ಶ್ರವಣಬೆಳಗೊಳ : 12ನೇ ಶತಮಾನದ ಜಗಜ್ಯೋತಿ ಬಸವಣ್ಣನವರು ಲಿಂಗಧಾರಣೆ ಮೂಲಕ ಜಗತ್ತಿನ ಶಾಂತಿಗೆ ಕಾರಣರಾದರು. ಅವರಂತೆ ಸುತ್ತೂರು ಮಠದ ಡಾ. ಶಿವರಾತ್ರಿಶ್ವರ ಸ್ವಾಮೀಜಿ ಮಾರ್ಗದರ್ಶನದಲ್ಲಿ 80 ಸಾವಿರ ಭಕ್ತರಿಗೆ ಶಿವ ದೀಕ್ಷೆ ಮಾಡಲಾಗಿದೆ ಎಂದು ಧಾರ್ಮಿಕ ದತ್ತಿ ಅಧ್ಯಕ್ಷರಾದ ಸೋಮಶೇಖರ ಸ್ವಾಮೀಜಿ ತಿಳಿಸಿದರು.
ಹೋಬಳಿಯ ಮರಿಶೆಟ್ಟಿಹಳ್ಳಿ ಗ್ರಾಮದ ಶ್ರೀ ಬಸವೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಧರ್ಮ ಪ್ರಸಾರ ಹಾಗೂ ಶಿವ ದೀಕ್ಷೆ, ಲಿಂಗ ದೀಕ್ಷೆಯ ಧಾರ್ಮಿಕ ಸಮಾರಂಭದಲ್ಲಿ ಆಶೀರ್ವಚನ ನೀಡಿದರು. ಶಿವರಾತ್ರಿ ದೇಶಿ ಕೇಂದ್ರ ಸ್ವಾಮೀಜಿಗಳು ಮತ್ತ?್ಟು ಪರಿಣಾಮಕಾರಿಯಾಗಿ ಬೇರೆ ಬೇರೆ ರಾಜ್ಯಗಳಲ್ಲೂ ಸಾಮೂಹಿಕ ಲಿಂಗಧಾರಣೆ, ಕರಡಿಗೆ, ದಾರ, ದೇವರನ್ನು ಮಠದ ವತಿಯಿಂದಲೇ ಕೊಡುವ ಮೂಲಕ ಧರ್ಮ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ ಎಂದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಎನ್.ಪರಮೇಶ್ ಮಾತನಾಡಿ ಧರ್ಮದ ಹಾದಿಯಲ್ಲಿ ಸಾಗಿದರೆ ಸಮಾಜದಲ್ಲಿ ಶಾಂತಿ ನೆಮ್ಮದಿ ನೆಲೆಸುತ್ತದೆ ಎಂದರು. ಸುತ್ತೂರು ಮಠ ವಿವಿದೆಡೆ ಧರ್ಮ ಕೇಂದ್ರ ಶಿಕ್ಷಣ ಸಂಸ್ಥೆಗಳನ್ನು ತೆರೆದು ಲಕ್ಷಾಂತರ ಮಕ್ಕಳಿಗೆ ಶಿಕ್ಷಣ, ವಸತಿ, ಊಟ, ವಸ್ತ್ರ ನೀಡಿ ಸನ್ಮಾರ್ಗದಲ್ಲಿ ಮುನ್ನಡೆಸುತ್ತಿದೆ. ಧಾರ್ಮಿಕ ಮನೋಭಾವ ಬೆಳೆಯಲು ಶಿವ ದೀಕ್ಷೆ, ಲಿಂಗ ದೀಕ್ಷೆ ಮಠದಿಂದಲೇ ಆಯೋಜಿಸಲಾಗಿದೆ. ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಸಮಾರಂಭದಲ್ಲಿ ಮುಖಂಡರುಗಳಾದ ಭುವನಹಳ್ಳಿ ಚನ್ನೇಗೌಡ, ಜಗದೀಶ್, ನಂದೀಶ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಯುವ ಘಟಕದ ಉಪಾಧ್ಯಕ್ಷ ಸತೀಶ್, ಲಿಂಗಪ್ಪ, ಉದ್ಯಮಿ ಚನ್ನುರಮ್ಮ, ನಿಂಗಪ್ಪ, ಸ್ವಾಮಿ, ಸಂತೋ?್, ಶಿವು, ಮುತ್ತುರಾಜ್, ಕುಮಾರ್, ಸವಿತಾ, ವಿದ್ಯಾ, ಪ್ರಿಯಾಂಕ ಗ್ರಾಮಸ್ಥರು ಇತರರು ಹಾಜರಿದ್ದರು.