ಹಾರೂಗೇರಿ ಪಟ್ಟಣದ ಆಶೀರ್ವಾದ ನರ್ಸಿಂಗ್ ಮತ್ತು ವೆಂಟರ್ನಿಟಿ ಹೋಮ್ ಆವರಣದಲ್ಲಿ ಬುಧವಾರ ಆಮ್ಲಜನಕ ತಯಾರಿಕೆ ಘಟಕ ಉದ್ಘಾಟಿಸಲಾಯಿತು. ಡಾ.ಎಲ್.ಎಸ್. ಜಂಬಗಿ, ಶಾಸಕ ಪಿ.ರಾಜೀವ್ ಇತರರು ಇದ್ದರು. 
ಜಿಲ್ಲೆ

ಡಾ.ಜಂಬಗಿ ಕಾರ್ಯ ಶ್ಲಾಘನೀಯ

ಹಾರೂಗೇರಿ: ಪಟ್ಟಣದ ಡಾ.ಎಲ್.ಎಸ್.ಜಂಬಗಿ ಹಾಗೂ ವರ್ಷಾ ಎಲ್.ಜಂಬಗಿ ಅವರ ಆಶೀರ್ವಾದ ನರ್ಸಿಂಗ್ ಮತ್ತು ವೆಂಟರ್ನಿಟಿ ಹೋಮ್ ಆವರಣದಲ್ಲಿ ಬುಧವಾರ ಆಮ್ಲಜನಕ ಉತ್ಪಾದನಾ ಘಟಕ ಉದ್ಘಾಟಿಸಲಾಯಿತು. ಡಾ.ಎಲ್.ಎಸ್. ಜಂಬಗಿ ಮಾತನಾಡಿ, ಘಟಕದಲ್ಲಿ ಒಂದು ದಿನಕ್ಕೆ 6 ಜಂಬೋ ಆಕ್ಸಿಜನ್ ಸಿಲಿಂಡರ್ ಭರ್ತಿಯಾಗುವಷ್ಟು ಆಮ್ಲಜನಕ ಉತ್ಪಾದಿಸಬಹುದು. ಆಕ್ಸಿಜನ್ ಸಂಪೂರ್ಣವಾಗಿ ನೈಸರ್ಗಿಕವಾಗಿದೆ.

ರಾಯಬಾಗ ತಾಲೂಕಿನ ಮೊದಲ ಘಟಕವಾಗಿದ್ದು, 18 ರೋಗಿಗಳಿಗೆ ನಿರಂತರ ಪೂರೈಕೆ ಮಾಡಬಹುದು ಎಂದರು. ಶಾಸಕ ಪಿ.ರಾಜೀವ್ ಮಾತನಾಡಿ, ಎಂಥದ್ದೇ ಕಾಯಿಲೆಯಾದರೂ ಚಿಕಿತ್ಸೆಯ ಮೂಲಕ ಗುಣಪಡಿಸುವ ಜಂಬಗಿ ಅವರು ಆಕ್ಸಿಜನ್ ಘಟಕ ಸ್ಥಾಪಿಸಿರುವುದು ಶ್ಲಾಘನೀಯ.ಸಂಭವನೀಯ ಮೂರನೆಯ ಅಲೆ ಎದುರಿಸಲು ಇದೊಂದು ಉತ್ತಮ ಸಿದ್ಧತೆ ಎಂದರು. ಡಾ.ಡಿ.ಪಿ.ಜೋಶಿ, ಡಾ.ಪ್ರಶಾಂತ ರಘುಶೆಟ್ಟಿ, ಡಾ.ಪ್ರಶಾಂತ ಪಾಟೀಲ, ಡಾ.ಆರ್.ಸಿ.ಗುರವ, ಡಾ.ಪಿ.ಬಿ.ಮೋರ್ಡಿ, ಡಾ.ಆಶೀಫಲಿ ಡೋಂಗರಗಾವ, ಉಮೇಶ ಶಿಂಗೆ, ಮಹಾಂತೇಶ ಮಾವಿನಕಟ್ಟಿ ಉಪಸ್ಥಿತರಿದ್ದರು.