ಜಿಲ್ಲೆ

ಡಾ.ರಾಜ್ ಕನ್ನಡ ಚಿತ್ರರಂಗದ ಧೃವತಾರೆ

ಚಿತ್ರದುರ್ಗ: ಕನ್ನಡ ಚಿತ್ರರಂಗದ ಧೃವತಾರೆ ಡಾ.ರಾಜ್‌ಕುಮಾರ್ ನಟನೆ ಹಾಗೂ ಸಂಗೀತ ಎರಡಲ್ಲೂ ಸಿದ್ಧಹಸ್ತರು. ಅವರು ನಾಡಿಗೆ ನೀಡಿದ ಕೊಡುಗೆ ಅವಿಸ್ಮರಣೀಯ ಎಂದು ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಆರ್.ಮಾರುತಿ ಬಣ್ಣಿಸಿದರು.

ನಟಸಾರ್ವಭೌಮ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಅಂಗವಾಗಿ ಇಲಾಖೆಯ ಕಚೇರಿಯಲ್ಲಿ ಬುಧವಾರ ಸರಳವಾಗಿ ನಡೆದ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿ ಹಿನ್ನಲೆಯಲ್ಲಿ ಜಯಂತಿ ಸರಳವಾಗಿ ಆಚರಿಸಲಾಗುತ್ತಿದೆ ಎಂದರು.

ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ದಿನೇಶ ಗೌಡಗೆರೆ, ಪತ್ರಕರ್ತರಾದ ಹರಿಯಬ್ಬೆ ಸಿ ಹೆಂಜಾರಪ್ಪ, ಲಕ್ಷ್ಮಣ್, ಕುಮಾರಸ್ವಾಮಿ, ರವಿ ಮಲ್ಲಾಪುರ, ತಿಪ್ಪೇಸ್ವಾಮಿ, ಮಾರುತಿ, ಛಾಯಾಗ್ರಾಹಕ ವಿ.ಚಂದ್ರಪ್ಪ, ಇಲಾಖೆ ಸಿಬ್ಬಂದಿ ಜಿ.ವೆಂಕಟೇಶ್, ಪಿ.ಎಂ.ವೇಣುಗೋಪಾಲ, ಎಸ್.ಚಂದ್ರಶೇಖರ್, ಎಂ.ಜೆ.ಬೋರೇಶ, ಆರ್.ತಿಮ್ಮಶೆಟ್ಟಿ, ಅಂಜಿನಮೂರ್ತಿ, ಸಿ.ಕಾಟೇಶ್, ನಿವೃತ್ತ ನೌಕರ ಎಚ್.ತಿಪ್ಪಯ್ಯ ಇತರರಿದ್ದರು.