ಜಿಲ್ಲೆ

ಡಾ.ಶಿವಕುಮಾರ ಸ್ವಾಮೀಜಿ ಪುತ್ಥಳಿ ಅನಾವರಣ ನಾಳೆ

ಕಲಬುರಗಿ: ಶಿಕ್ಷಣ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿರುವ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಇದೀಗ ಮತ್ತೊಂದು ಕ್ಷೇತ್ರವನ್ನು ಪರಿಚಯಿಸಲು ನಿರ್ಧರಿಸಿದೆ. ನಡೆದಾಡುವ ದೇವರು ಲಿಂಗೈಕ್ಯ ತುಮಕೂರಿನ ಶ್ರೀ ಡಾ.ಶಿವಕುಮಾರ ಸ್ವಾಮೀಜಿ ಪುತ್ಥಳಿ ಅನಾವರಣ ಮತ್ತು ಇವರದ್ದೇ ಹೆಸರಿನಲ್ಲಿ ಸ್ಕೂಲ್ ಆಫ್ ಆರ್ಕಿಟೆಕ್ಟ್ ಉದ್ಘಾಟನೆ ಶನಿವಾರ ಬೆಳಗ್ಗೆ 11ಕ್ಕೆ ನೆರವೇರಿಸಲಿದೆ.
ಸುತ್ತೂರಿನ ಶ್ರೀ ಡಾ.ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸ್ಕೂಲ್ ಉದ್ಘಾಟಿಸಲಿದ್ದು, ಪುತ್ಥಳಿಯನ್ನು ಸಿದ್ಧಗಂಗಾ ಮಠದ ಪೀಠಾಧಿಪತಿ ಶ್ರೀ ಸಿದ್ಧಲಿಂಗ ಸ್ವಾಮೀಜಿ ಅನಾವರಣ ಮಾಡುವರು. ಶಾಸಕರಾದ ದತ್ತಾತ್ರೇಯ ಪಾಟೀಲ್, ಬಿ.ಜಿ.ಪಾಟೀಲ್ ಇತರರು ಮುಖ್ಯ ಅತಿಥಿಯಾಗಿರುವರು ಎಂದು ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಭೀಮಾಶಂಕರ ಬಿಲಗುಂದಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಂಸ್ಥೆ ಅಧ್ಯಕ್ಷನಾದ ಬಳಿಕ ಡಾ.ಶಿವಕುಮಾರ ಸ್ವಾಮೀಜಿ ಹೆಸರಿನಲ್ಲಿ ವಾಸ್ತುಶಿಲ್ಪ ಶಾಲೆ ಆರಂಭಿಸುವ ಕುರಿತು ಚರ್ಚಿಸಿದಾಗ ಒಳ್ಳೆಯದಾಗಲಿ ಎಂದಿದ್ದರು. ನನ್ನ ಆಶಯದಂತೆ ಅವರ ಹೆಸರನ್ನೇ ಆರ್ಕಿಟೆಕ್ಟ್ ಸಂಸ್ಥೆಗೆ ಇಡಲಾಗಿದೆ. ಅಲ್ಲದೆ ಪಿಡಿಎ ಕಾಲೇಜು ಕ್ಯಾಂಪಸ್ನಲ್ಲಿ ಶ್ರೀಗಳ ಪುತ್ಥಳಿ ಸ್ಥಾಪಿಸಲಾಗಿದೆ ಎಂದರು.
ಡಾ.ಎಸ್.ಎಸ್. ಪಾಟೀಲರಿಗೆ ಜೀವಮಾನದ ಸಾಧಕ, ವಿನಾಯಕರಾವ ಗಾದಾ ಅವರಿಗೆ ಶ್ರೇಷ್ಠ ವರ್ತಕ, ಚರ್ಮರೋಗ ತಜ್ಞ ಡಾ.ಪಿ.ಎಂ. ಬಿರಾದಾರ ಅವರಿಗೆ ಉತ್ತಮ ಸೇವಾ ಸಾಧಕ ಪ್ರಶಸ್ತಿ ಪ್ರದಾನ ನೀಡಲಾಗುವುದು ಎಂದು ತಿಳಿಸಿದರು.
ಸಂಸ್ಥೆ ಆಡಳಿತ ಮಂಡಳಿ ಸದಸ್ಯರಾದ ಡಾ.ಸಂಪತಕುಮಾರ ಲೋಯಾ, ನಿತಿನ್ ಜವಳಿ, ಸತೀಶ ಹಡಗಲಿಮಠ, ಎಂಆರ್ಎಂಸಿ ಡೀನ್ ಡಾ.ಉಮೇಶಚಂದ್ರ, ಡಾ.ಶಿವಕುಮಾರ ಸ್ವಾಮೀಜಿ ಸ್ಕೂಲ್ ಆಫ್ ಆಕರ್ಿಟೆಕ್ಟ್ ಪ್ರಾಚಾರ್ಯ ವಜ್ರಕುಮಾರ್ ಮೆಹತಾ, ಖ್ಯಾತ ವಾಸ್ತು ಶಿಲ್ಪಿ ಬಸವರಾಜ ಖಂಡೇರಾವ್ ಇತರರಿದ್ದರು.

ಎಂಆರ್ಎಂಸಿ ಮೆಡಿಕಲ್ ಕಾಲೇಜಿನಲ್ಲಿ `ಮೆಡಿಕಲ್ ಸ್ಕಿಲ್ಸ್ ಲ್ಯಾಬ್ ಮತ್ತು ಸಿಮ್ಯೂಲೇಷನ್ ಸೆಂಟರ್' ಅನ್ನು 8ರಂದು ಬೆಳಗ್ಗೆ 11.15ಕ್ಕೆ ಡಿಸಿಎಂ ಡಾ.ಅಶ್ವತ್ಥ ನಾರಾಯಣ ಉದ್ಘಾಟಿಸುವರು. ಮುಂದಿನ ದಿನಗಳಲ್ಲಿ ಸೈಬರ್ ಕ್ರೈಂ ಕೋಸರ್್ ಪಿಡಿಎ ಕಾಲೇಜಿನಲ್ಲಿ ಅರಂಭಿಸಲು ಉದ್ದೇಶಿಸಲಾಗಿದೆ.
| ಡಾ.ಭೀಮಾಶಂಕರ ಬಿಲಗುಂದಿ
ಎಚ್ಕೆಇ ಸಂಸ್ಥೆ ಅಧ್ಯಕ್ಷ

ಹೃದಯಾಘಾತ, ಅಪಘಾತ ಇತರ ತುರ್ತು ಸಂದರ್ಭದಲ್ಲಿ ಪ್ರಾಥಮಿಕ ಚಿಕಿತ್ಸೆ ಹೇಗೆ ನೀಡಬೇಕು ಎಂಬ ಬಗ್ಗೆ ಆಸಕ್ತರಿಗೆ ತರಬೇತಿ ನೀಡಲು `ಮೆಡಿಕಲ್ ಸ್ಕಿಲ್ಸ್ ಲ್ಯಾಬ್ ಮತ್ತು ಸಿಮ್ಯೂಲೇಷನ್ ಸೆಂಟರ್' ಆರಂಭಿಸಲಾಗಿದೆ. ಮೊದಲ ಹಂತದಲ್ಲಿ ಪ್ಯಾರಾ ಮೆಡಿಕಲ್ ಸಿಬ್ಬಂದಿಗೆ ತರಬೇತಿ ನೀಡಿದ ಬಳಿಕ ಪೊಲೀಸರು, ಶಿಕ್ಷಕರು, ವಿದ್ಯಾಥರ್ಿಗಳು ಹೀಗೆ ಆಸಕ್ತರೆಲ್ಲರಿಗೂ ನೀಡಲಾಗುವುದು.
| ಡಾ.ಉಮೇಶಚಂದ್ರ
ಎಂಆರ್ಎಂಸಿ ಡೀನ್