ಬೈಲಹೊಂಗಲ: ಶಿಕ್ಷಣ, ಆರೋಗ್ಯ ಕ್ಷೇತ್ರದ ಅಭಿವೃದ್ಧಿಯ ಹರಿಕಾರರಾಗಿ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ನಾಡಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಕೆಎಲ್‌ಇ ನಿರ್ದೇಶಕ ಡಾ.ವಿ.ಐ. ಪಾಟೀಲ ಹೇಳಿದರು.
ಪಟ್ಟಣದ ಕೆಎಲ್‌ಇ ಸಂಸ್ಥೆಯ ಪಾಲಿಟೆಕ್ನಿಕ್ (ಡಿಪ್ಲೊಮಾ) ಕಾಲೇಜಿನಲ್ಲಿ ಡಾ.ಪ್ರಭಾಕರ ಕೋರೆ ಜನ್ಮದಿನದ ಪ್ರಯುಕ್ತ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷರಾಗಿ ಡಾ.ಕೋರೆ ಸಮಾಜಮುಖಿ ಸೇವೆ ಸಲ್ಲಿಸಿದ್ದಾರೆ ಎಂದರು.
ಕೆಎಲ್‌ಇ ಉಪಾಧ್ಯಕ್ಷ ಬಿ.ಎಸ್.ತಟವಟಿ ಮಾತನಾಡಿ, ಡಾ.ಪ್ರಭಾಕರ ಕೋರೆ ಬಹುಮುಖಿ ವ್ಯಕ್ತಿತ್ವ ಎಲ್ಲರಿಗೂ ಮಾದರಿ ಎಂದರು. ಪ್ರಾಚಾರ್ಯ ಪ್ರೊ. ಶ್ರೀಧರ ನಿರಡಿ ಮಾತನಾಡಿ, ಡಾ. ಕೋರೆ ಕೆಎಲ್‌ಇ ಮೂಲಕ ಅಪ್ಪಟ ಗ್ರಾಮೀಣ ಪ್ರದೇಶದಲ್ಲೂ ಉನ್ನತ ಶಿಕ್ಷಣ ಮತ್ತು ಆರೋಗ್ಯ ಸೇವೆ ನೀಡಿದ್ದಾರೆ ಎಂದರು.
ರವೀಂದ್ರ ಪಟ್ಟಣಶೆಟ್ಟಿ ಮಾತನಾಡಿ, ಕೆಎಲ್‌ಇ ಮೂಲಕ ಡಾ. ಪ್ರಭಾಕರ ಕೋರೆ ಶೈಕ್ಷಣಿಕ ಕ್ರಾಂತಿ ಮಾಡಿದ್ದಾರೆ ಎಂದರು.
ಪ್ರಾಚಾರ್ಯ ಎಸ್.ಬಿ. ತಟವಟಿ, ವಿ.ಎಸ್. ಪಾಟೀಲ ಮಾತನಾಡಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆ ರೋಗಿಗಳಿಗೆ ಹಣ್ಣು ಮತ್ತು ಬಿಸ್ಕಿಟ್, ಬ್ರೆಡ್ ವಿತರಿಸಲಾಯಿತು.
ಡಾ.ಪ್ರವೀಣ ಕುಲಕರ್ಣಿ, ಸಿ.ಕೆ.ಮೆಕ್ಕೆದ, ಆನಂದ ಮೂಗಿ, ಉಪನ್ಯಾಸಕರಾದ ಐ.ಎನ್.ಹಾದಿಮನಿ, ಎಸ್.ಎಂ. ಕಳಸಣ್ಣವರ, ಎಸ್.ಎಸ್.ಶರನಪ್ಪನವರ, ಆರ್.ಎನ್.ವಾರಿ, ವಿ.ಎ.ಬಡಿಗೇರ, ಎಂ.ಎ.ಸವದತ್ತಿಮಠ, ಎಂ. ಬಿ. ಕಡಬಿ, ಎಸ್.ಆರ್.ಪಾಟೀಲ್, ವಿ.ಆರ್.ಶಿದ್ನಾಳ, ಎಸ್.ಎಸ್. ಬಿಳ್ಳೂರ, ಆರ್.ಪಿ. ದೊಡ್ಡಹುಬ್ಬಳ್ಳಿ, ಎಸ್.ಎಸ್. ಹಳ್ಳೂರ, ಎ.ಜಿ. ಬಡಿಗೇರ, ಆರ್. ಸಿ. ಶಿವಸಂಗಯ್ಯನವರಮಠ, ಎಸ್. ಎಸ್.ಶಹಾಪೂರ, ವಿ.ವಿ. ಪಾಟೀಲ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.