ಜಿಲ್ಲೆ

ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಣೆ

ಕೆ.ಆರ್.ಸಾಗರ: ಕೆ.ಆರ್.ಸಾಗರ ಗ್ರಾಮ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಿಸಲಾಯಿತು. ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಗ್ರಾ.ಪಂ. ಅಧ್ಯಕ್ಷೆ ಜಯಂತಿ ಕಾಳಪ್ಪ ಪುಷ್ಪಾರ್ಚನೆ ಮಾಡಿದರು.

ಸದಸ್ಯ ನಾಗೇಂದ್ರ ಕುಮಾರ್ ಮಾತನಾಡಿ, ಬಾಬಾ ಸಾಹೇಬ್ ಅವರು ಸಂವಿಧಾನದಲ್ಲಿ ಎಲ್ಲರಿಗೂ ಸಮಾನತೆ ನೀಡಿದ್ದು, ಇಂದಿನ ದಿನದಲ್ಲಿ ಹಿಂದುಳಿದ ಜನಾಂಗ ಸಮಾಜದಲ್ಲಿ ಉತ್ತಮ ಸ್ಥಾನ ಪಡೆಯಲು ಸಂವಿಧಾನ ಕಾರಣವಾಗಿದೆ. ಆದ್ದರಿಂದ ನಾವು ಸಂವಿಧಾನನ್ನು ಸಮರ್ಪಕವಾಗಿ ಬಳಸಿಕೊಳ್ಳ ಬೇಕಿದೆ ಎಂದರು.

ಉಪಾಧ್ಯಕ್ಷ ಪಾಪಣ್ಣ, ಸದಸ್ಯರಾದ ನರಸಿಂಹ, ವಸಂತಕುಮಾರ್, ಪಿಡಿಒ ಬಸವರಾಜು, ಕಾರ್ಯದರ್ಶಿ ರಘುಜಿ, ಲೆಕ್ಕ ಸಹಾಯಕ ರವಿ, ದಲಿತ ಮುಖಂಡ ನಾಗರಾಜು, ವೆಂಕಟ ಸುಬ್ಬಯ್ಯ, ಗ್ರಾ.ಪಂ. ಸಿಬ್ಬಂದಿ ಇದ್ದರು.