ಜಿಲ್ಲೆ

ಡಾ.ಫ.ಗು.ಹಳಕಟ್ಟಿಯವರ ಪಾತ್ರ ಆದರ್ಶವಾದುದು

ಬಳ್ಳಾರಿ : ವಚನಕಾರ ಡಾ.ಫ.ಗು.ಹಳಕಟ್ಟಿ ಅವರು ಶತಮಾನಗಳ ವಚನ ಸಾಹಿತ್ಯವನ್ನು ಸಂರಕ್ಷಿಸಿಟ್ಟು, ಇಂದಿನ ಪೀಳಿಗೆಗೆ ಬಿತ್ತರಿಸಿರುವ ಪಾತ್ರ ಆದರ್ಶಮಯವಾಗಿದೆ ಎಂದು ಪಾಲಿಕೆ ಮೇಯರ್ ಮುಲ್ಲಂಗಿ ನಂದೀಶ ಹೇಳಿದರು.
ನಗರದ ಹೊಂಗಿರಣದ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಹಯೋಗದೊಂದಿಗೆ ಗುರುವಾರ ನಡೆದ ಡಾ.ಫ.ಗು. ಹಳಕಟ್ಟಿಯವರ ಜನ್ಮದಿನ ಅಂಗವಾಗಿ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಡಾ.ಫ.ಗು. ಹಳಕಟ್ಟಿಯವರು ಕನ್ನಡ ವಚನ ಸಾಹಿತ್ಯದ ಸರ್ವೋತೋಮುಖ ಬೆಳವಣಿಗೆಗೆ ಬುನಾದಿ ಹಾಕಿದವರು. ಮಹಾನರ ವಚನಗಳನ್ನು ಸಂರಕ್ಷಿಸಿ ಇಂದಿನ ಪೀಳಿಗೆಗೆ ಬಿತ್ತರಿಸಿದವರು ಎಂದರು.
ರಾಷ್ಟ್ರೀಯ ಬಸವ ದಳದ ಕಾರ್ಯದರ್ಶಿ ಜಿ.ಆರ್.ನಾಗರಾಜ ಮಾತನಾಡಿ, ಡಾ.ಫ.ಗು ಹಳಕಟ್ಟಿಯವರು ವಚನಸಾಹಿತ್ಯದ ಮಹಾನ್ ವಚನಕಾರರಲ್ಲಿ ಒಬ್ಬರಾಗಿದ್ದು, ಅವರ ವಚನಗಳು ಕನ್ನಡ ಸಾಹಿತ್ಯ ಬೆಳೆವಣಿಗೆಗೆ ಸಹಕಾರಿಯಾಗಿವೆ. 12 ಶತಮಾನದ ವಚನ ಯುಗದಲ್ಲಿ ಬಿಡಿ-ಬಿಡಿಯಾಗಿದ್ದ ವಚನ ಸಾಹಿತ್ಯವನ್ನು ಒಗ್ಗೂಡಿಸಿ, ಕನ್ನಡ ವಚನ ಸಾಹಿತ್ಯ ರಕ್ಷಣೆ ಮಾಡುವುದರಲ್ಲಿ ಅವರ ಪಾತ್ರ ಬಹುಮುಖ್ಯವಾಗಿದೆ ಎಂದರು.