ಜಿಲ್ಲೆ

ಡಾ. ಶ್ರೀಬಾಲಗಂಗಾಧರನಾಥ ಸ್ವಾಮೀಜಿಯವರ 78 ನೇ ವರ್ಷದ ಜಯಂತೋತ್ಸವ.

ಅರಸೀಕೆರೆ: ನಗರದ ಆದಿಚುಂಚನಗಿರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಬುಧವಾರ ಸಂಜೆ .ಭೈರವೈಕ್ಯ ಡಾ. ಶ್ರೀಬಾಲಗಂಗಾಧರನಾಥ ಸ್ವಾಮೀಜಿಯವರ 78 ನೇ ವರ್ಷದ ಜಯಂತೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಹಾಸನ ಶಾಖಾ ಮಠದ ಶ್ರೀಶಂಭುನಾಥ ಸ್ವಾಮೀಜಿ ಮಾತನಾಡಿ, ಭಾವಕ್ಯತೆ ಸಂದೇಶ ಸಾರುವಲ್ಲಿ ಆದಿಚುಂಚನಗಿರಿ ಶ್ರೀಮಠ ನೀಡಿರುವ ಕೊಡುಗೆ ಅನನ್ಯವಾದುದು ಎಂಬುದನ್ನು ಯಾರೂ ಅಲ್ಲಗಳೆಯುವಂತಿಲ್ಲ.ನಾಡಿನ ಉದ್ದಗಲಕ್ಕೂ ಶಾಲಾ,ಕಾಲೇಜುಗಳನು ತೆರೆಯುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯ ಕಹಳೆ ಮೊಳಗಿಸಿದ್ದರು ಎಂದರೆ ಅತಿಶಯೋಕ್ತಿ ಎನಿಸಲಾರದು.ಜತೆಗೆ ಬಡ ರೋಗಿಗಳ ಆರೋಗ್ಯ ಮನಗಂಡು ಆಸ್ಪತ್ರೆ ಕಟ್ಟಿಸಿ ಜೀವ ರಕ್ಷಣೆ ಕಾರ್ಯ ಮಾಡುವ ಮೂಲಕ ಮಾನವೀಯ ಮೌಲ್ಯ ಎತ್ತಿಹಿಡಿದಿದ್ದಾರೆ.ಅರಣ್ಯ, ಕೃಷಿ ಸೇರಿ ಎಲ್ಲ ಬಗೆಯ ಸಮಾಜಮುಖಿ ಕಾರ್ಯಗಳಲ್ಲಿ ಹಿರಿಯ ಜಗದ್ಗುರುಗಳು ತೊಡಗಿಸಿಕೊಂಡಿದ್ದರು.ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಿದರೆ ಬದುಕು ಪರಿಪೂರ್ಣವಾಗಲಿದೆ ಎಂದು ಕಿವಿ ಮಾತು ಹೇಳಿದರು.


ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ಎಚ್.ಎಲ್.ಮಲ್ಲೇಶಗೌಡ ಮಾತನಾಡಿ,ಮಠ ಮಾನ್ಯಗಳು ಸಮಾಜ ಸೇವೆಗೆ ಮೀಸಲಾಗಿದ್ದು ಜನಮಾನಸದ ಅಂಧಕಾರದ ಕತ್ತಲು ಕಳೆಯುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ.ಐವತ್ತು ವರ್ಷಗಳ ಹಿಂದೆ ಆರಂಭವಾದ ಆದಿಚುಂಚನಗಿರಿ ಶ್ರೀಮಠ ಜಗತ್ತಿನೆಲ್ಲಡೆ ಅಕ್ಷರ, ಅರಿವೆ, ಅನ್ನ, ಅನುಕಂಪವನ್ನು ಪರಸರಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಗುಣಗಾನ ಮಾಡಿದರು. ಶಾಸಕ ಕೆ.ಎಂ.ಶಿವಲಿಂಗೇಗೌಡ ಹಿರಿಯ ಜಗದ್ಗುರುಗಳು ಹಾಗೂ ಶ್ರೀಮಠದ ಜತೆಗಿನ ಒಡನಾಟವನ್ನು ಸ್ಮರಿಸಿಕೊಂಡರು.

ಶ್ರೀಶಿವಪುತ್ರನಾಥ ಸ್ವಾಮೀಜಿ, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಆರ್.ಅನಂತಕುಮಾರ್,ಮುಖಂಡ ಜಿ.ಬಿ.ಶಶಿಧರ್, ಹಿರಿಯ ಪತ್ರಕರ್ತ ಹೆಚ್.ಪಿ ಮದನ್‌ಗೌಡ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕಾಟೀಕೆರೆ ಪ್ರಸನ್ನಕುಮಾರ್, ಗಂಡಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೇಟ್ರೋ ಬಾಬು,ಮುಖಂಡರಾದ ವಿಜಯ್ ವಿಕ್ರಂ ಮೋಹನ್ ಕುಮಾರ್, ವಿಜಯ್ ಕುಮಾರ್ ,ಜಿಲ್ಲಾ ವಕ್ಪ್‌ಬೋರ್ಡ್ ಅಧ್ಯಕ್ಷ ಸಿಕಂದರ್, ಕರವೇ ಜಿಲ್ಲಾ ಉಪಾಧ್ಯಕ್ಷ ತುಳಸಿ,ನಗರಾಧ್ಯಕ್ಷ ಕಿರಣ್ ಕುಮಾರ್, ನಗರಸಭೆ ಸದಸ್ಯರಾದ ಜಿ.ಟಿ ಗಣೇಶ್, ಮೇಲಗಿರಿಯಪ್ಪ ,ಆದಿಚುಂಚನಗಿರಿ ಪದವೀ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ಲಿಂಗರಾಜು, ಮುಖ್ಯ ಶಿಕ್ಷಕಿ ಜ್ಞಾನೇಶ್ವರಿ,ದೈಹಿಕ ಶಿಕ್ಷಕ ನಾಗೇಶ್ ಸೇರಿ ಹಲವರು ಹಾಜರಿದ್ದರು. ಬಿ ಜಿ ಎಸ್ ಭಕ್ತವೃಂದ, ಪೀಠಾಭಿಮಾನಿಗಳು,ಆದಿಚುಂಚನಗಿರಿ ಶಾಲಾ,ಕಾಲೇಜು ಆಡಳಿತ ಮಂಡಳಿ, ಪಾಲಕರು,ವಿದ್ಯಾರ್ಥಿಗಳು ನಗರದ ಪ್ರವಾಸಿ ಮಂದಿರದ ಆವರಣದಿಂದ ಡಾ.ಶ್ರೀಬಾಲಗಂಗಾಧರನಾಥ ಶ್ರೀಗಳ ಉತ್ಸವ ಮೂರ್ತಿಯನ್ನು ಮೆರವಣಿಗೆ ಮೂಲಕ ಕರೆತರಲಾಯಿತು.