂಡಿದ್ರು. ಇದೆ ವೇಳೆ ಆಸ್ಪತ್ರೆಯ ವೈದ್ಯರು, ವೈದ್ಯಕೀಯ ಸಿಬ್ಬಂದಿ, ವೈದ್ಯಕೇಯತರ ಸಿಬ್ಬಂದಿ ಸಹ ಸಂತಸ ವ್ಯಕ್ತಪಡಿಸಿದ್ರು.