ಚಿತ್ರದುರ್ಗ: ಹೈದರಾಬಾದ್ ಅಕ್ಷಯ ಪ್ರಾರ್ಥನಾ ಫೌಂಡೇಶನ್ ಕೊಡುವ ರಾಷ್ಟ್ರಮಟ್ಟದ ಭಾರತ ಸೇವಾರತ್ನ ಪ್ರಶಸ್ತಿಗೆ ತಾಲೂಕಿನ ಕಡ್ಲೆಗುದ್ದು ಗ್ರಾಮದ ಶ್ರೀ ಆಂಜನೇಯ ಸ್ವಾಮಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಡಾ. ಮಹೇಶ್ ಆಯ್ಕೆಯಾಗಿದ್ದಾರೆ. ಡಾ. ಮಹೇಶ್ ಅವರ ಶೈಕ್ಷಣಿಕ ಹಾಗೂ ಸಾಮಾಜಿಕ ಸೇವೆ ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಡಿ.29 ರಂದು ಬೆಳಗ್ಗೆ 10.30ಕ್ಕೆ ಬೆಂಗಳೂರಿನ ಗಾಂಧಿಭವನದ ಬಾಪು ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಫೌಂಡೇಶನ್ ಅಧ್ಯಕ್ಷೆ ಬಿ. ಮಾದೇವಿ(ಸಿಂಧು ) ತಿಳಿಸಿದ್ದಾರೆ.
----