ಮೈಸೂರು: ನಗರದ ಸಮತಾ ಅಧ್ಯಯನ ಕೇಂದ್ರವು ಸ್ಥಾಪಕ ಅಧ್ಯಕ್ಷೆ ಡಾ.ವಿಜಯಾ ದಬ್ಬೆ ಅವರ ನೆನಪಿನಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ರಾಜ್ಯಮಟ್ಟದ ಕವನ/ ಕಥಾ ಸ್ಪರ್ಧೆ -2023 ರಲ್ಲಿ ಬೆಂಗಳೂರು ವಿಜಯಾ ಟೀಚರ್ಸ್ ಕಾಲೇಜಿನ ಎಂ.ಸಿ.ಜಗದೀಶ (ಕವನ), ಉಜಿರೆ ಎಸ್‌ಡಿಎಂ ಕಾಲೇಜಿನ ಜಿ.ಎಂ.ಸಂಜಯ್ (ಕಥೆ) ಪ್ರಥಮ ಬಹುಮಾನ ಪಡೆದಿದ್ದಾರೆ.
ಕವನ ವಿಭಾಗದಲ್ಲಿ ಕಾಸರಗೋಡಿನ ಕೇರಳ ಕೇಂದ್ರೀಯ ವಿವಿಯ ಕೆ.ಸ್ವಾತಿ, ಸಾಗರ ತಾಲೂಕು ಹೊಸಕೊಪ್ಪದ ಎಚ್.ಜಿ.ಅಭಿನಂದನ್ , ಕಥಾ ವಿಭಾಗದಲ್ಲಿ ಸಕಲೇಶಪುರ ಜೆಎಸ್‌ಎಸ್ ಮಹಾವಿದ್ಯಾಲಯದ ಶಿವಶಂಕರ ಕಡದಿನ್ನಿ, ಕೇರಳ ಕೇಂದ್ರೀಯ ವಿವಿಯ ಆರ್. ನವ್ಯಾ ಕ್ರಮವಾಗಿ ದ್ವಿತೀಯ, ತೃತೀಯ ಬಹುಮಾನ ಪಡೆದಿದ್ದಾರೆ.
ಪ್ರೋತ್ಸಾಹಕರ ಬಹುಮಾನ ಪಡೆದವರು
ಕವನ ವಿಭಾಗ: ಪಿ.ರಂಜಿತಾ (ಕೇರಳ ಕೇಂದ್ರೀಯ ವಿವಿ), ಜಿ.ಎಂ.ಸಂಜಯ್ (ಉಜಿರೆ ಎಸ್‌ಡಿಎಂ ಕಾಲೇಜು), ಚೇತನ್ (ಕುವೆಂಪುನಗರ ಪ್ರ.ದ. ಕಾಲೇಜು,ಮೈಸೂರು ), ತರುಣ್ ವಿಶ್ವಜಿತ್ (ಚಿಕ್ಕಬಳ್ಳಾಪುರ ಪ್ರ.ದ.ಕಾಲೇಜು), ಎನ್.ಲಾವಣ್ಯ (ರಾಗಲಕುಪ್ಪೆ, ಎಚ್.ಡಿ.ಕೋಟೆ ತಾ.), ಲಕ್ಷ್ಮೀಶ್ರೀಶೈಲ ಕಾತ್ರಾಳ (ಹೊನವಾಡ, ವಿಜಯಪುರ ಜಿಲ್ಲೆ), ಆನಂದಕುಮಾರ್ (ಸಿದ್ಧಾರ್ಥನಗರ ಪ್ರ.ದ. ಕಾಲೇಜು, ಮೈಸೂರು ), ಬಿ.ಎಸ್.ಕಿಶನ್‌ಗೌಡ (ಮೂಡುಬಿದಿರೆ ಆಳ್ವಾಸ್ ಕಾಲೇಜು), ಶಿಲ್ಪಾ ಶ್ರೀನಿವಾಸ ರಾಜು (ಸಂತ ಫ್ರಾನ್ಸಿಸ್ ಕಾಲೇಜು, ಕೋರಮಂಗಲ), ಸುಮಾ ಎಂ.(ಸುರಾನಾ ಕಾಲೇಜು, ಪೀಣ್ಯಾ ಕ್ಯಾಂಪಸ್).
ಕಥಾ ವಿಭಾಗ: ಸಾಧನ ಕೆ.ಜೋಷಿ (ಬಿಜಿಎಸ್ ಕಾಲೇಜು, ಗುರುಪುರ, ಶಿವಮೊಗ್ಗ), ಸಿದ್ಧಾರೂಢ ಗುಗ್ಗರಿ (ಎಸ್‌ಆರ್‌ಎಫ್ ಜಿಸಿ ಕಾಲೇಜು, ಬೆಳಗಾವಿ), ದೇವಿಕಾ ಪಿ.( ಕೇರಳ ಕೇಂದ್ರೀಯ ವಿವಿ, ಕಾಸರಗೋಡು), ಅಂಕಿತಾ ವಿ.ಎ.(ಬಿಜಿಎಸ್ ಪಿಯು ಕಾಲೇಜು, ಗೌರಿಬಿದನೂರು), ವಿನಾಯಕ ಸ.ಹಿರೇಮಠ (ಬಿವಿವಿ ಸಂಘ ಶಿಕ್ಷಣ ಮಹಾವಿದ್ಯಾಲಯ, ಬಾಗಲಕೋಟೆ), ಪವಿತ್ರ ಎಸ್.ಪಂಚನ್ನವರ್ (ಐಎಸ್ ಯಾದವಾಡ ಪ್ರ.ದ.ಕಾಲೇಜು, ರಾಮದುರ್ಗ, ಬೆಳಗಾವಿ).
ಡಾ.ಮೀನಾ ಮೈಸೂರು, ಡಾ.ಸಂತೋಷ್ ಚೊಕ್ಕಾಡಿ, ಡಾ.ಎಂ.ಎಸ್.ವೇದಾ (ಕವನ), ಡಾ.ಸುಮಾ ಎಂಬಾರ್, ಡಾ.ಚಿಕ್ಕಮಗಳೂರು ಗಣೇಶ್, ಡಾ.ಎಚ್.ಎಂ. ಕಲಾಶ್ರೀ (ಕಥಾ ವಿಭಾಗ) ತೀರ್ಪುಗಾರರಾಗಿದ್ದರು. ಜೂನ್ 1ರಂದು ಬಹುಮಾನ ವಿತರಣಾ ಸಮಾರಂಭ ಮೈಸೂರಿನಲ್ಲಿ ನಡೆಯಲಿದೆ ಎಂದು ಸಮತಾ ಅಧ್ಯಯನ ಕೇಂದ್ರದ ಅಧ್ಯಕ್ಷೆ ಸಬಿಹಾ ಭೂಮಿಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಹುಮಾನ ಮೊತ್ತ: ಪ್ರಥಮ 5 ಸಾವಿರ ರೂ., ದ್ವಿತೀಯ 3 ಸಾವಿರ ರೂ., ತೃತೀಯ 2 ಸಾವಿರ ರೂ. ಮತ್ತು ತೀರ್ಪುಗಾರರು ಮೆಚ್ಚಿದ 10 ಕತೆಗಳಿಗೆ ತಲಾ 1 ಸಾವಿರ ರೂ. ಪ್ರೋತ್ಸಾಹಕರ ಬಹುಮಾನ ನೀಡಲಾಗುವುದು. ಅಲ್ಲದೆ, ವಿಜೇತರು ಮತ್ತು ಪ್ರೋತ್ಸಾಹಕರ ಬಹುಮಾನ ಪಡೆದವರಿಗೆ ಮೇ ಕೊನೆಯ ವಾರದಲ್ಲಿ ಒಂದು ದಿನದ ಕಾವ್ಯ ಮತ್ತು ಕಥಾಕಮ್ಮಟ ನಡೆಸಲಾಗುವುದು ಎಂದು ತಿಳಿಸಿದ್ದಾರೆ.