ಕಮಲನಗರ: ತಾಲೂಕಿನ ಖೇಡ ಸಂಗಮದ ನೀಲಾಂಬಿಕೆ ಆಶ್ರಮದಲ್ಲಿ ಫೆ.೯ರಂದು ಲಿಂ.ಡಾ.ಚನ್ನಬಸವ ಪಟ್ಟದ್ದೇವರ ಮೂರ್ತಿ ಅನಾವರಣ, ಮನೆಯಲ್ಲಿ ಮಹಾಮನೆ ಹಬ್ಬ ಮತ್ತು ಡಾ.ಮಹಾದೇವಮ್ಮ ತಾಯಿ ಅವರ ದಿವ್ಯಾಂಗ ದೀಪ್ತಿ ಅಭಿನಂದನಾ ಗ್ರಂಥದ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ ಎಂದು ಬಸವಕಲ್ಯಾಣ ಅನುಭವ ಟ್ರಸ್ಟ್ನ ಅಧ್ಯಕ್ಷರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ನುಡಿದರು.
ಖೇಡ ಸಂಗಮ ಗ್ರಾಮದ ನೀಲಾಂಬಿಕೆ ಆಶ್ರಮದಲ್ಲಿ ಶನಿವಾರ ಪೂಜ್ಯರ ಸಾನ್ನಿಧ್ಯದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸಮಾರಂಭದ ಸ್ವಾಗತ ಸಮಿತಿ ಅಧ್ಯಕ್ಷರಾಗಿ ವರ್ಷಾ ಓಂಪ್ರಕಾಶ ಬಿರಾದಾರ ಅವರನ್ನು ಸರ್ವಸಮ್ಮತ ಆಯ್ಕೆ ಮಾಡಲಾಗಿದೆ. ಮೆರವಣಿಗೆ, ಪ್ರಚಾರ, ಪ್ರಸಾದ ಮತ್ತು ಅತಿಥಿಗಳಿಗೆ ಸ್ವಾಗತ ಮತ್ತು ಮೆರವಣಿಗೆ ಸಮಿತಿಗಳನ್ನು ಶೀಘ್ರದಲ್ಲಿ ರಚಿಸಲಾಗುವುದು. ಕಾರ್ಯಕ್ರಮದ ಯಶಸ್ಸಿಗೆ ಭಕ್ತರು ಸಹಕರಿಸಬೇಕು ಎಂದು ಹೇಳಿದರು.
ಭಾಲ್ಕಿ ಹಿರೇಮಠದ ಪೀಠಾಧಿಕಾರಿ ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿ, ತ್ರಿವೇಣಿ ನದಿಗಳ ಸಂಗಮ ಕ್ಷೇತ್ರದಲ್ಲಿ ಪೂಜ್ಯರ ಮೂರ್ತಿ ಅನಾವರಣ ಕಾರ್ಯಕ್ರಮ ನಡೆಯುತ್ತಿರುವುದು ಅತ್ಯಂತ ಸಂತಸ ತಂದಿದೆ ಎಂದರು.
ನೀಲಾಂಬಿಕೆ ಆಶ್ರಮದ ಡಾ.ಮಹಾದೇವಮ್ಮ ತಾಯಿ ಮಾತನಾಡಿದರು.
ಶರಣಾಂಬಿಕೆ ತಾಯಿ, ನೀಲಾಂಬಿಕೆ ವೀರೇಂದ್ರ ಬಿರಾದಾರ, ಡಾ.ಧನರಾಜ ರಾಗಾ, ವೈಜಿನಾಥ ರಾಜಗೀರ ಮತ್ತು ಶಿವಗಂಗಾ ಮಾತನಾಡಿ ಸಲಹೆ ನೀಡಿದರು. ಅನೀಲ ಹೊಳಸಮುದ್ರೆ, ಶಿವಲಿಂಗಪ್ಪ ದಾನಾ, ಓಂಪ್ರಕಾಶ ಬಿರಾದಾರ, ಚನ್ನಬಸವ ಘಾಳೆ, ಪ್ರಭುರಾವ ಕಳಸೆ, ನೀಲಕಂಠ ಬಿರಾದಾರ, ವಿಶ್ವನಾಥಪ್ಪ ಬಿರಾದಾರ, ಸಿದ್ದಯ್ಯ ಕವಡಿಮಠ, ತಾನಾಜಿ ಬೆಳಕಟ್ಟೆ, ಅನಿಲ ಹೊಳಸಮುದ್ರೆ, ಶರಣಪ್ಪ ಚಿಟಮೆ ಇತರರಿದ್ದರು. ಸಂಜುಕುಮಾರ ಜುಮ್ಮಾ ಸ್ವಾಗತಿಸಿದರು. ಸಂಜುಕುಮಾರ ಮೆಂಗಾ ನಿರೂಪಣೆ ಮಾಡಿದರು.